ಕೊಪ್ಪಳದಲ್ಲಿ 758 ಅಪೌಷ್ಟಿಕ ಮಕ್ಕಳನ್ನ ಗುರುತಿಸಲಾಗಿದೆ; ಜಿಲ್ಲಾ ಪಂಚಾಯತಿ ಸಿಇಒ ರಘುನಂದನ್ ಮೂರ್ತಿ

| Updated By: sandhya thejappa

Updated on: Jun 27, 2021 | 11:12 AM

ಜಿಲ್ಲೆಯಲ್ಲಿ ಮಕ್ಕಳ ತಜ್ಞ ವೈದ್ಯರ ಕೊರತೆ ತೀವ್ರವಾಗಿದೆ. ಲಭ್ಯವಿರುವ ವೈದ್ಯರಿಂದಲೇ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇದೆ. ಜಿಲ್ಲೆಯಲ್ಲಿ ಮೇ ಅಂತ್ಯಕ್ಕೆ ಅಂಗನವಾಡಿ ಕೇಂದ್ರದಲ್ಲಿ ಸಾಮಾನ್ಯ 1,32,734 ಮಕ್ಕಳು, ಸಾಧಾರಣ 30,273 ಮಕ್ಕಳಿದ್ದು, ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 758 ಮಕ್ಕಳನ್ನು ಗುರುತಿಸಿದೆ.

ಕೊಪ್ಪಳದಲ್ಲಿ 758 ಅಪೌಷ್ಟಿಕ ಮಕ್ಕಳನ್ನ ಗುರುತಿಸಲಾಗಿದೆ; ಜಿಲ್ಲಾ ಪಂಚಾಯತಿ ಸಿಇಒ ರಘುನಂದನ್ ಮೂರ್ತಿ
ಸಾಂದರ್ಭಿಕ ಚಿತ್ರ
Follow us on

ಕೊಪ್ಪಳ: ಜಿಲ್ಲೆಯಲ್ಲಿ ಅಪೌಷ್ಟಿಕತೆ ಮಕ್ಕಳನ್ನು ಬೆಂಬಿಡದೆ ಕಾಡುತ್ತಿದೆ. ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ತಜ್ಞರ ವರದಿ ಹಿನ್ನೆಲೆ ಜಿಲ್ಲಾಡಳಿತ ಈಗಲೇ ತಯಾರಿ ಆರಂಭಿಸಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಆರೈಕೆಗೆ ಜಿಲ್ಲಾಡಳಿತ ವಿಶೇಷ ಯೋಜನೆ ರೂಪಿಸಿದೆ. 0-6 ವಯಸ್ಸಿನ ಮಕ್ಕಳಿಗೆ ಕೊರೊನಾ ಬರದಂತೆ ಎಚ್ಚರ ವಹಿಸಲು ಪಾಲಕರಿಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ದೊಡ್ಡ ಮಕ್ಕಳಿಗೆ ಸ್ವಲ್ಪ ತಿಳುವಳಿಕೆ ಮೂಡಿರುತ್ತದೆ. ಜೊತೆಗೆ ಆರೋಗ್ಯವಂತ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಚಿಕಿತ್ಸೆಗೆ ಸ್ಪಂದಿಸಲಿದ್ದಾರೆ. ಬೇಗ ಗುಣಮುಖರಾಗುವ ಶಕ್ತಿ ಹೊಂದಿರುತ್ತಾರೆ. ಆದರೆ ಅಪೌಷ್ಟಿಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅಂಥಹ ಮಕ್ಕಳ ಬಗ್ಗೆ ಈಗಿನಿಂದಲೇ ಜಾಗೃತಿ ವಹಿಸಬೇಕಾಗಿದೆ.

ಜಿಲ್ಲೆಯಲ್ಲಿ ಮಕ್ಕಳ ತಜ್ಞ ವೈದ್ಯರ ಕೊರತೆ ತೀವ್ರವಾಗಿದೆ. ಲಭ್ಯವಿರುವ ವೈದ್ಯರಿಂದಲೇ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇದೆ. ಜಿಲ್ಲೆಯಲ್ಲಿ ಮೇ ಅಂತ್ಯಕ್ಕೆ ಅಂಗನವಾಡಿ ಕೇಂದ್ರದಲ್ಲಿ ಸಾಮಾನ್ಯ 1,32,734 ಮಕ್ಕಳು, ಸಾಧಾರಣ 30,273 ಮಕ್ಕಳಿದ್ದು, ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 758 ಮಕ್ಕಳನ್ನು ಗುರುತಿಸಿದೆ. ಕನಕಗಿರಿ ತಾಲೂಕಿನಲ್ಲಿ 279, ಕೊಪ್ಪಳ 78, ಗಂಗಾವತಿ 170, ಕುಷ್ಟಗಿ 66, ಯಲಬುರ್ಗಾ 155 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಜಿಲ್ಲೆಯ 758 ಅಪೌಷ್ಟಿಕ ಮಕ್ಕಳ ಪಾಲಕರಿಗೆ ತರಬೇತಿ ಆಯೋಜಿಸಲು ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ. ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳನ್ನು ರಕ್ಷಿಸಿಕೊಳ್ಳುವ ಬಗೆ, ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ, ಮಕ್ಕಳಲ್ಲಿ ಆಗುವ ಬದಲಾವಣೆಗೆ ಸಂಬಂಧಿಸಿದಂತೆ ವೈದ್ಯರ ಸಂಪರ್ಕ, ಮಕ್ಕಳ ಆರೈಕೆ ಸೇರಿದಂತೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡಿದೆ. ಆಯಾ ವಿಷಯಕ್ಕೆ ಸಂಬಂಧಿಸಿದಂತೆ ತಜ್ಞ ವೈದ್ಯರು, ವಿಷಯ ಪರಿಣಿತರನ್ನು ಕರೆಸಿ ಸುಮಾರು 15 ದಿನಗಳವರೆಗೆ ತರಬೇತಿ ಆಯೋಜಿಸುತ್ತಿದೆ. ಪ್ರತಿ ದಿನ 50 ರಿಂದ 100 ಮಕ್ಕಳ ಪಾಲಕರಿಗೆ ತರಬೇತಿ ಆಯೋಜಿಸಲು ಕ್ರಿಯಾ ಯೋಜನೆ ರೂಪಿಸುತ್ತಿದೆ.

ಏಳು ತಾಲೂಕಿನ ವಸತಿ ನಿಲಯದಲ್ಲಿ ತರಬೇತಿ
ಜಿಲ್ಲೆಯಲ್ಲಿ ಸದ್ಯ ಜಿಲ್ಲಾ ಆಸ್ಪತ್ರೆ ಹಾಗೂ ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ 40 ಬೆಡ್ಗಳನ್ನು ಮಕ್ಕಳಿಗೆ ಮೀಸಲಿಡಲಾಗಿದೆ. ಆದರೆ ಇದು ಸಾಲೋದಿಲ್ಲ ಅನ್ನೋ ಕಾರಣಕ್ಕೆ ಜಿಲ್ಲಾಡಳಿತ ಏಳು ವಸತಿ ನಿಲಯಗಳನ್ನ ಗುರುತಿಸಿದೆ. ಏಳು ವಸತಿ ನಿಲಯದಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ತರಬೇತಿಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಅಪೌಷ್ಟಿಕ ಮಕ್ಕಳ ಪಾಲಕರಿಗೆ ತರಬೇತಿ ಆಯೋಜನೆಯ ಸಂಪೂರ್ಣ ಜವಾಬ್ದಾರಿ ಜಿಲ್ಲಾ ಪಂಚಾಯತ್ ಸಿಇಒ ರಘುನಂದನ್ ಮೂರ್ತಿ ಅವರಿಗೆ ವಹಿಸಿದೆ. ತರಬೇತಿ ಆಯೋಜನೆಯ ಕುರಿತಂತೆ ರೂಪರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಅಗಸ್ಟ್ ಒಂದರಿಂದ ಜಿಲ್ಲೆಯಲ್ಲಿ ತರಬೇತಿ ಆರಂಭವಾಗಲಿದೆ.

ಜಿಲ್ಲೆಯಲ್ಲಿ ಈಗಾಗಲೇ 758 ಅಪೌಷ್ಟಿಕ ಮಕ್ಕಳನ್ನ ಗುರುತಿಸಲಾಗಿದೆ. ಈಗಾಗಲೇ ಮಕ್ಕಳಿಗೆ ಒಂದು ಹಂತದ ಹೆಲ್ತ್ ಚೆಕ್ ಮಾಡಿಸಿದ್ದೇವೆ. ತೀವ್ರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು ಹಾಗೂ ಪೋಷಕರಿಗೆ ತರಬೇತಿ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿ.ಇ.ಒ ರಘುನಂದನ್ ಮೂರ್ತಿ ತಿಳಿಸಿದರು.

ಇದನ್ನೂ ಓದಿ

Coronavirus cases in India: ದೇಶದಲ್ಲಿ 50,040 ಹೊಸ ಕೊವಿಡ್ ಪ್ರಕರಣ ಪತ್ತೆ, 1258 ಮಂದಿ ಸಾವು

ಸಾರಿಗೆ ನೌಕರರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ; ಕೊಟ್ಟ ಮಾತು ತಪ್ಪಿದ ರಾಜ್ಯ ಸರ್ಕಾರ

(Zilla Panchayat CEO Raghunandan Murthy says 758 malnourished children identified in Koppal)