ತಾಯಿ ಊಟ ತರಲು ಮನೆಯೊಳಗೆ ಹೋದಾಗ.. ಮಗು ನಾಲೆಗೆ ಬಿದ್ದು ಸಾವು

ತಾಯಿ ಊಟ ತರಲು ಮನೆಯೊಳಗೆ ಹೋದಾಗ.. ಮಗು ನಾಲೆಗೆ ಬಿದ್ದು ಸಾವು

ಹುಬ್ಬಳ್ಳಿ: ಆಟವಾಡುತ್ತಿದ್ದ ವೇಳೆ ನಾಲೆಗೆ ಬಿದ್ದು ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ಪ್ರಿಯದರ್ಶಿನಿ ಕಾಲೋನಿ ಬಳಿ ನಡೆದಿದೆ. 2 ವರ್ಷದ ಮಗು ಶ್ರೀಜಿತ್ ನವಲೇಕರ್ ಮೃತ ಮಗು.

ಅಮ್ಮನ ಕೈ ತುತ್ತು ತಿನ್ನುತ್ತ ಮನೆಯ ಬಳಿ ಮಗು ಆಟವಾಡುತ್ತಿತ್ತು. ಊಟ ಖಾಲಿಯಾದ ಕಾರಣ ಊಟ ತರಲು ಮನೆಯೊಳಗೆ ತಾಯಿ ಹೋದಾಗ ಈ ದುರ್ಘಟನೆ ಸಂಭವಿಸಿದೆ. ಆಟವಾಡುತ್ತಾ ಮಗು ನಾಲೆಗೆ ಬಿದ್ದು ಸಾವನ್ನಪ್ಪಿದೆ. ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Click on your DTH Provider to Add TV9 Kannada