ಜೀವದ ಹಂಗು ತೊರೆದು ಕೋತಿಗಳ ರಕ್ಷಣೆ ಮಾಡಿದ ಜಂಟಿ ರಕ್ಷಣಾ ತಂಡಗಳು
ಬಳ್ಳಾರಿ: ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರಿನ ಪ್ರವಾಹದಿಂದಾಗಿ, ನದಿಯ ಮಧ್ಯೆ ನಿನ್ನೆಯಿಂದ ಸಿಲುಕಿಕೊಂಡಿದ್ದ ಮಂಗಗಳನ್ನು ಜೀವದ ಹಂಗು ತೊರೆದು ರಕ್ಷಣಾ ತಂಡ ಸುರಕ್ಷಿತವಾಗಿ ದಡ ಸೇರಿಸಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಜಾಗಿರ್ದಾರ್ ಬಂಡಿ ಬಳಿ ತುಂಗಭದ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ನದಿಯ ಮಧ್ಯದಲ್ಲಿರುವ ಬಂಡೆಯ ಮೇಲೆ ಹೊರಬರಲಾಗದೆ ಪರಿತಪಿಸುತ್ತಿದ್ದ 14ಕ್ಕೂ ಹೆಚ್ಚು ಕೋತಿಗಳನ್ನು, ಜೀವದ ಹಂಗು ತೊರೆದು ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಮೀನುಗಾರರ ನೆರವಿನಿಂದ […]

ಬಳ್ಳಾರಿ: ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರಿನ ಪ್ರವಾಹದಿಂದಾಗಿ, ನದಿಯ ಮಧ್ಯೆ ನಿನ್ನೆಯಿಂದ ಸಿಲುಕಿಕೊಂಡಿದ್ದ ಮಂಗಗಳನ್ನು ಜೀವದ ಹಂಗು ತೊರೆದು ರಕ್ಷಣಾ ತಂಡ ಸುರಕ್ಷಿತವಾಗಿ ದಡ ಸೇರಿಸಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಜಾಗಿರ್ದಾರ್ ಬಂಡಿ ಬಳಿ ತುಂಗಭದ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ನದಿಯ ಮಧ್ಯದಲ್ಲಿರುವ ಬಂಡೆಯ ಮೇಲೆ ಹೊರಬರಲಾಗದೆ ಪರಿತಪಿಸುತ್ತಿದ್ದ 14ಕ್ಕೂ ಹೆಚ್ಚು ಕೋತಿಗಳನ್ನು, ಜೀವದ ಹಂಗು ತೊರೆದು ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಮೀನುಗಾರರ ನೆರವಿನಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ .
ಈ ಕಾರ್ಯಾಚರಣೆ ವೇಳೆ ಭಯಭೀತಗೊಂಡಿದ್ದ ಕೋತಿಗಳು ರಕ್ಷಣಾ ತಂಡದ ನಾಲ್ಕೈದು ಜನರಿಗೆ ಕಚ್ಚಿ ಗಾಯಗೊಳಿಸಿವೆ. ಆದರೂ ಸಹ ತಮ್ಮ ಛಲ ಬಿಡದ ರಕ್ಷಣಾ ತಂಡ ನಾಲ್ಕು ತೆಪ್ಪಗಳ ಮೂಲಕ ಯಶಸ್ವಿ ಕಾರ್ಯಚರಣೆ ನಡೆಸಿ ಕೋತಿಗಳನ್ನು ದಡಕ್ಕೆ ಸೇರಿಸಿವೆ.





