ಆಕಸ್ಮಿಕವಾಗಿ ಬೆಂಕಿ ತಗಲಿ ಗುಡಿಸಲಿನಲ್ಲಿದ್ದ ವ್ಯಕ್ತಿ ಸಜೀವ ದಹನ, ಎಲ್ಲಿ?
ರಾಯಚೂರು:ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಓರ್ವ ವ್ಯಕ್ತಿ ಹಾಗೂ ಒಂದು ಮೇಕೆ ಸಜೀವ ದಹನವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ಅದಕ್ಕೆ ಅರಿಕೆರಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ನಾಗಪ್ಪ ತಾತೆ(40) ಅವಘಡದಲ್ಲಿ ಮೃತಪಟ್ಟ ದುರ್ದೈವಿ. ಶುಕ್ರವಾರ ತಡರಾತ್ರಿ ಗುಡಿಸಲಿನಲ್ಲಿ ನಾಗಪ್ಪ ತಾತೆ ಮಲಗಿದ್ದರು. ಈ ವೇಳೆ ಗುಡಿಸಲಿಗೆ ತಗುಲಿದ ಆಕಸ್ಮಿಕ ಬೆಂಕಿಯಿಂದಾಗಿ ಆತ ಮತ್ತು ಗುಡಿಸಲಿನ ಬಳಿ ಕಟ್ಟಲಾಗಿದ್ದ ಒಂದ ಮೇಕೆ ಸಜೀವ ದಹನವಾಗಿದ್ದಾರೆ ಎನ್ನಲಾಗಿದೆ. ಜೊತೆಗೆ, ಈ ಘಟನೆಯಲ್ಲಿ ಲಕ್ಷಾಂತರ ರೂಪಾಯಿ […]

ರಾಯಚೂರು:ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಓರ್ವ ವ್ಯಕ್ತಿ ಹಾಗೂ ಒಂದು ಮೇಕೆ ಸಜೀವ ದಹನವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಅದಕ್ಕೆ ಅರಿಕೆರಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ನಾಗಪ್ಪ ತಾತೆ(40) ಅವಘಡದಲ್ಲಿ ಮೃತಪಟ್ಟ ದುರ್ದೈವಿ. ಶುಕ್ರವಾರ ತಡರಾತ್ರಿ ಗುಡಿಸಲಿನಲ್ಲಿ ನಾಗಪ್ಪ ತಾತೆ ಮಲಗಿದ್ದರು. ಈ ವೇಳೆ ಗುಡಿಸಲಿಗೆ ತಗುಲಿದ ಆಕಸ್ಮಿಕ ಬೆಂಕಿಯಿಂದಾಗಿ ಆತ ಮತ್ತು ಗುಡಿಸಲಿನ ಬಳಿ ಕಟ್ಟಲಾಗಿದ್ದ ಒಂದ ಮೇಕೆ ಸಜೀವ ದಹನವಾಗಿದ್ದಾರೆ ಎನ್ನಲಾಗಿದೆ.
ಜೊತೆಗೆ, ಈ ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸಹ ಸುಟ್ಟು ಭಸ್ಮವಾಗಿದೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಘಟನೆಗೆ ನಿಖರ ಕಾರಣವನ್ನು ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ.