ತಂಬಾಕು ತುಂಬಿದ್ದ ಲಾರಿ ಬೈಕ್‌ಗೆ ಡಿಕ್ಕಿ, ಸವಾರ ದುರ್ಮರಣ
ಕೊಪ್ಪಳ: ಬೈಕ್‌ಗೆ ಲಾರಿ ಡಿಕ್ಕಿಯಾಗಿ ಸವಾರ ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಶಹಾಪುರ ಗ್ರಾಮದ ಬಳಿ ನಡೆದಿದೆ. ಬೈಕ್ ಸವಾರ ಮಲ್ಲಪ್ಪ ಡೊಳ್ಳಿ(25) ಮೃತ ದುರ್ದೈವಿ. ಕುಡಿದ ಮತ್ತಿನಲಿ ತಂಬಾಕು ತುಂಬಿದ್ದ ಲಾರಿ ಚಲಾಯಿಸುತ್ತಿದ್ದ ಚಾಲಕ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಈ ಪರಿಣಾಮ ಶಿಕ್ಷಕ ಮಲ್ಲಪ್ಪ ತಂಬಾಕು ತುಂಬಿದ್ದ ಲಾರಿ ಕೆಳಗೆ ಸಿಲುಕಿಕೊಂಡಿದ್ರು. ನಂತರ ಮಲ್ಲಪ್ಪನನ್ನು ಉಳಿಸಲು ಸ್ಥಳೀಯರು ಲಾರಿಯಲ್ಲಿದ್ದ ತಂಬಾಕು ಚೀಲಗಳನ್ನು ಖಾಲಿ ಮಾಡಿದ್ರು. ಕ್ರೇನ್ ಮೂಲಕ ಲಾರಿಯನ್ನು ಮೆಲೆತ್ತಿ ಮಲ್ಲಪ್ಪನನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವ […]

ಕೊಪ್ಪಳ: ಬೈಕ್‌ಗೆ ಲಾರಿ ಡಿಕ್ಕಿಯಾಗಿ ಸವಾರ ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಶಹಾಪುರ ಗ್ರಾಮದ ಬಳಿ ನಡೆದಿದೆ. ಬೈಕ್ ಸವಾರ ಮಲ್ಲಪ್ಪ ಡೊಳ್ಳಿ(25) ಮೃತ ದುರ್ದೈವಿ.
ಕುಡಿದ ಮತ್ತಿನಲಿ ತಂಬಾಕು ತುಂಬಿದ್ದ ಲಾರಿ ಚಲಾಯಿಸುತ್ತಿದ್ದ ಚಾಲಕ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಈ ಪರಿಣಾಮ ಶಿಕ್ಷಕ ಮಲ್ಲಪ್ಪ ತಂಬಾಕು ತುಂಬಿದ್ದ ಲಾರಿ ಕೆಳಗೆ ಸಿಲುಕಿಕೊಂಡಿದ್ರು. ನಂತರ ಮಲ್ಲಪ್ಪನನ್ನು ಉಳಿಸಲು ಸ್ಥಳೀಯರು ಲಾರಿಯಲ್ಲಿದ್ದ ತಂಬಾಕು ಚೀಲಗಳನ್ನು ಖಾಲಿ ಮಾಡಿದ್ರು.
ಕ್ರೇನ್ ಮೂಲಕ ಲಾರಿಯನ್ನು ಮೆಲೆತ್ತಿ ಮಲ್ಲಪ್ಪನನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮಲ್ಲಪ್ಪ ಮೃತಪಟ್ಟಿದ್ದಾರೆ. ಲಾರಿ ಚಾಲಕನನ್ನು ಮುನಿರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.






