ರಶ್ಮಿಕಾ ಮಂದಣ್ಣ ಬಾಲಿವುಡ್​ಗೆ ಕಾಲಿಡೋಕೆ ಸಿಕ್ತು ಮುಹೂರ್ತ: ಸ್ಟಾರ್​ ನಟನ ಜೊತೆ ಕೊಡಗು ಹುಡುಗಿ ರೊಮ್ಯಾನ್ಸ್​

ಭಾರತದ RAW ಸಂಸ್ಥೆ ಪಾಕಿಸ್ತಾನದ ಒಳಗೆ ಅತ್ಯಂತ ಧೈರ್ಯಶಾಲಿ ಕಾರ್ಯಾಚರಣೆ ನಡೆಸಿತ್ತು. ಈ ಘಟನೆಯನ್ನು ಆಧರಿಸಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಬಗ್ಗೆ ರಶ್ಮಿಕಾ ಮಂದಣ್ಣ ಟ್ವಿಟರ್​ನಲ್ಲಿ ಖಷಿ ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳ ಪಾಲಿಗಂತೂ ಅತ್ಯಂತ ಸಂತಸದ ಸುದ್ದಿಯಾಗಿದೆ.  

ರಶ್ಮಿಕಾ ಮಂದಣ್ಣ ಬಾಲಿವುಡ್​ಗೆ ಕಾಲಿಡೋಕೆ ಸಿಕ್ತು ಮುಹೂರ್ತ: ಸ್ಟಾರ್​ ನಟನ ಜೊತೆ ಕೊಡಗು ಹುಡುಗಿ ರೊಮ್ಯಾನ್ಸ್​
ರಶ್ಮಿಕಾ ಮಂದಣ್ಣ
Edited By:

Updated on: Dec 23, 2020 | 3:48 PM

ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್​ಗೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಇಂದು ನಿನ್ನೆಯದಲ್ಲ. ಯಾವಾಗ ಅವರು ತೆಲುಗು ಇಂಡಸ್ಟ್ರಿಯಲ್ಲಿ ಹಿಟ್​ ಆದರೋ ಅಂದಿನಿಂದಲೂ ಅವರು ಬಾಲಿವುಡ್​ಗೆ ಕಾಲಿಡಲಿದ್ದಾರೆ ಎನ್ನುವ ಮಾತು ಹರಿದಾಡುತ್ತಲೇ ಇತ್ತು. ಆದರೆ, ಈಗ ಈ ಸುದ್ದಿ ಅಧಿಕೃತವಾಗಿದೆ! ಬಾಲಿವುಡ್​ನ ಸ್ಟಾರ್​ ನಟನ ಜೊತೆ ರಶ್ಮಿಕಾ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಸತ್ಯ ಘಟನೆ ಆಧರಿಸಿ ಸಿದ್ಧಗೊಳ್ಳುತ್ತಿರುವ ‘ಮಿಷನ್​ ಮಜ್ನು’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಸ್ಟುಡೆಂಟ್​ ಆಫ್​ ದಿ ಇಯರ್​ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಹೆಸರು ಮಾಡಿರುವ ಸಿದ್ಧಾರ್ಥ್​ ಮಲ್ಹೋತ್ರಾ ಈ ಚಿತ್ರದ ನಾಯಕ.

ಭಾರತದ RAW ಸಂಸ್ಥೆ ಪಾಕಿಸ್ತಾನದ ಒಳಗೆ ಭಯವೇ ಇಲ್ಲದೆ ನಡೆಸಿದ ಕಾರ್ಯಾಚರಣೆಯನ್ನು ಆಧರಿಸಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಬಗ್ಗೆ ರಶ್ಮಿಕಾ ಮಂದಣ್ಣ ಟ್ವಿಟರ್​ನಲ್ಲಿ ಖಷಿ ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳ ಪಾಲಿಗಂತೂ ಅತ್ಯಂತ ಸಂತಸದ ಸುದ್ದಿಯಾಗಿದೆ.

ಕನ್ನಡದ ಕಿರಿಕ್​​ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಕೆಲವೇ ಸಮಯದಲ್ಲಿ ಹೆಚ್ಚು ಖ್ಯಾತಿ ಗಳಿಸಿಕೊಂಡರು. ತೆಲುಗು, ತಮಿಳು ಚಿತ್ರರಂಗದಲ್ಲೂ ರಶ್ಮಿಕಾಗೆ ಬೇಡಿಕೆ ಹೆಚ್ಚಿತ್ತು. ಇತ್ತೀಚೆಗಷ್ಟೇ ಬಾಲಿವುಡ್​ ಆಲ್ಬಂ ಹಾಡೊಂದಕ್ಕೆ ರಶ್ಮಿಕಾ ಹೆಜ್ಜೆ ಹಾಕಿದ್ದರು. ಈಗ, ರಶ್ಮಿಕಾ ಮಂದಣ್ಣ ಮತ್ತೊಂದು ನ್ಯೂಸ್ ಕೊಟ್ಟಂತಾಗಿದೆ. ಅಲ್ಲದೆ, ಬಾಲಿವುಡ್​ ಕದ ತಟ್ಟಿದ ಕೆಲವೇ ಕೆಲವು ಹೀರೋಯಿನ್​ ಸಾಲಿಗೆ ರಶ್ಮಿಕಾ ಕೂಡ ಸೇರ್ಪಡೆ ಆಗಿದ್ದಾರೆ.

ಬಾಲಿವುಡ್ ವಿಡಿಯೋ ಸಾಂಗ್​ನಲ್ಲಿ ಮಿಂಚಲಿದ್ದಾರೆ ರಶ್ಮಿಕಾ ಮಂದಣ್ಣ