ನಿಯಂತ್ರಣಕ್ಕೆ ಸಿಗದ ಕೊರೊನಾ: ಸೋಂಕಿಗೆ ಕಡಿವಾಣ ಹಾಕಲು BBMPಯಿಂದ ದ್ವಿಸೂತ್ರ

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಸೋಂಕಿತ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವುದೇ ದೊಡ್ಡ ತಲೆ ನೋವಾಗಿದೆ. ಹೀಗಾಗಿ ಇದರ ನಿಯಂತ್ರಣಕ್ಕೆ ಬಿಬಿಎಂಪಿ 2 ಸೂತ್ರಗಳನ್ನು ಸಿದ್ಧಪಡಿಸಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಕನ್ವೆನ್ಷನಲ್ ಅಪ್ರೋಚ್, ಅಗ್ರೆಸಿವ್ ಅಪ್ರೋಚ್‌ ಎಂಬ ಎರಡು ಸೂತ್ರಗಳನ್ನು ಜಾರಿಗೆ ತಯಾರಿ ನಡೆಸಿದೆ. ಮೊದಲು ಕನ್ವೆನ್ಷನಲ್ ಅಪ್ರೋಚ್‌ಗೆ ಆದ್ಯತೆ ನೀಡಲಾಗುತ್ತೆ. ಸೋಂಕಿನ ಲಕ್ಷಣವಿರುವವರು ಬಂದು ಟೆಸ್ಟ್ ಮಾಡಿಸಿಕೊಳ್ಳಬೇಕು. ಇದರ ಜತೆ ಅಗ್ರೆಸಿವ್ ಅಪ್ರೋಚ್‌ಗೂ ಸಿದ್ಧವಾಗಿರುವ BBMP ಸೋಂಕಿತರಿರುವ […]

ನಿಯಂತ್ರಣಕ್ಕೆ ಸಿಗದ ಕೊರೊನಾ: ಸೋಂಕಿಗೆ ಕಡಿವಾಣ ಹಾಕಲು BBMPಯಿಂದ ದ್ವಿಸೂತ್ರ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Aug 28, 2020 | 9:12 AM

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಸೋಂಕಿತ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವುದೇ ದೊಡ್ಡ ತಲೆ ನೋವಾಗಿದೆ. ಹೀಗಾಗಿ ಇದರ ನಿಯಂತ್ರಣಕ್ಕೆ ಬಿಬಿಎಂಪಿ 2 ಸೂತ್ರಗಳನ್ನು ಸಿದ್ಧಪಡಿಸಿದೆ.

ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಕನ್ವೆನ್ಷನಲ್ ಅಪ್ರೋಚ್, ಅಗ್ರೆಸಿವ್ ಅಪ್ರೋಚ್‌ ಎಂಬ ಎರಡು ಸೂತ್ರಗಳನ್ನು ಜಾರಿಗೆ ತಯಾರಿ ನಡೆಸಿದೆ. ಮೊದಲು ಕನ್ವೆನ್ಷನಲ್ ಅಪ್ರೋಚ್‌ಗೆ ಆದ್ಯತೆ ನೀಡಲಾಗುತ್ತೆ. ಸೋಂಕಿನ ಲಕ್ಷಣವಿರುವವರು ಬಂದು ಟೆಸ್ಟ್ ಮಾಡಿಸಿಕೊಳ್ಳಬೇಕು.

ಇದರ ಜತೆ ಅಗ್ರೆಸಿವ್ ಅಪ್ರೋಚ್‌ಗೂ ಸಿದ್ಧವಾಗಿರುವ BBMP ಸೋಂಕಿತರಿರುವ ಸ್ಥಳ ಕಂಟೇನ್ಮೆಂಟ್ ಜೋನ್ ಎಂದು ಪರಿಗಣಿಸಿ ಸೋಂಕಿತರ ಮನೆ ಸುತ್ತಮುತ್ತಲಿನ ಜನರಿಗೆ ಟೆಸ್ಟ್ ಮಾಡುವುದು. ಹಾಗೂ ಪ್ರೈಮರಿ, ಸೆಕೆಂಡರಿ ಕಾಂಟ್ಯಾಕ್ಟ್‌ನಲ್ಲಿರುವವರಿಗೆ ಕೊವಿಡ್ ಟೆಸ್ಟ್ ಮಾಡಲಾಗುತ್ತೆ.

ಬೆಂಗಳೂರಿನ ಎಲ್ಲೆಡೆ ಹೆಲ್ತ್ ಸರ್ವೆ ನಡೆಸಿ ವಿವಿಧ ಕಾಯಿಲೆಗಳಿರುವವರಿಗೆ ಕೊವಿಡ್ ಟೆಸ್ಟ್‌ ಮಾಡಲು ತೀರ್ಮಾನಿಸಿದೆ. ಪ್ರಾರಂಭಿಕ ಹಂತದಲ್ಲೇ ಕೊರೊನಾ ಸೋಂಕಿತರ ಪತ್ತೆಗೆ ಪ್ಲ್ಯಾನ್ ಮಾಡಲಾಗಿದ್ದು, ಇದಕ್ಕೆ ಎನ್‌ಜಿಒ, ಸ್ವಯಂಸೇವಕರನ್ನು ಬಳಸಿಕೊಳ್ಳಲು ಚಿಂತನೆ ನಡೆಸಿದೆ. ಈ ಬಗ್ಗೆ ಟಿವಿ9ಗೆ ಬಿಬಿಎಂಪಿ ಕಮಿಷನರ್ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

Published On - 8:35 am, Fri, 28 August 20