AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾಕಾಶಿಯಲ್ಲಿ ರಾಶಿ ರಾಶಿ ತ್ಯಾಜ್ಯ.. ಕಸಕ್ಕೆ ಇಟ್ಟ ಬೆಂಕಿ ಕಾಳ್ಗಿಚ್ಚು ಆಗಿ ಧಗಧಗಿಸುತ್ತಿದೆ ಪ್ರಜ್ಞಾವಂತರ ನಾಡು!

ಕೆಲವು ಪ್ರದೇಶಗಳಲ್ಲಿ ಕಸದ ರಾಶಿಗೆ ಬೆಂಕಿ ಹಚ್ಚುವ ಕೆಲಸವೂ ಶುರುವಾಯಿತು. ಈ ಹೊಸ ಬಗೆಯ ಹುಚ್ಚುತನವೇ ಇದೀಗ ಸಸ್ಯಕಾಶಿಯ ಜೀವಕ್ಕೆ ಅಪಾಯ ತಂದೊಡ್ಡಿದೆ.

ವಿದ್ಯಾಕಾಶಿಯಲ್ಲಿ ರಾಶಿ ರಾಶಿ ತ್ಯಾಜ್ಯ.. ಕಸಕ್ಕೆ ಇಟ್ಟ ಬೆಂಕಿ ಕಾಳ್ಗಿಚ್ಚು ಆಗಿ ಧಗಧಗಿಸುತ್ತಿದೆ ಪ್ರಜ್ಞಾವಂತರ ನಾಡು!
ತ್ಯಾಜ್ಯಕ್ಕೆ ಇಟ್ಟ ಬೆಂಕಿಯಿಂದ ಸುಟ್ಟುಹೋದ ಮರ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Dec 10, 2020 | 11:06 AM

ಧಾರವಾಡ: ಒಂದು ಕಾಲಕ್ಕೆ ಧಾರವಾಡ ಅಂದರೆ ಕವಿಗಳ ನಾಡು, ಸಂಗೀತಕಾರರ ಬೀಡು, ಪ್ರಜ್ಞಾವಂತರ ನಾಡು ಎಂಬ ಹೆಗ್ಗಳಿಕೆಯ ಜೊತೆಗೆ ಸುಂದರ ಹಾಗೂ ಸ್ವಚ್ಛ ನಗರಿ ಅನ್ನೋ ಕೀರ್ತಿಗೂ ಪಾತ್ರವಾಗಿತ್ತು. ವರ್ಷಗಳು ಉರುಳಿದಂತೆ ಈ ಹೆಸರಿಗೆ ಬೆಂಕಿ ಹಾಕುವ ಕುಕೃತ್ಯಗಳು ಆರಂಭವಾದವು.

ಒಂದು ಕಡೆ ಎಲ್ಲೆಂದರಲ್ಲಿ ಕಸದ ರಾಶಿ ಕಾಣಿಸತೊಡಗಿದರೆ, ಮತ್ತೆ‌ ಕೆಲವು ಕಡೆಗಳಲ್ಲಿ ತೆಗ್ಗು ಪ್ರದೇಶಗಳು ಚರಂಡಿ ನೀರು ಶೇಖರಣೆ ಆಗುವ ಪ್ರದೇಶಗಳಾಗಿ ಮಾರ್ಪಾಡಾದವು. ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಕಸದ ರಾಶಿಗೆ ಬೆಂಕಿ ಹಚ್ಚುವ ಕೆಲಸವೂ ಶುರುವಾಯಿತು. ಈ ಹೊಸ ಬಗೆಯ ಹುಚ್ಚುತನವೇ ಇದೀಗ ಸಸ್ಯಕಾಶಿಯ ಜೀವಕ್ಕೆ ಅಪಾಯ ತಂದೊಡ್ಡಿದೆ.

ವಿನಾಯಕ ನಗರ ಆಯ್ತು ಕಸದ ಆಗರ ವಿನಾಯಕ ನಗರ ಬಡಾವಣೆಯಿಂದ ಕೆಲಗೇರಿ ಬಡಾವಣೆಗೆ ಹಾದು ಹೋಗುವ ಮುಖ್ಯ ರಸ್ತೆಯ ಅರ್ಧ ಕಿ.ಮೀ ಉದ್ದಕ್ಕೂ ಎರಡೂ ಬದಿಗೆ ತಿಪ್ಪೆ ಗುಂಡಿಗಳೇ ಕಾಣಸಿಗುತ್ತವೆ. ಇದು ಜನರೇ ಸೃಷ್ಟಿಸಿದ್ದು ಎಂದು ಹೇಳಿದರೂ ಅದು ತಪ್ಪಾಗಲಾರದು. ಕಟ್ಟಡ ತ್ಯಾಜ್ಯ, ಒಡೆದ ಸೌರ ವಿದ್ಯುತ್ ಫಲಕಗಳು ಮತ್ತು ಗಾಜಿನ ಕೊಳವೆಗಳು ಸೇರಿದಂತೆ ಪ್ಯಾಕಿಂಗ್​ನಲ್ಲಿ ಬರುವ ಹೈ-ಡೆನ್ಸಿಟಿ ಥರ್ಮಾಕೋಲ್ ಮತ್ತು ರಟ್ಟಿನ ಬಾಕ್ಸ್​ಗಳು, ಒಡೆದ ಸ್ಯಾನಿಟರಿವೇರ್, ಜಾಹಿರಾತಿನ ಫಲಕ – ಹೀಗೆ ಬಗೆಬಗೆಯ ತ್ಯಾಜ್ಯ ರಸ್ತೆ ಬದಿಗೆ ಬಂದು ಬೀಳುತ್ತಿವೆ.

ಟ್ರ್ಯಾಕ್ಟರ್‌ನಲ್ಲಿ ಲೋಡ್ ಮಾಡಿಕೊಂಡು ಬರೋ ಜನರು ಅವುಗಳನ್ನು ಕ್ಷಣಾರ್ಧದಲ್ಲಿ ಇಲ್ಲಿ ಬಿಸಾಡಿ ಪರಾರಿಯಾಗಿ ಬಿಡುತ್ತಾರೆ. ಒಂದು ಬಾರಿ ಹೀಗೆ ರಸ್ತೆ ಬದಿಗೆ ಕಸದ ರಾಶಿ ಬಂದು ಬಿತ್ತೋ, ಅಲ್ಲಿಗೆ ಅದು ತಿಪ್ಪೆಯಾಗಿ ಬದಲಾಗಲು ಬಹಳ ಸಮಯ ಹಿಡಿಯೋದೇ ಇಲ್ಲ. ಜನರು ಅದನ್ನು ತಿಪ್ಪೆಯೆಂದೇ ಭಾವಿಸಿ ಮತ್ತುಷ್ಟು ಕಸ ಸೇರಿಸಲು ಶುರುಮಾಡುತ್ತಾರೆ.

ಯಾವಾಗ ತಿಪ್ಪೆಯ ಗಾತ್ರ ದೊಡ್ಡದಾಗುತ್ತಾ ಸಾಗುತ್ತೋ ಆಗಲೇ ನೋಡಿ ಸಮಸ್ಯೆ ಶುರುವಾಗುವುದು. ಜನರು ಕಸ ಎಸೆದು ಹೋಗೋವಾಗ ತ್ಯಾಜ್ಯಕ್ಕೆ ಬೆಂಕಿ ಇಟ್ಟು ಹೋಗಿಬಿಡುತ್ತಾರೆ. ಅದರ ಪರಿಣಾಮ ನೇರವಾಗಿ ಆಗುವುದು ಅಕ್ಕಪಕ್ಕದ ಗಿಡಗಳ ಮೇಲೆ. ಕೆಲವು ಕಡೆ ಗಿಡಗಳ ಬುಡದಲ್ಲಿಯೇ ಕಸ ಬಿಸಾಡಿ ಅಲ್ಲೇ ಬೆಂಕಿ ಹಚ್ಚುವುದರಿಂದ ಅವುಗಳು ಸಂಪೂರ್ಣವಾಗಿ ಸುಟ್ಟು ಹೋಗುತ್ತಿವೆ. ನಿತ್ಯವೂ ಇಂಥ ಕೃತ್ಯದಿಂದ ಹತ್ತಾರು ಗಿಡ-ಮರಗಳು ಬಲಿಯಾಗುತ್ತಿವೆ. ಗಿಡ-ಮರಗಳು ನಾಶವಾಗುವುದರಿಂದ ಅವುಗಳನ್ನು ಆಶ್ರಯಿಸಿ ಬದುಕುವ ಪ್ರಾಣಿ, ಪಕ್ಷ ಸಂಕುಲವೂ ಸಂಕಷ್ಟಕ್ಕೆ ಸಿಲುಕುತ್ತಿದೆ.

ನಾವು ವಾಸಿಸುವ ಪರಿಸರ ಸ್ವಚ್ಛವಾಗಿರಬೇಕೆಂದರೆ ಅದಕ್ಕೆ ಹೆಚ್ಚು ಶ್ರಮಪಡಬೇಕೆಂದಿಲ್ಲ. ನಾವು ಮಾಡಬಾರದ ಕೆಲಸಗಳನ್ನು ಬಿಟ್ಟರೆ ಸಾಕು. ಮಹಾನಗರ ಪಾಲಿಕೆ ನಿತ್ಯವೂ ಮನೆಗಳ ಮುಂದೆ ತನ್ನ ವಾಹನಗಳನ್ನು ಕಳಿಸಿ ತ್ಯಾಜ್ಯ ವಿಲೇವಾರಿ ಮಾಡುತ್ತಿದೆ. ಅದನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಂಡರೆ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಇನ್ನು, ಕಟ್ಟಡ ತ್ಯಾಜ್ಯವನ್ನು ಗುಂಡಿಗಳು ಇರುವ ಪ್ರದೇಶದಲ್ಲಿ ಹಾಕಿದರೆ ಸಮಸ್ಯೆಯನ್ನು ಮತ್ತಷ್ಟು ಕಡಿಮೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ, ಸಾರ್ವಜನಿಕರು ಪ್ರಯತ್ನಪಟ್ಟಾಗ ಮಾತ್ರ ನಮ್ಮ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಂಡು, ಪರಿಸರವನ್ನು ಕಾಪಾಡಬಹುದು. -ನರಸಿಂಹ ಮೂರ್ತಿ ಪ್ಯಾಟಿ

ವಿದ್ಯಾಕಾಶಿಯಲ್ಲಿ ಹಕ್ಕಿಗಳ ಮಾರಣಹೋಮ: ಔಷಧಕ್ಕೆಂದು ಸದ್ದಿಲ್ಲದೆ ಮಾಯವಾಗ್ತಿದೆ ಪಕ್ಷಿ ಸಂಕುಲ

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್