AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ವಿಮಾನ ಅಪಘಾತದ ನಂತರ ಕಚೇರಿಯಲ್ಲಿ ಪಾರ್ಟಿ ಮಾಡಿದ ಏರ್ ಇಂಡಿಯಾ ಸಿಬ್ಬಂದಿ, 4 ಹಿರಿಯ ಅಧಿಕಾರಿಗಳ ವಜಾ

ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಿಂದ ಇನ್ನು ಯಾರು ಹೊರ ಬಂದಿಲ್ಲ, ಈ ಅಪಘಾತದಲ್ಲಿ ಜೀವನದ ಕಳೆದಕೊಂಡವರ ಕುಟುಂಬ ಇನ್ನು ದುಃಖದಿಂದ ಹೊರಬಂದಿಲ್ಲ. ಇಂತಹ ಸಮಯದಲ್ಲಿ ಏರ್ ಇಂಡಿಯಾದ ವಿಮಾನ ನಿಲ್ದಾಣ ಸಿಬ್ಬಂದಿಗಳು ಪಾರ್ಟಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದು ವೈರಲ್​ ಆಗಿದೆ. ಇದೀಗ AISATSನ ನಾಲ್ವರು ಹಿರಿಯ ಉದ್ಯೋಗಿಗಳನ್ನು ವಜಾ ಮಾಡುವಂತೆ ಆದೇಶ ನೀಡಲಾಗಿದೆ.

Video: ವಿಮಾನ ಅಪಘಾತದ ನಂತರ ಕಚೇರಿಯಲ್ಲಿ ಪಾರ್ಟಿ ಮಾಡಿದ ಏರ್ ಇಂಡಿಯಾ ಸಿಬ್ಬಂದಿ, 4 ಹಿರಿಯ ಅಧಿಕಾರಿಗಳ ವಜಾ
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on:Jun 28, 2025 | 11:16 AM

Share

ಇಡೀ ಜಗತ್ತು ಬಿಚ್ಚಿಬಿದ್ದ ಘಟನೆ ಎಂದರೆ ಏರ್ ಇಂಡಿಯಾದ ವಿಮಾನ ಪತನ, (Ahmedabad Plane Crash) ಈ ಸುದ್ದಿಗೆ ಜಗತ್ತಿನ ಅನೇಕ ರಾಷ್ಟ್ರಗಳು ಸಂತಾಪ ಹಾಗೂ ದುಃಖವನ್ನು ವ್ಯಕ್ತಪಡಿಸಿತ್ತು. ಭಾರತಕ್ಕೆ ಇದೊಂದು ಕರಾಳ ದಿನ ಕೂಡ ಹೌದು, 259 ಜನರನ್ನು ಈ ವಿಮಾನ ಬಲಿ ತೆಗೆದುಕೊಂಡಿತ್ತು. ಆದರೆ ಈ ಘಟನೆ ನಡೆದು ಇನ್ನು ಒಂದು ತಿಂಗಳು ಕಳೆದಿಲ್ಲ. ದುಃಖದಿಂದ ಹಾಗೂ ನೆನಪಿನಿಂದ ಯಾರು ಹೊರಬಂದಿಲ್ಲ. ಈ ಸಮಯದಲ್ಲಿ ಏರ್ ಇಂಡಿಯಾದ ವಿಮಾನ ನಿಲ್ದಾಣ ಸಿಬ್ಬಂದಿಗಳು ಪಾರ್ಟಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದು ವೈರಲ್​ ಆಗಿದೆ. ಈ ವಿಡಿಯೋಗೆ ಸಂಬಂಧಿಸಿದಂತೆ ಏರ್ ಇಂಡಿಯಾದ ವಿಮಾನ ನಿಲ್ದಾಣದ ಗೇಟ್‌ವೇ ಸೇವಾ ಪೂರೈಕೆದಾರ AISATSನ ನಾಲ್ವರು ಹಿರಿಯ ಉದ್ಯೋಗಿಗಳನ್ನು ವಜಾ ಮಾಡುವಂತೆ ಆದೇಶ ನೀಡಲಾಗಿದೆ. ನೌಕರರು ಕೆಲಸದ ಸ್ಥಳದಲ್ಲಿ ಪಾರ್ಟಿ ಮಾಡುತ್ತಿರುವ ವಿಡಿಯೋಗೆ ಸಾರ್ವಜನಿಕ ವಲಯದಿಂದ ಭಾರೀ ಅಕ್ರೋಶ ವ್ಯಕ್ತವಾಗಿತ್ತು. ಈ ಕಾರಣದಿಂದ, ಈ ಪಾರ್ಟಿಯಲ್ಲಿ ಭಾಗಿವಹಿಸಿದ ನಾಲ್ವರು ಹಿರಿಯ ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ.

ಅಹಮದಾಬಾದ್‌ನಲ್ಲಿ 259 ಜನರನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ಅಪಘಾತದ ಕೆಲವೇ ದಿನಗಳ ನಂತರ ಗುರುಗ್ರಾಮ್‌ನ AISATS ಕಚೇರಿಯಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿತ್ತು. AI 171 ವಿಮಾನದ ದುರಂತದಿಂದ ಬಾಧಿತರಾದ ಕುಟುಂಬಗಳೊಂದಿಗೆ ಕಂಪನಿಯು ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದು AISATS ವಕ್ತಾರರು ತಿಳಿಸಿದ್ದರು. ಆದರೆ ಈ ವಿಡಿಯೋ ನೋಡಿದ ನಂತರ ಅನೇಕರು ಏರ್​​ ಇಂಡಿಯಾದ ವಿರೋಧ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಸಂಭ್ರಮಿಸುವ ಕ್ಷಣ ಅಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. AI 171 ರ ದುರಂತ ನಷ್ಟದಿಂದ ಬಾಧಿತರಾದ ಕುಟುಂಬಗಳೊಂದಿಗೆ AISATS ಒಗ್ಗಟ್ಟಿನಿಂದ ನಿಲ್ಲುತ್ತೇವೆ ಮತ್ತು ಈ ವಿಡಿಯೋದ ಬಗ್ಗೆ ನಾವು ಬೇಸರ ವ್ಯಕ್ತಪಡಿಸುತ್ತೇವೆ ಎಂದು AISATS ವಕ್ತಾರರು ಹೇಳಿದ್ದಾರೆ.

ಇದನ್ನೂ ಓದಿ
Image
ಖ್ಯಾತ ಸುದ್ದಿ ನಿರೂಪಕಿ ಆತ್ಮಹತ್ಯೆ.! ಅನುಮಾನ ಸೃಷ್ಟಿಸಿದ ಇನ್ಸ್ಟಾ ಪೋಸ್ಟ್‌
Image
ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ; 500ಕ್ಕೂ ಹೆಚ್ಚು ಭಕ್ತರಿಗೆ ಗಾಯ
Image
ಭಾರತದ ವಿರುದ್ಧ ಚೀನಾದ ಗೌಪ್ಯ ಮಾಹಿತಿಯನ್ನು ಒಪ್ಪಿಕೊಂಡ ಪಾಕ್ ರಕ್ಷಣಾ ಸಚಿವ
Image
ಚರ್ಚೆ ಹುಟ್ಟು ಹಾಕಿದ ಹೊಸಬಾಳೆ 'ಸಮಾಜವಾದ-ಜಾತ್ಯಾತೀತ' ಹೇಳಿಕೆ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ನಡವಳಿಕೆಯು ನಮ್ಮ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ, ಮತ್ತು ನಾವು ಸಹಾನುಭೂತಿ, ವೃತ್ತಿಪರತೆ ಮತ್ತು ಹೊಣೆಗಾರಿಕೆಗೆ ನಮ್ಮ ಬದ್ಧತೆ ಏನು ಎಂಬ ಬಗ್ಗೆ ತಿಳಿದುಕೊಳ್ಳಬೇಕಿದೆ. ಈ ಕೃತ್ಯಕ್ಕೆ ಜವಾಬ್ದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಕಂಪನಿಯು ನಾಲ್ವರು ಹಿರಿಯ ಅಧಿಕಾರಿಗಳನ್ನು ಹೊರಹೋಗುವಂತೆ ಹೇಳಿದ್ದೇವೆ. ಹಾಗೂ ಅಲ್ಲಿನ ಕೆಲವು ಸಿಬ್ಬಂದಿಗಳಿಗೆ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ. AISATS ಎಂಬುದು ಟಾಟಾ ಗ್ರೂಪ್‌ನ ಭಾಗವಾಗಿರುವ ಏರ್ ಇಂಡಿಯಾ ಲಿಮಿಟೆಡ್ ಮತ್ತು ಗೇಟ್‌ವೇ ಸೇವೆಗಳು, ಆಹಾರ ಪರಿಹಾರಗಳಲ್ಲಿ ಭಾಗವಹಿಸುವ SATS ಲಿಮಿಟೆಡ್ ನಡುವಿನ 50-50 ಜಂಟಿ ಉದ್ಯಮವಾಗಿದೆ. ಆ ಕಾರಣದಿಂದ ಈ ಸಂಸ್ಥೆಗಳು ಚರ್ಚಿಸಿ ಅವರನ್ನು ಕೆಲಸದಿಂದ ವಜಾ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಂವಿಧಾನದ ಮೂಲ ಆಶಯ ತಿರುಚಲು ಮುಂದಾಗಿದ್ದ ಇಂದಿರಾ ಗಾಂಧಿ: ಸಾಕ್ಷಿ ಸಮೇತ ತಿರುಗೇಟು ಕೊಟ್ಟ ಬಿಜೆಪಿ

ಜೂನ್ 12 ರಂದು ಲಂಡನ್‌ಗೆ ತೆರಳುತ್ತಿದ್ದ ಬೋಯಿಂಗ್ ಡ್ರೀಮ್‌ಲೈನರ್ ತನ್ನ ನಿಯಂತ್ರಣ ಕಳೆದುಕೊಂಡು, ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಯಿತು. ವಿಮಾನ ನಿಲ್ದಾಣದ ಹತ್ತಿರದಲ್ಲಿರುವ ಮೇಘಾನಿ ನಗರದಲ್ಲಿರುವ ಬಿಜೆ ವೈದ್ಯಕೀಯ ಕಾಲೇಜಿನ ವಸತಿ ಆವರಣಕ್ಕೆ ಹೋಗಿ ಬಿದ್ದಿದೆ. ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ 11A ಸೀಟಿನಲ್ಲಿ ಕುಳಿತಿದ್ದ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಮಾತ್ರ ಬದುಕುಳಿದರು. ಜತೆಗೆ ಬಿಜೆ ವೈದ್ಯಕೀಯ ಕಾಲೇಜಿನ ವಸತಿ ಗೃಹದಲ್ಲಿ ವಿದ್ಯಾರ್ಥಿಗಳು ಕೂಡ ಸಾವನ್ನಪ್ಪಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:02 am, Sat, 28 June 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ