ಇನ್ಮುಂದೆ ಪ್ರತಿ ಗ್ರಾ.ಪಂ.ಗೆ ₹ 1.5 ಕೋಟಿ ಅನುದಾನ ನೇರ ಬಿಡುಗಡೆ: ಡಿಸಿಎಂ ಅಶ್ವತ್ಥನಾರಾಯಣ್​ ಘೋಷಣೆ

15ನೇ ಹಣಕಾಸು ಆಯೋಗದಡಿ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆಯಾಗಲಿದೆ. ಈ ಹಣವನ್ನು ಹೀಗೆಯೇ ಖರ್ಚು ಮಾಡಬೇಕೆಂಬ ನಿಬಂಧನೆ ಇರುವುದಿಲ್ಲ ಎಂದು ಹೇಳದರು.

ಇನ್ಮುಂದೆ ಪ್ರತಿ ಗ್ರಾ.ಪಂ.ಗೆ ₹ 1.5 ಕೋಟಿ ಅನುದಾನ ನೇರ ಬಿಡುಗಡೆ: ಡಿಸಿಎಂ ಅಶ್ವತ್ಥನಾರಾಯಣ್​ ಘೋಷಣೆ
ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ
Lakshmi Hegde

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 01, 2020 | 7:29 PM

ರಾಮನಗರ: ಪ್ರತಿ ವರ್ಷ ಪ್ರತಿ ಗ್ರಾಮ ಪಂಚಾಯಿತಿಗೆ ₹ 1.5 ಕೋಟಿ ಅನುದಾನವನ್ನು ನೇರವಾಗಿ ಬಿಡುಗಡೆ ಮಾಡಲಾಗುವುದು ಎಂದು ಡಿಸಿಎಂ ಡಾ. ಸಿ.ಎನ್​. ಅಶ್ವತ್ಥನಾರಾಯಣ್​ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 15ನೇ ಹಣಕಾಸು ಆಯೋಗದಡಿ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆಯಾಗಲಿದೆ. ಈ ಹಣವನ್ನು ಹೀಗೆಯೇ ಖರ್ಚು ಮಾಡಬೇಕೆಂಬ ನಿಬಂಧನೆ ಇರುವುದಿಲ್ಲ ಎಂದು ಹೇಳದರು. ನರೇಗಾ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಜಿಲ್ಲಾ ಪಂಚಾಯಿತಿಯಿಂದ, ಗ್ರಾಮಪಂಚಾಯಿತಿಗೆ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಗರಿಬಿ ಹಠಾವೋ ಸೇರಿ, ಯಾವುದೇ ಮಹತ್ವದ ಘೋಷಣೆಗಳಿಂದಲೂ ಗ್ರಾಮದಲ್ಲಿ ಬಡತನ ನಿರ್ಮೂಲನ ಆಗಲಿಲ್ಲ. 70 ವರ್ಷಗಳಾದರೂ ಬಡತನ ಇನ್ನೂ ಜೀವಂತವಾಗಿಯೇ ಇದೆ. ಕಾಂಗ್ರೆಸ್​ ಬರೀ ಘೋಷಣೆಗಳನ್ನಷ್ಟೇ ಮಾಡುತ್ತ ಬಂತು. ಆದರೆ ಬಿಜೆಪಿ ಕೆಲಸ ಮಾಡುತ್ತಿದೆ. ಹಾಗಾಗಿ ಭಾರತವೂ ಬದಲಾಗುತ್ತಿದೆ. ರಾಮನಗರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ಅನೇಕ ವರ್ಷಗಳಿಂದ ಆಡಳಿತ ನಡೆಸಿವೆ. ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ಕೊಟ್ಟ ಜಿಲ್ಲೆ. ಹಾಗೇ, ಅನೇಕ ನಾಯಕರಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ಜಿಲ್ಲೆ ಇದು. ಹಾಗೇ, ಗೆದ್ದುಹೋದ ಮೇಲೆ ಜಿಲ್ಲೆಯನ್ನು ಮರೆತು, ಚುನಾವಣೆ ಬಂದಾಗ ಪ್ರತ್ಯಕ್ಷ ಆಗುವ ನಾಯಕರಿಗೆ ಪಾಠ ಕಲಿಸಬೇಕಾಗಿದೆ. ಇದನ್ನು ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ತೋರಿಸಬೇಕು ಎಂದು ಹೇಳಿದರು.

ಕೊವಿಡ್​-19 ಸಂಕಷ್ಟ ಕಾಲದಲ್ಲಿ ಜಿಲ್ಲಾಸ್ಪತ್ರೆಗೆ ಹೋದರೆ ಒಂದು ಸುಸಜ್ಜಿತ ಐಸಿಯು ಇರಲಿಲ್ಲ. ಸಣ್ಣ ಜ್ವರ ಬಂದರೂ ಕೆಂಗೇರಿಗೆ ಹೋಗಬೇಕಾಗಿತ್ತು. ಈಗ ಆಸ್ಪತ್ರೆಯಲ್ಲಿ ಎಷ್ಟು ಬದಲಾವಣೆ ಆಗಿದೆ ಎಂಬುದನ್ನು ನೋಡಬಹುದು. ಅಭಿವೃದ್ಧಿಯಾಗಬೇಕು ಎಂದರೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಆ ಮೂಲಕ ಪ್ರತಿ ಗ್ರಾಮದಲ್ಲೂ ಸ್ವರಾಜ್ಯ ಬರಬೇಕು ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ. ಶ್ರೀರಂಗ ಏತ ನೀರಾವರಿ ಯೋಜನೆಗೆ ಹೆಚ್ಚುವರಿಯಾಗಿ 175 ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಹಾಗೇ, ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಬದ್ಧವಾಗಿದೆ ಎಂದು ಡಿಸಿಎಂ ತಿಳಿಸಿದರು. ಈ ವೇಳೆ ಮುಜರಾಯಿ ಸಚಿವ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಪುಟ್ಟಣ್ಣ, ದೇವೇಗೌಡ ಇದ್ದರು.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada