CBIನಿಂದ ವಿನಯ್ ಕುಲಕರ್ಣಿ ಅರೆಸ್ಟ್, ನಾಳೆ ಸಂಜೆಯವರೆಗೆ ನ್ಯಾಯಾಂಗ ಬಂಧನ
ಧಾರವಾಡ: ಜಿ.ಪಂ. ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ CBIನಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನವಾಗಿದೆ. ವಿನಯ್ ಕುಲಕರ್ಣಿಯನ್ನು ಬಂಧಿಸಿದ ಸಿಬಿಐ ತಂಡ ವೈದ್ಯಕೀಯ ತಪಾಸಣೆಗೆ ಕರೆತಂದ ಬಳಿಕ ಧಾರವಾಡದ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ಗೆ ಹಾಜರುಪಡಿಸಿದರು. ವಿನಯ್ ಕುಲಕರ್ಣಿಯನ್ನು 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶೆ H.ಪಂಚಾಕ್ಷರಿ ಎದುರು ಅಧಿಕಾರಿಗಳು ಹಾಜರುಪಡಿಸಿದರು. ನಾಳೆ ಸಂಜೆಯವರೆಗೆ ವಿನಯ್‌ಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಸೆಷನ್ಸ್ ಕೋರ್ಟ್‌ನ ಜಡ್ಜ್ ನ್ಯಾ.ಹೆಚ್.ಪಂಚಾಕ್ಷರಿ ಆದೇಶ ಹೊರಡಿಸಿದ್ದಾರೆ. ಸದ್ಯ, ಮಾಜಿ ಸಚಿವರನ್ನು […]

ಧಾರವಾಡ: ಜಿ.ಪಂ. ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ CBIನಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನವಾಗಿದೆ. ವಿನಯ್ ಕುಲಕರ್ಣಿಯನ್ನು ಬಂಧಿಸಿದ ಸಿಬಿಐ ತಂಡ ವೈದ್ಯಕೀಯ ತಪಾಸಣೆಗೆ ಕರೆತಂದ ಬಳಿಕ ಧಾರವಾಡದ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ಗೆ ಹಾಜರುಪಡಿಸಿದರು.
ವಿನಯ್ ಕುಲಕರ್ಣಿಯನ್ನು 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶೆ H.ಪಂಚಾಕ್ಷರಿ ಎದುರು ಅಧಿಕಾರಿಗಳು ಹಾಜರುಪಡಿಸಿದರು. ನಾಳೆ ಸಂಜೆಯವರೆಗೆ ವಿನಯ್‌ಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಸೆಷನ್ಸ್ ಕೋರ್ಟ್‌ನ ಜಡ್ಜ್ ನ್ಯಾ.ಹೆಚ್.ಪಂಚಾಕ್ಷರಿ ಆದೇಶ ಹೊರಡಿಸಿದ್ದಾರೆ. ಸದ್ಯ, ಮಾಜಿ ಸಚಿವರನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರಿಸಲಾಗುವುದು. ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶೆ ಹೆಚ್.ಪಂಚಾಕ್ಷರಿ ವಿನಯ್ ವಿಚಾರಣೆ ನಡೆಸುವರು ಎಂದು ಹೇಳಲಾಗಿದೆ. ವಿನಯ್ ಕುಲಕರ್ಣಿ ಬೆಂಬಲಿಗರಿಂದ ಪ್ರತಿಭಟನೆ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಅವರನ್ನು ಬೆಳಗಾವಿಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
Published On - 6:18 pm, Thu, 5 November 20



