AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುರಾಘವೇಂದ್ರ ಬ್ಯಾಂಕ್ ಬಹುಕೋಟಿ ಅವ್ಯವಹಾರ ಪ್ರಕರಣ: CID ಕೈಗೆ ಸಿಕ್ಕಿಬಿದ್ದ ಖತರ್ನಾಕ್​ಗಳು

ಬೆಂಗಳೂರು: ಕೋಟಿ-ಕೋಟಿ ಲೆಕ್ಕದಲ್ಲಿ ಹತ್ತಾರು ವರ್ಷಗಳಿಂದ್ಲೂ ವಹಿವಾಟು ನಡೆಸ್ತಿದ್ದ ಕೋಆಪರೇಟಿವ್ ಸೊಸೈಟಿ ಅದು. ಹೀಗೆ ಸಾವಿರಾರು ಗ್ರಾಹಕರ ನಂಬಿಕೆ ಗಳಿಸಿದ್ದ ಸೊಸೈಟಿ ಬ್ಯಾಂಕ್ನಲ್ಲಿ ಲಕ್ಷಾಂತರ ಹಣ ಹೂಡಿಕೆ ಮಾಡಿದ್ದಾರೆ. ಆದ್ರೆ ಇತ್ತಿಚೇಗೆ ಬ್ಯಾಂಕ್ ವ್ಯವಹಾರ ಹಳ್ಳ ಹಿಡಿದಿತ್ತು. ಕಮಿಟಿ ಸದಸ್ಯರು ಅಧ್ಯಕ್ಷನ ಸಮೇತ ಎಸ್ಕೇಪ್ ಅಗಿದ್ರು. ಇದೀಗ ಖತರ್ನಾಕ್ ಕಮಿಟಿ ಗ್ಯಾಂಗ್ ಅನ್ನ CID ಪೊಲೀಸರು ಲಾಕ್ ಮಾಡಿದ್ದಾರೆ. ‘ಗುರು ರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ’ ಬಹುಕೋಟಿ ಅವ್ಯವಹಾರದ ತನಿಖೆಯನ್ನು CID ಈಗ ಚುರುಕುಗೊಳಿಸಿದೆ. ಕೆಲವೇ ದಿನಗಳ […]

ಗುರುರಾಘವೇಂದ್ರ ಬ್ಯಾಂಕ್ ಬಹುಕೋಟಿ ಅವ್ಯವಹಾರ ಪ್ರಕರಣ: CID ಕೈಗೆ ಸಿಕ್ಕಿಬಿದ್ದ ಖತರ್ನಾಕ್​ಗಳು
ಆಯೇಷಾ ಬಾನು
|

Updated on: Oct 13, 2020 | 7:28 AM

Share

ಬೆಂಗಳೂರು: ಕೋಟಿ-ಕೋಟಿ ಲೆಕ್ಕದಲ್ಲಿ ಹತ್ತಾರು ವರ್ಷಗಳಿಂದ್ಲೂ ವಹಿವಾಟು ನಡೆಸ್ತಿದ್ದ ಕೋಆಪರೇಟಿವ್ ಸೊಸೈಟಿ ಅದು. ಹೀಗೆ ಸಾವಿರಾರು ಗ್ರಾಹಕರ ನಂಬಿಕೆ ಗಳಿಸಿದ್ದ ಸೊಸೈಟಿ ಬ್ಯಾಂಕ್ನಲ್ಲಿ ಲಕ್ಷಾಂತರ ಹಣ ಹೂಡಿಕೆ ಮಾಡಿದ್ದಾರೆ. ಆದ್ರೆ ಇತ್ತಿಚೇಗೆ ಬ್ಯಾಂಕ್ ವ್ಯವಹಾರ ಹಳ್ಳ ಹಿಡಿದಿತ್ತು. ಕಮಿಟಿ ಸದಸ್ಯರು ಅಧ್ಯಕ್ಷನ ಸಮೇತ ಎಸ್ಕೇಪ್ ಅಗಿದ್ರು. ಇದೀಗ ಖತರ್ನಾಕ್ ಕಮಿಟಿ ಗ್ಯಾಂಗ್ ಅನ್ನ CID ಪೊಲೀಸರು ಲಾಕ್ ಮಾಡಿದ್ದಾರೆ.

‘ಗುರು ರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ’ ಬಹುಕೋಟಿ ಅವ್ಯವಹಾರದ ತನಿಖೆಯನ್ನು CID ಈಗ ಚುರುಕುಗೊಳಿಸಿದೆ. ಕೆಲವೇ ದಿನಗಳ ಹಿಂದೆಯಷ್ಟೇ ಹೈಕೋರ್ಟ್ ವಿಭಾಗೀಯ ಪೀಠ CID ತನಿಖಾಧಿಕಾರಿಗೆ ಚಾಟಿ ಬೀಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ತನಿಖೆಯಲ್ಲಿ ದೊಡ್ಡ ಸಕ್ಸಸ್ ಕಂಡಿದ್ದಾರೆ.

ಬಂಧನ ಭೀತಿಯಲ್ಲಿ ಅವಿತು ಕುಳಿತಿದ್ದ ಅಧ್ಯಕ್ಷ! CCBಯಿಂದ CIDಗೆ ಕೇಸ್ ವರ್ಗಾವಣೆಯಾಗಿ ತಿಂಗಳು ಉರುಳಿದ್ರು‌ ನಾಪತ್ತೆಯಾಗಿದ್ದ ಗುರು ರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪತ್ತೆಯಾಗಿರ್ಲಿಲ್ಲ. ಅಧ್ಯಕ್ಷ ರಾಮಕೃಷ್ಣ ಸೇರಿದಂತೆ ಇತರ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ವಿಳಂಬ ಧೋರಣೆ ಹಿನ್ನೆಲೆ ಹೈಕೋರ್ಟ್ ಗರಂ ಆಗಿತ್ತು. ಇದಾದ ಬಳಿಕ ಎಚ್ಚೆತ್ತ ಅಧಿಕಾರಿಗಳು ಸೊಸೈಟಿ ಅಧ್ಯಕ್ಷ ರಾಮಕೃಷ್ಣ, ಆತನ ಪುತ್ರ ವೇಣುಗೋಪಾಲ್​ನ ಆಂಧ್ರದಲ್ಲಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ.

ರಾಮಕೃಷ್ಣ ಬಂಧನ ಬೆನ್ನಲ್ಲೇ 8 ಜನ ಅಧಿಕಾರಿಗಳು ಅರೆಸ್ಟ್ ! ಬೆಂಗಳೂರಿನ ಬಸವನಗುಡಿಯ ನೆಟ್ ಕಲ್ಲಪ್ಪ ಸರ್ಕಲ್​ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಗುರು ರಾಘವೇಂದ್ರ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಾವಿರಾರು ಕೋಟಿ ಅವ್ಯಹಾರ ನಡೆದಿತ್ತು. ಬ್ಯಾಂಕ್ ಸೂಪರ್ ಸೀಡಾಗಿ ಸರ್ಕಾರ KAS ದರ್ಜೆಯ ಅಧಿಕಾರಿಯನ್ನು ಮೇಲುಸ್ತುವಾರಿಗಾಗಿ ನೇಮಿಸಿದೆ. ಬ್ಯಾಂಕ್​ನಲ್ಲಿ ಹಣ ಹೂಡಿಕೆ ಮಾಡಿದವ್ರು ಹಣ ಹಿಂಪಡೆಯಲಾಗದೆ ಪರಿತಪಿಸುತ್ತಿದ್ದಾರೆ. ಅತ್ತ ಆಂಧ್ರದಲ್ಲಿ ರಾಮಕೃಷ್ಣ ಪುತ್ರ ವೇಣುಗೋಪಾಲ್ ಬಂಧನವಾಗುತ್ತಿದ್ದಂತೆ ಇತ್ತ ಇತರೆ 7 ಜನ ಆರೋಪಿತ ಅಧಿಕಾರಿಗಳನ್ನ ಬೆಂಗಳೂರಿನಲ್ಲಿ CIDಅಧಿಕಾರಿಗಳು ಬಂಧಿಸಿದ್ದಾರೆ.

ಅದೇನೆ ಇರಲಿ ನಕಲಿ ದಾಖಲೆ ಸೃಷ್ಟಿಸಿ ಖಾತೆ ತೆರೆದು‌ ಕೊಂಟ್ಯಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪವಿದೆ. ಗ್ರಾಹಕರ ಕೋಟಿ ಕೋಟಿ ಹಣ ಕಬಳಿಸಿರುವ ಕಮಿಟಿ ಸದಸ್ಯರು, ಅಧ್ಯಕ್ಷರಾಧಿಯಾಗಿ CID ಲಾಕ್ ಮಾಡಿದೆ. ಮತ್ತೊಂದೆಡೆ ED ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಕೇಸ್ ಸಂಬಂಧ ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಮತ್ತಷ್ಟು ಆರೋಪಿಗಳು ಬಂಧಿತರಾಗೊ ಸಾಧ್ಯತೆಗಳಿವೆ. ಆದ್ರೆ ಮತ್ತೊಂದ್ಕಡೆ ಬೆವರು ಸುರಿಸಿ ದುಡಿದಿದ್ದ ಹಣಕ್ಕಾಗಿ ಗ್ರಾಹಕರು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.