ನಗರದಲ್ಲಿ ವಿದೇಶಿ ಘಾಟು, 8 ಬಾಕ್ಸ್‌ಗಳಲ್ಲಿದ್ದ 1,59,800 ವಿದೇಶಿ ಸಿಗರೇಟು ವಶ

  • TV9 Web Team
  • Published On - 7:21 AM, 14 Oct 2020
ನಗರದಲ್ಲಿ ವಿದೇಶಿ ಘಾಟು, 8 ಬಾಕ್ಸ್‌ಗಳಲ್ಲಿದ್ದ 1,59,800 ವಿದೇಶಿ ಸಿಗರೇಟು ವಶ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ವಿದೇಶಿ ಸಿಗರೇಟುಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಖಚಿತ ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿದ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ತಂಡ ಶಾರ್ಜಾನಿಂದ ವಿಮಾನದಲ್ಲಿ ಬಂದ 8 ಬಾಕ್ಸ್​ಗಳು ಪತ್ತೆಯಾಗಿವೆ.

ಆರಂಭಿಕ ಅಂತದ ಪರಿಶೀಲನೆ ವೇಳೆ ಸಿಕ್ಕ ಬಾಕ್ಸ್​ಗಳನ್ನು X-ray scan ಗೆ ಒಳಪಡಿಸಿದಾಗ ಅದರಲ್ಲಿ ಲಕ್ಷಾಂತರ ಮೌಲ್ಯದ ಸಿಗರೇಟ್​ ಇರುವುದು ಗೊತ್ತಾಗಿದೆ.ಬಾಕ್ಸ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸಿಗರೇಟ್ ಬಂಡಲ್​ಗಳು ಪತ್ತೆಯಾಗಿವೆ. ಬರೋಬ್ಬರಿ 23.97 ಲಕ್ಷ ಮೌಲ್ಯದ 1,59,800 ಸಿಗರೇಟು ಪತ್ತೆಯಾಗಿವೆ. ಸದ್ಯ ಕಸ್ಟಮ್ಸ್ ಅಧಿಕಾರಿಗಳು ಮಾಲ್ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.