ಬಟ್ಟೆಗೆ ಬೆಂಕಿ ಹಚ್ಚಿ ಕಾಡಾನೆ ಮೇಲೆ ಎಸೆದು ಕೊಲೆ: ಇಬ್ಬರ ಬಂಧನ; ಐಷಾರಾಮಿ ರೆಸಾರ್ಟ್ ಬಂದ್​

ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಕಾಡಾನೆಗೆ ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ನಡೆದಿದ್ದ ಐಷಾರಾಮಿ ರೆಸಾರ್ಟ್​ ಅನ್ನು ಬಂದ್ ಮಾಡಲು ಜಿಲ್ಲಾಡಳಿತ ಆದೇಶ ನೀಡಿದೆ.

  • TV9 Web Team
  • Published On - 23:19 PM, 22 Jan 2021
ಬಟ್ಟೆಗೆ ಬೆಂಕಿ ಹಚ್ಚಿ ಕಾಡಾನೆ ಮೇಲೆ ಎಸೆದು ಕೊಲೆ: ಇಬ್ಬರ ಬಂಧನ; ಐಷಾರಾಮಿ ರೆಸಾರ್ಟ್ ಬಂದ್​
ಬಟ್ಟೆಗೆ ಬೆಂಕಿ ಹಚ್ಚಿ ಕಾಡಾನೆ ಮೇಲೆ ಎಸೆದು ಕೊಲೆ

ಚೆನ್ನೈ: ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಕಾಡಾನೆಗೆ ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ನಡೆದಿದ್ದ ಐಷಾರಾಮಿ ರೆಸಾರ್ಟ್​ ಅನ್ನು ಬಂದ್ ಮಾಡಲು ಜಿಲ್ಲಾಡಳಿತ ಆದೇಶ ನೀಡಿದೆ.

ಏನಿದು ಪ್ರಕರಣ?
ಪರವಾನಗಿ ನವೀಕರಿಸದೆ ಅಕ್ರಮವಾಗಿ ರೆಸಾರ್ಟ್‌ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಬಟ್ಟೆಗೆ ಬೆಂಕಿ ಹಚ್ಚಿ ಕಾಡಾನೆ ಮೇಲೆ ಎಸೆದು ವಿಕೃತಿ ಮೆರೆದಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾಡಾನೆ ಮೃತಪಟ್ಟಿತ್ತು. ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ರೆಸಾರ್ಟ್ ಮಾಲೀಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

 

ಮಲಪ್ರಭೆ ಬಳಿ ಸೆಲ್ಫಿ ತೆಗೆಯುವಾಗ ಜೇನುಹುಳು ದಾಳಿ: ಮೂವರು ನೀರುಪಾಲು