ಆನ್​ಲೈನ್​ನಲ್ಲಿ ಮದ್ಯ ಮಾರಾಟದ ಬಗ್ಗೆ ಕೇಳಿದ್ದಕ್ಕೆ ಅಬಕಾರಿ ಸಚಿವ ನಾಗೇಶ್ ಹೇಳಿದ್ದು ಹೀಗೆ

  • TV9 Web Team
  • Published On - 18:10 PM, 25 Aug 2020
ಆನ್​ಲೈನ್​ನಲ್ಲಿ ಮದ್ಯ ಮಾರಾಟದ ಬಗ್ಗೆ ಕೇಳಿದ್ದಕ್ಕೆ ಅಬಕಾರಿ ಸಚಿವ ನಾಗೇಶ್ ಹೇಳಿದ್ದು ಹೀಗೆ
ಹೆಚ್.ನಾಗೇಶ್‌

ಬೆಂಗಳೂರು ಗ್ರಾಮಾಂತರ: ಇನ್ನು ಒಂದು ವಾರದಲ್ಲಿ ಪಬ್‌, ಬಾರ್ ಮತ್ತು ಕ್ಲಬ್‌ಗಳನ್ನು ತೆರೆಯುವ ಸಾಧ್ಯತೆಯಿದೆ ಎಂದು ಜಿಲ್ಲೆಯ ನೆಲಮಂಗಲದಲ್ಲಿ ಅಬಕಾರಿ‌ ಸಚಿವ ನಾಗೇಶ್ ಹೇಳಿಕೆ ನೀಡಿದ್ದಾರೆ. ನೆಲಮಂಗಲದ ಯುನೈಟೆಡ್ ಬ್ರೆವರೀಸ್ ಌಂಡ್ ಡಿಸ್ಟಿಲರೀಸ್‌ಗೆ ಭೇಟಿಕೊಟ್ಟ ವೇಳೆ ಹೇಳಿಕೆ ನೀಡಿದ್ದಾರೆ.

ಕ್ಲಬ್‌ಗಳಲ್ಲಿ ಕ್ರೀಡಾ ಚಟುವಟಿಕೆಗಳು ಇಂದಿನಿಂದ ಶುರುವಾಗಿದೆ. ಆದರೆ, ಊಟ ಹಾಗೂ ಡ್ರಿಂಕ್ಸ್ ಕ್ಯಾರಿ ಮಾಡುವ ಪದ್ಧತಿ ಮಾತ್ರ ಇದೆ. ಸದ್ಯ ಬಾರ್ ಮತ್ತು ಕ್ಲಬ್‌ಗಳಲ್ಲಿ ಕುಳಿತುಕೊಳ್ಳಲು ಅನುಮತಿ ನೀಡಿ ಎಂದು ಕೇಳಿದ್ದೇನೆ. ಮುಂದಿನ ದಿನಗಳಲ್ಲಿ ಸರ್ಕಾರ ಅನುಮತಿ ನೀಡುತ್ತೆ ಎಂದು ಸಚಿನ ನಾಗೇಶ್​ ಹೇಳಿದ್ದಾರೆ.

ನಮ್ಮ ಇಲಾಖೆಯಲ್ಲಿ ಸದ್ಯ 3,000 ಕೋಟಿ ರೂಪಾಯಿ ಲಾಸ್ ಆಗಿದೆ. ಕೆಲ ದಿನಗಳಿಂದ ಆದಾಯ 2,000 ಕೋಟಿ ರೂಪಾಯಿಗೆ ಬಂದು ನಿಂತಿದೆ. ಆದರೆ, ಬಾರ್ ಮತ್ತು ಕ್ಲಬ್‌ಗಳು ಓಪನ್ ಆಗಿ ಸಭೆ ಸಮಾರಂಭಗಳೆಲ್ಲಾ ಶುರುವಾದರೆ ಮಾರಾಟ ಹೆಚ್ಚಾಗುತ್ತೆ. 8 ತಿಂಗಳಲ್ಲಿ ಆಗಿರುವ ನಷ್ಟವನ್ನ ಸರಿದೂಗುತ್ತೇವೆ. ಸರ್ಕಾರದ ಬೊಕ್ಕಸಕ್ಕೆ ಹಣ ಬರುತ್ತದೆ ಅಂತಾ ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅದರ ಬಗ್ಗೆ ನಾವು ಅಧಿಕಾರಿಗಳೊಡನೆ ನಿರಂತರ ಸಭೆ ನಡೆಸುತ್ತಿದ್ದೇವೆ. 25 ಸಾವಿರ ಕೋಟಿ ರೂಪಾಯಿ ಟಾರ್ಗೆಟ್ ಇದೆ. ಆದರೆ, ಜನರು ಮದ್ಯ ಖರಿದಿ ಮಾಡುವ ವಿಚಾರ ಇದು. ಹೀಗಾಗಿ, ಇದಕ್ಕೆ ನಾವು ಯಾವುದೇ ಯೋಜನೆಗಳನ್ನ ರೂಪಿಸಬಾರದು. ಜೊತೆಗೆ, ಜನರಿಗೆ ನಾವು ಒತ್ತಾಯ ಮಾಡುವುದಿಲ್ಲ. ಜನರ ಆರೋಗ್ಯದ ಹಿತದೃಷ್ಟಿಯು ನಮಗೆ ಮುಖ್ಯವಾಗುತ್ತದೆ. ಆದ್ದರಿಂದ ನಾವು ಒತ್ತಾಯ ಮಾಡುವುದು ತಪ್ಪಾಗುತ್ತದೆ ಎಂದು ಹೇಳಿದರು.

ಆನ್​ಲೈನ್​ ಮದ್ಯ ಮಾರಾಟದ ಬಗ್ಗೆ ಸಚಿವರು ಮಾತು
ಆನ್​ಲೈನ್​ನಲ್ಲಿ ಮದ್ಯ ಮಾರಾಟ ಬಗ್ಗೆ ಸಚಿವರು ಬೇರೆ ರಾಜ್ಯಗಳಲ್ಲಿ ಪ್ರಯೋಗಿಕವಾಗಿ ಮಾರಾಟ ಮಾಡಲಾಗುತ್ತಿದೆ.
ಈ ಬಗ್ಗೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳನ್ನ ನೇಮಕ ಮಾಡಿ, ಈ ಯೋಜನೆ ಎಷ್ಟು ಯಶಸ್ವಿಯಾಗಿದೆ. ಇದಕ್ಕೆ ಜನರ ಅನಿಸಿಕೆ ಏನಿದೆ. ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಿ ವರದಿ ನೀಡಲು ಸೂಚಿಸಿದ್ದೇನೆ.

ಬೇರೆ ರಾಜ್ಯಗಳಲ್ಲಿ ಯೋಜನೆ ಯಶಸ್ವಿಯಾಗಿ ಜನರು ಒಪ್ಪಿಕೊಂಡ್ರೆ ಇಲ್ಲಿ ಸಹ ಜನರಿಗೆ ಇದರ ಬಗ್ಗೆ ತಿಳಿಸಬೇಕು. ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ, ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇನೆ. ಆದರೆ, ತರಾತುರಿಯಲ್ಲಿ ಯಾವುದೇ ಯೋಜನೆಗಳನ್ನ ಜಾರಿ ಮಾಡೋಕೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.