AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಬೌಲರ್​ಗಳನ್ನು ಸದೆಬಡಿದ ಫಿಂಚ್​ ಮತ್ತು ಸ್ಮಿತ್, ಆಸ್ಸೀಗಳಿಗೆ ಸುಲಭ ಜಯ

ಮೊದಲ ಒಂದು ದಿನ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಸೋತ ಭಾರತ ಈ ಬಾರಿಯ ಅಭಿಯಾನವನ್ನು ನಿರಾಶಾದಾಯಕವಾಗಿ ಆರಂಭಿಸಿದೆ. ಸಿಡ್ನಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತದ ಬೌಲರ್​ಗಳು ತಮ್ಮ ಖ್ಯಾತಿಗೆ ತಕ್ಕ ಪ್ರದರ್ಶನ ನೀಡಲು ವಿಫಲರಾಗಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು.

ಭಾರತೀಯ ಬೌಲರ್​ಗಳನ್ನು ಸದೆಬಡಿದ ಫಿಂಚ್​ ಮತ್ತು ಸ್ಮಿತ್, ಆಸ್ಸೀಗಳಿಗೆ ಸುಲಭ ಜಯ
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 27, 2020 | 7:45 PM

Share

ಭಾರತದ ಆಸ್ಟ್ರೇಲಿಯ ಪ್ರವಾಸ ನಿರಾಶಾದಾಯಕವಾಗಿ ಆರಂಭಗೊಂಡಿದೆ. ಸಿಡ್ನಿಯಲ್ಲಿ ಇಂದು ಆರಂಭಗೊಂಡ ವಿರಾಟ್​ ಕೊಹ್ಲಿ ಪಡೆಯ ಅಭಿಯಾನ ಸೋಲಿನೊಂದಿಗೆ ಶುರುವಾಗಿದೆ. ಗೆಲ್ಲಲು 375 ರನ್​ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಭಾರತ ಉತ್ತಮ ಪ್ರದರ್ಶನದ ಹೊರತಾಗಿಯೂ ಪಂದ್ಯವನ್ನು 66ರನ್ ಗಳಿಂದ ಸೋತಿತು.

ಉತ್ತಮ ಫಾರ್ಮ್​ಲ್ಲಿರುವ ಶಿಖರ್ ಧವನ್ ಮತ್ತು ಮಾಯಾಂಕ್ ಅಗರ್​ವಾಲ್ ಮೊದಲ 5 ಒವರ್​ಗಳಲ್ಲಿ 53 ರನ್ ಸೇರಿಸಿ ಟೀಮಿಗೆ ಸ್ಫೋಟಕ ಆರಂಭ ಒದಗಿಸಿದರು. 18 ಎಸೆತಗಳಲ್ಲಿ 22 ರನ್ ಬಾರಿಸಿದ ಅಗರವಾಲ್, ಜೊಷ್ ಹೆಜೆಲ್​ವುಡ್​ ಅವರಿಗೆ ಮೊದಲ ಬಲಿಯಾದರು. ಅವರ ಸ್ಥಾನದಲ್ಲಿ ಆಡಲು ಬಂದ ಕೊಹ್ಲಿ ಅಕರ್ಷಕ ಹೊಡೆತಗಳನ್ನು ಬಾರಿಸಿ ಭರವಸೆ ಮೂಡಿಸಿದರಾದರೂ ಹೆಜೆಲ್​ವುಡ್ ಅವರ ಎಸೆತವನ್ನು ಬಾರಿಸುವ ಪ್ರಯತ್ನದಲ್ಲಿ ಆರನ್ ಫಿಂಚ್​ಗೆ ಕ್ಯಾಚ್ ನೀಡಿ ಔಟಾದರು.ಭಾರತಕ್ಕೆ ಆ ಸಂದರ್ಭದಲ್ಲಿ ಉತ್ತಮ ಜೊತೆಯಾಟದ ಅವಶ್ಯಕತೆಯಿತ್ತು. ಮತ್ತೊಂದು ತುದಿಯಲ್ಲಿ ಧವನ್ ಎಚ್ಚರಿಕೆ ಮಿಶ್ರಿತ ಆಕ್ರಮಣಮಣಕಾರಿ ಆಟವಾಡುತ್ತಿದ್ದರು. ಮಧ್ಯಮ ಕ್ರಮಾಂಕದ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಕೆ ಎಲ್ ರಾಹುಲ್ ಅವರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನಗಳು ಬರಲಿಲ್ಲ.

ಆದರೆ, ಈಗ ಕೇವಲ ಬ್ಯಾಟಿಂಗ್ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿರುವ ಹಾರ್ದಿಕ್ ಪಾಂಡ್ಯ, ಧವನ್​ಗೆ ಯೋಗ್ಯ ಜೊತೆಗಾರರಾದರು. ಸ್ಕೋರ್ 101/4 ಅಗಿದ್ದಾಗ ಜೊತೆಗೂಡಿದ ಇವರಿಬ್ಬರು ಆಸ್ಸೀ ಬೌಲರ್​ಗಳನ್ನು ಮನಸಾರೆ ದಂಡಿಸುತ್ತಾ 21 ಓವರ್​ಗಳಲ್ಲಿ 127 ರನ್ ಸೇರಿಸಿದರು. ಅವರು ಕ್ರಿಸ್​​ನಲ್ಲಿರುವವರೆಗೆ ಭಾರತಕ್ಕೆ ಪಂದ್ಯ ಗೆಲ್ಲುವ ಅವಕಾಶವಿದ್ದಿದ್ದು ಸುಳ್ಳಲ್ಲ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಸ್ಪಿನ್ನರ್ ಆಡಂ ಜಂಪಾ 74 ರನ್ ಗಳಿಸಿದ್ದ ಧವನ್ ಅವರನ್ನು ಔಟ್​ ಮಾಡಿದಾಗ ಭಾರತಕ್ಕೆ ತೀವ್ರ ಹಿನ್ನಡೆ ಎದುರಾಯಿತು. 84 ಎಸೆತಗಳೆನ್ನೆದುರಿಸಿದ ಎಡಚ ಧವನ್ 10 ಬೌಂಡರಿಗಳನ್ನು ಬಾರಿಸಿದರು.

ಅದಾದ 5 ಓವರ್​ಗಳ ನಂತರ ಅದೇ ಜಂಪಾ ಭಾರತಕ್ಕೆ ಮತ್ತೊಂದು ಆಘಾತ ನೀಡಿದರು. ಶತಕ ಬಾರಿಸುವುದು ನಿಶ್ಚಿತವೆನಿಸಿದ್ದ ಪಾಂಡ್ಯ ತಮ್ಮ ವೈಯಕ್ತಿಕ ಸ್ಕೋರ್ 90 (76 ಎಸೆತ, 7X4 6X7) ಆಗಿದ್ದಾಗ ಜಂಪಾ ಅವರ ಎಸೆತವನ್ನು ಎತ್ತಿ ಬಾರಿಸುವ ಪ್ರಯತ್ನದಲ್ಲಿ ಮಿಚೆಲ್ ಸ್ಟಾರ್ಕ್ ಅವರಿಗೆ ಕ್ಯಾಚ್ ನೀಡಿ ಔಟಾದರು. ಪಾಂಡ್ಯ ಅವರ ಬಿರುಸಿನ ಹೊಡೆತಗಳ ಆಟ ಬಹಳ ದಿನಗಳವರೆಗೆ ನೆನಪುಳಿಯಲಿದೆ. ಅವರ ನಿರ್ಭೀತಿಯ ಹೊಡೆತಗಳು ಯುವರಾಜ್ ಸಿಂಗ್ ಅವರನ್ನು ಜ್ಞಾಪಿಸುಕೊಳ್ಳುವಂತೆ ಮಾಡಿತು.

ಪಾಂಡ್ಯ 39 ನೇ ಓವರ್​ನಲ್ಲಿ ಔಟಾದಾಗ ಭಾರತದ ಸ್ಕೋರ್ 247/6 ಆಗಿತ್ತು. ಅಂದರೆ ಮಿಕ್ಕಿದ 11 ಓವರ್​ಗಳಲ್ಲಿ ಬಾರತಕ್ಕೆ 128 ರನ್ ಬೇಕಿದ್ದವು. ಪ್ರಮುಖ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ಗೆ ಮರಳಿದ್ದರು. ಸೋಲು ಭಾರತದ ಆಟಗಾರರೆದುರು ನೃತ್ಯ ಮಾಡಲಾರಂಭಿಸಿತ್ತು, ಉಳಿದಿದ್ದು ಔಪಚಾರಿಕತೆ ಮಾತ್ರ.

ಭಾರತದ ಕೊನೆ ಆಟಗಾರರು ಲಾಂಗ್ ಹ್ಯಾಂಡಲ್ ಉಪಯೋಗಿಸಿ ರನ್ ಗಳಿಸಿದ್ದು ಅಂತಿಮ ಸ್ಕೋರ್ 300ರ ಗಡಿ ದಾಟಲು ನೆರವಾಯಿತು. 54 ರನ್​ಗಳಿಗೆ 4 ವಿಕೆಟ್​ ಪಡೆದ ಜಂಪಾ ಅತಿಥೇಯರ ಪರ ಅತ್ಯಂತ ಯಶಸ್ವೀ ಬೌಲರ್ ಎನಿಸಿದರು. ಹೆಜೆಲ್​ವುಡ್​ 55 ರನ್ ನೀಡಿ 3 ವಿಕೆಟ್ ಕಬಳಿಸಿದರು.

ಇದಕ್ಕೆ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಲು ನಿರ್ಧರಿಸಿದ ಆಸ್ಟ್ರೇಲಿಯ, ನಾಯಕ ಫಿಂಚ್ ಅವರ ಸಮಯೋಚಿತ ಶತಕ ಮತ್ತು ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರ ಬಿರುಗಾಳಿ ವೇಗದ ಶತಕಗಳ ನೆರವಿನಿಂದ ಬೃಹತ್ ಮೊತ್ತವನ್ನು (374/6) ಪೇರಿಸಿತು.

ಆರಂಬಿಕ ಓವರ್​​ಗಳಿಂದಲೇ 5 ರನ್​ಗಳ ಸರಾಸರಿಯನ್ನು ಕಾಯ್ದುಕೊಳ್ಳುತ್ತಾ, ಮೊದಲ ಪವರ್ ಪ್ಲೇ ಮುಗಿದ ನಂತರ ರನ್​ ಗಳಿಸುವ ಗತಿಯನ್ನು ಮತ್ತಷ್ಟು ತೀವ್ರಗೊಳಿಸಿದ ಫಿಂಚ್ ಮತ್ತು ಡೇವಿಡ್ ವಾರ್ನರ್ ಕೇವಲ 28 ಓವರ್​ಗಳಲ್ಲಿ 158ರನ್ ಸೇರಿಸಿದರು. ವಾರ್ನರ್ 76 ಎಸೆತಗಳಲ್ಲಿ 69 (6X4) ರನ್ ಬಾರಿಸಿದರು. ನಂತರ ಫಿಂಚ್​ರನ್ನ ಜೊತೆಗೂಡಿದ ಸ್ಮಿತ್ ಎರಡನೇ ವಿಕೆಟ್​ಗೆ ಕೇವಲ 12 ಓವರ್​ಗಳಲ್ಲಿ 108 ರನ್ ಸೇರಿಸಿದರು. 124 ಎಸೆತಗಳಲ್ಲಿ 114 ರನ್ (9X4 2X6) ಬಾರಿಸಿ ಔಟಾಗುವ ಮುನ್ನ ಫಿಂಚ್ ಒಂದು ದಿನದ ಪಂದ್ಯಗಲ್ಲಿ 5,000 ರನ್​ಗಳನ್ನು ಪೂರೈಸಿದರು.

ಸ್ಮಿತ್ ಆಕ್ರಮಣಕಾರಿ ಮನಸ್ಥಿತಿಯೊಂದಿಗೆ ಕ್ರೀಸ್​ಗೆ ಬಂದಿದ್ದು ಏನನ್ನೋ ಸಾಬೀತು ಪ್ರಯತ್ನಿಸಿರುವಂತೆ ಭಾಸವಾಯಿತು. ನಿನ್ನೆ ಫಿಂಚ್, ವಿರಾಟ್​ ಕೊಹ್ಲಿಯವರನ್ನು ಒಂದು ದಿನದ ಪಂದ್ಯಗಳಲ್ಲಿ ವಿಶ್ವದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್ ಅಂತ ಹೇಳಿದ್ದು ಅವರನ್ನು ಕೆರಳಿಸಿದೆಯೇ? ಇರಬಹುದು. ಭಾರತೀಯ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ಸ್ಮಿತ್ ಕೇವಲ 64 ಎಸೆತಗಳಲ್ಲಿ ಶತಕ ಬಾರಿಸಿ, ಆಸ್ಟ್ರೇಲಿಯ ಪರ ಮೂರನೇ ಅತಿವೇಗದ ಶತಕ ಗಳಿಸಿದ ಖ್ಯಾತಿಗೆ ಪಾತ್ರರಾದರು.

ಫಿಂಚ್ ಔಟಾದ ನಂತರ ಸ್ಮಿತ್ ಅವರನ್ನು ಜೊತೆಗೂಡಿದ ಗ್ಲೆನ್ ಮ್ಯಕ್ಸ್​ವೆಲ್ ಸಹ ಆವೇಶಕ್ಕೊಳಗಾದವರಂತೆ ಬ್ಯಾಟ್ ಬೀಸಿ ಕೇವಲ 19 ಎಸೆತಗಳಲ್ಲಿ 45 ರನ್ (5X4 3X6) ಬಾರಿಸಿದರು. ಇನ್ನಿಂಗ್ಸ್​ನ ಕೊನೆಯ ಓವರ್​ನಲ್ಲಿ ಔಟಾದ ಸ್ಮಿತ್ 105 ರನ್​ಗಳನ್ನು (11X4 4X6) 66 ಎಸೆತಗಳಲ್ಲಿ ಚಚ್ಚಿದರು.

ಹಾರ್ದಿಕ್ ಪಾಂಡ್ಯ

ಭಾರತದ ಪರ ಕೇವಲ ಮೊಹಮ್ಮದ್ ಶಮಿ ಮಾತ್ರ ಕಡಿಮೆ ದಂಡಿಸಿಕೊಂಡು 3 ವಿಕೆಟ್​ ಸಹ ಪಡೆದರು. ಮಿಕ್ಕಿದ ಬೌಲರ್​ಗಳೆಲ್ಲ ತಮ್ಮ 10 ಒವರ್​ಗಳ ಕೋಟಾದಲ್ಲಿ 70 ಮತ್ತು 80 ಕ್ಕಿಂತ ಜಾಸ್ತಿ ರನ್​ಗಳನ್ನು ನೀಡಿದರು.

ಎರಡು ತಂಡಗಳ ನಡುವೆ ಎರಡನೇ ಪಂದ್ಯ ಭಾನುವಾರದಂದು ಇದೇ ಮೈದಾನದಲ್ಲಿ ನಡೆಯಲಿದೆ.

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು