ರೊಚ್ಚಿಗೆದ್ದ ರೈತರಿಂದ ವಿಮಾ ಕಂಪನಿ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ
ಗದಗ: ಬೆಳೆ ವಿಮೆ ಹಣ ಪಾವತಿಸಲು ಇನ್ಶೂರೆನ್ಸ್ ಕಂಪನಿ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ ರೈತ ವಿಮಾ ಕಂಪನಿ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಮುಳಗುಂದ ರಸ್ತೆಯಲ್ಲಿರೋ ಬಜಾಜ್ ಅಲಿಯಾಂಜ್ ವಿಮಾ ಕಂಪನಿ ಕಚೇರಿಯಲ್ಲಿ ನಡೆದಿದೆ. ಗದಗ ಜಿಲ್ಲೆಯಲ್ಲಿ ನಿರಂತರ ಮಳೆ, ಪ್ರವಾಹಕ್ಕೆ ಹೆಸರು ಬೆಳೆ ಹಾನಿಯಾಗಿದೆ. ಹೀಗಾಗಿ ಕಂಗಾಲಾದ ರೈತರು ಹೆಸರು ಬೆಳೆ ವಿಮೆ ಹಣ ಪಡೆಯಲು ಕಚೇರಿಗೆ ಹೋಗಿದ್ದಾರೆ. ಈ ವೇಳೆ ಕೃಷಿ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳು ಇಲ್ಲದಕ್ಕೆ ರೈತರು ಕಿಡಿಕಾಡಿದ್ದಾರೆ. ನಂತರ ಅರ್ಧ ಗಂಟೆಯಾದ್ರೂ […]

ಗದಗ: ಬೆಳೆ ವಿಮೆ ಹಣ ಪಾವತಿಸಲು ಇನ್ಶೂರೆನ್ಸ್ ಕಂಪನಿ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ ರೈತ ವಿಮಾ ಕಂಪನಿ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಮುಳಗುಂದ ರಸ್ತೆಯಲ್ಲಿರೋ ಬಜಾಜ್ ಅಲಿಯಾಂಜ್ ವಿಮಾ ಕಂಪನಿ ಕಚೇರಿಯಲ್ಲಿ ನಡೆದಿದೆ.
ಗದಗ ಜಿಲ್ಲೆಯಲ್ಲಿ ನಿರಂತರ ಮಳೆ, ಪ್ರವಾಹಕ್ಕೆ ಹೆಸರು ಬೆಳೆ ಹಾನಿಯಾಗಿದೆ. ಹೀಗಾಗಿ ಕಂಗಾಲಾದ ರೈತರು ಹೆಸರು ಬೆಳೆ ವಿಮೆ ಹಣ ಪಡೆಯಲು ಕಚೇರಿಗೆ ಹೋಗಿದ್ದಾರೆ. ಈ ವೇಳೆ ಕೃಷಿ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳು ಇಲ್ಲದಕ್ಕೆ ರೈತರು ಕಿಡಿಕಾಡಿದ್ದಾರೆ.
ನಂತರ ಅರ್ಧ ಗಂಟೆಯಾದ್ರೂ ಕಚೇರಿಗೆ ಅಧಿಕಾರಿಗಳು ಬಂದಿಲ್ಲ. ಹಾಗೂ ಹೆಸರು ಬೆಳೆ ವಿಮೆ ಹಣ ನೀಡಲು ನಿರಾಕರಿಸಿದ್ದಕ್ಕೆ ವಿಮಾ ಕಂಪನಿ ಕಚೇರಿ ಶಟರ್ ಎಳೆದು ರೈತರು ಆಕ್ರೋಶ ಹೊರ ಹಾಕಿದ್ದಾರೆ. ಜಿಲ್ಲಾಧಿಕಾರಿ ಹೇಳಿದ್ದಾರೆ ಯಾಕೆ ವಿಮಾ ಕಂಪನಿ ಹಣ ನೀಡಲ್ಲ ಅಂತ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.






