ಕೊರೊನಾ ಎಫೆಕ್ಟ್​! HMT ಲೇಔಟ್​ನಲ್ಲಿ.. ಮನೆ ಮಾಲೀಕ-ಬಾಡಿಗೆದಾರನ ನಡುವೆ ಡಿಶುಂ ಡಿಶುಂ

  • TV9 Web Team
  • Published On - 14:43 PM, 9 Nov 2020
ಕೊರೊನಾ ಎಫೆಕ್ಟ್​! HMT ಲೇಔಟ್​ನಲ್ಲಿ.. ಮನೆ ಮಾಲೀಕ-ಬಾಡಿಗೆದಾರನ ನಡುವೆ ಡಿಶುಂ ಡಿಶುಂ

ಬೆಂಗಳೂರು: ಮನೆ ಖಾಲಿ ಮಾಡುವ ವಿಚಾರಕ್ಕೆ ಮನೆ ಮಾಲೀಕ ಮತ್ತು ಬಾಡಿಗೆದಾರನ ನಡುವೆ ಮಾತಿನ ಚಕಮಕಿ ನಡೆದು ಅದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಪ್ರಸಂಗ ಆರ್​.ಟಿ.ನಗರದ ಹೆಚ್​ಎಂಟಿ ಲೇಔಟ್​ನಲ್ಲಿ ನಡೆದಿದೆ.

ಸೈಯದ್ ಇಲಿಯಾಸ್ ಮನೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಮೊಹಮ್ಮದ್ ನದ್ವಿ ಬಾಡಿಗೆಗಿದ್ದಾರೆ. ದೇಶದಲ್ಲಿ ಕೊರೊನಾ ಹಾವಳಿ ಶುರುವಾದಾಗಿನಿಂದ ಕೆಲಸಕ್ಕೆ ಹೋಗಲಾಗದೆ ಹಣವಿಲ್ಲದೆ ಮನೆ ಬಾಡಿಗೆ ನೀಡಲು ಸತಾಯಿಸಿದ್ದ. ಹೀಗಾಗಿ ಮನೆ ಮಾಲೀಕ ಸೈಯದ್, ಬಾಡಿಗೆ ಹಣ ಕೊಡು ಇಲ್ಲ ಅಂದ್ರೆ ಮನೆ ಖಾಲಿ ಮಾಡು ಅಂತ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದ. ಆದರೆ ನದ್ವಿ ನಾನು ಬಾಡಿಗೆ ಹಣ ಕೊಡಲ್ಲ ಎಂದಿದ್ದಾನೆ.

ಇದಕ್ಕೆ ರೊಚ್ಚಿಗೆದ್ದ ಮಾಲೀಕ ಬಾಡಿಗೆದಾರ ನದ್ವಿ ಜೊತೆ ಗಲಾಟೆಗೆ ಮುಂದಾಗಿದ್ದಾನೆ. ಈ ವೇಳೆ ಇಬ್ಬರೂ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಗಲಾಟೆ ಬಳಿಕ ಆರ್​.ಟಿ.ನಗರ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ. ಸದ್ಯ ಇಬ್ಬರ ವಿರುದ್ಧವೂ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ಮಾಡ್ತಿದ್ದಾರೆ.