4 ಏರಿಯಾ ಲಾಕ್‌ಡೌನ್: Mobile Phone ‘ಸಂಚಾರಿ’ ಆಗಿರಲೇ ಬೇಕು, ಇಲ್ಲದಿದ್ದರೆ ಕೇಸ್
ಬೆಂಗಳೂರು: ನಗರದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಸಮ್ಮಖದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಿರುವ ಏರಿಯಾವನ್ನು ಲಾಕ್‌ಡೌನ್ ಮಾಡಲು ಸೂಚಿಸಿದ್ದಾರೆ. ಬೆಂಗಳೂರಿನ ಚಿಕ್ಕಪೇಟೆ, ಚಾಮರಾಜಪೇಟೆ, ಕಲಾಸಿಪಾಳ್ಯ ಮತ್ತು ಕೆ.ಆರ್ ಮಾರ್ಕೆಟ್ ಸೇರಿದಂತೆ 4 ಏರಿಯಾಗಳು ಲಾಕ್‌ಡೌನ್ ಮಾಡಲು ಸೂಚಿಸಲಾಗಿದೆ. ಈ ಬಗ್ಗೆ ಸಿಎಂ ನೇತೃತ್ವದ ಸಭೆ ಬಳಿಕ ಸಚಿವ ಆರ್.ಅಶೋಕ್ ಮಾತನಾಡಿದ್ದಾರೆ. ಮನೆಯಲ್ಲೇ ಮೊಬೈಲ್ ಬಿಟ್ರೆ ಕ್ರಿಮಿನಲ್ ಕೇಸ್: ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ಚರ್ಚಿಸಿದ್ದೇವೆ. ಕಂಟೈನ್ಮೆಂಟ್ ಏರಿಯಾದವರು ಮೊಬೈಲ್ […]

ಬೆಂಗಳೂರು: ನಗರದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಸಮ್ಮಖದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಿರುವ ಏರಿಯಾವನ್ನು ಲಾಕ್‌ಡೌನ್ ಮಾಡಲು ಸೂಚಿಸಿದ್ದಾರೆ.
ಬೆಂಗಳೂರಿನ ಚಿಕ್ಕಪೇಟೆ, ಚಾಮರಾಜಪೇಟೆ, ಕಲಾಸಿಪಾಳ್ಯ ಮತ್ತು ಕೆ.ಆರ್ ಮಾರ್ಕೆಟ್ ಸೇರಿದಂತೆ 4 ಏರಿಯಾಗಳು ಲಾಕ್‌ಡೌನ್ ಮಾಡಲು ಸೂಚಿಸಲಾಗಿದೆ. ಈ ಬಗ್ಗೆ ಸಿಎಂ ನೇತೃತ್ವದ ಸಭೆ ಬಳಿಕ ಸಚಿವ ಆರ್.ಅಶೋಕ್ ಮಾತನಾಡಿದ್ದಾರೆ.
ಮನೆಯಲ್ಲೇ ಮೊಬೈಲ್ ಬಿಟ್ರೆ ಕ್ರಿಮಿನಲ್ ಕೇಸ್: ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ಚರ್ಚಿಸಿದ್ದೇವೆ. ಕಂಟೈನ್ಮೆಂಟ್ ಏರಿಯಾದವರು ಮೊಬೈಲ್ ಮನೆಯಲ್ಲಿ ಬಿಡಬಾರದು. ಫೋನ್ ತಮ್ಮ ಬಳಿಯೇ ಇಟ್ಟುಕೊಂಡು ಓಡಾಡಬೇಕು. ಮನೆಯಲ್ಲಿ ಮೊಬೈಲ್ ಬಿಟ್ಟು ಹೋದರೆ ಕ್ರಿಮಿನಲ್ ಕೇಸ್ ಹಾಕಲಾಗುತ್ತೆ ಎಂದು ಅಶೋಕ್ ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮಕ್ಕೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ವಾರ್ಡ್ ಮಟ್ಟದಲ್ಲಿ ಅಧಿಕಾರಿಗಳ ತಂಡ ರಚಿಸಿ ಸೋಂಕಿತ ವ್ಯಕ್ತಿಯಿರುವ ಮನೆಯ ರಸ್ತೆ ಸೀಲ್‌ಡೌನ್ ಮಾಡಲು ತಿಳಿಸಿದ್ದೇವೆ. ಸಿದ್ದಾಪುರ, ವಿವಿಪುರಂ, ವಿದ್ಯಾರಣ್ಯಪುರ, ಕಲಾಸಿಪಾಳ್ಯ, ಧರ್ಮರಾಯಸ್ವಾಮಿ ವಾರ್ಡ್‌ಗಳಲ್ಲಿ ಸೋಂಕಿತ ವ್ಯಕ್ತಿಗಳಿರುವ ಮನೆಯ ರಸ್ತೆಗಳು 10 ದಿನ ಸೀಲ್‌ಡೌನ್ ಮಾಡಲಾಗುವುದು. ಕೊರೊನಾ ಪ್ರಕರಣ ಕಂಡು ಬಂದರೆ ಬೇರೆ ವಾರ್ಡ್‌ಗಳಲ್ಲಿಯೂ ಇದೇ ನಿಯಮ ಅನ್ವಯವಾಗುತ್ತೆ. ರಾಜ್ಯದ ಇತರೆ ಜಿಲ್ಲೆಗಳಿಗೂ ಇದು ಅನ್ವಯವಾಗಲಿದೆ. ಪ್ರತಿ ವಾರ್ಡ್‌ನಲ್ಲಿ ಫೀವರ್ ಕ್ಲಿನಿಕ್ ತೆರೆಯಲಾಗುವುದು ಎಂದಿದ್ದಾರೆ.
Published On - 2:38 pm, Mon, 22 June 20




