AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಧೀ ತತ್ವವೇ ಕಾಂಗ್ರೆಸ್ ತತ್ವ, ಅದನ್ನ ನಾವೆಲ್ಲಾ ಅಳವಡಿಸಿಕೊಂಡಿದ್ದೇವೆ -ಡಿ.ಕೆ. ಶಿವಕುಮಾರ್

ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮೊದಲ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇಂದು ಗಾಂಧೀ ಜಯಂತಿ ಕಾರಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುಂಬರುವ ಬೆಳಗಾವಿ ಉಪ ಚುನಾವಣೆ ತರಾರಿಗೆ ಸಿದ್ಧರಾಗುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷನಾಗಿ ಜವಾಬ್ದಾರಿ ತೆಗೆದುಕೊಂಡ ಮೇಲೆ ಬೆಂಗಳೂರು ಹೊರತುಪಡಿಸಿ ಇದೇ ಮೊದಲ ಸಭೆಯಾಗಿದೆ. ಈ ವೇಳೆ ಮಾತನಾಡಿ ಅವರು ಗಾಂಧೀಜಿಯವರ ತತ್ವವೇ ಕಾಂಗ್ರೆಸ್​ನ ತತ್ವ. ಇದನ್ನ ನಾವೆಲ್ಲರೂ ಅಳವಡಿಸಿಕೊಂಡಿದ್ದೇವೆ. ಸಂವಿಧಾನ ಪೀಠಿಕೆ ಓದಿ ನಾನು ಅಧಿಕಾರ ತೆಗೆದುಕೊಂಡಿದ್ದೇನೆ. ಪದಗ್ರಹಣ ಕಾರ್ಯಕ್ರಮ ಒಂದು […]

ಗಾಂಧೀ ತತ್ವವೇ ಕಾಂಗ್ರೆಸ್ ತತ್ವ, ಅದನ್ನ ನಾವೆಲ್ಲಾ ಅಳವಡಿಸಿಕೊಂಡಿದ್ದೇವೆ -ಡಿ.ಕೆ. ಶಿವಕುಮಾರ್
ಆಯೇಷಾ ಬಾನು
| Edited By: |

Updated on: Oct 02, 2020 | 3:23 PM

Share

ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮೊದಲ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇಂದು ಗಾಂಧೀ ಜಯಂತಿ ಕಾರಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುಂಬರುವ ಬೆಳಗಾವಿ ಉಪ ಚುನಾವಣೆ ತರಾರಿಗೆ ಸಿದ್ಧರಾಗುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷನಾಗಿ ಜವಾಬ್ದಾರಿ ತೆಗೆದುಕೊಂಡ ಮೇಲೆ ಬೆಂಗಳೂರು ಹೊರತುಪಡಿಸಿ ಇದೇ ಮೊದಲ ಸಭೆಯಾಗಿದೆ.

ಈ ವೇಳೆ ಮಾತನಾಡಿ ಅವರು ಗಾಂಧೀಜಿಯವರ ತತ್ವವೇ ಕಾಂಗ್ರೆಸ್​ನ ತತ್ವ. ಇದನ್ನ ನಾವೆಲ್ಲರೂ ಅಳವಡಿಸಿಕೊಂಡಿದ್ದೇವೆ. ಸಂವಿಧಾನ ಪೀಠಿಕೆ ಓದಿ ನಾನು ಅಧಿಕಾರ ತೆಗೆದುಕೊಂಡಿದ್ದೇನೆ. ಪದಗ್ರಹಣ ಕಾರ್ಯಕ್ರಮ ಒಂದು ಕೋಟಿ ನಲವತ್ತು ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಇದರ ಬಗ್ಗೆ ದಾಖಲೆಗಳಿದ್ದು ಇದನ್ನ ನನ್ನ ಬಗ್ಗೆ ಹೇಳಿಕೊಳ್ಳುತ್ತಿಲ್ಲ. ಕಾಂಗ್ರೆಸ್ ತತ್ವ ಸಿದ್ದಾಂತ ಜನ ಬೆಂಬಲದ ಬಗ್ಗೆ ಹೇಳುತ್ತಿದ್ದೇನೆ.

ಬಿಜೆಪಿ ಜಾತಿ, ಮತ ಧರ್ಮದ ಹೆಸರಿನಲ್ಲಿ ವ್ಯವಸ್ಥೆಯನ್ನ ಹಾಳು ಮಾಡುತ್ತಿದ್ದಾರೆ. ರೈತ ವಿರೋಧಿ ಕಾನೂನು ಬಗ್ಗೆ ಸೋನಿಯಾ ಗಾಂಧಿ ಸಹಿ ಸಂಗ್ರಹ ಮಾಡುವಂತೆ ಸೂಚಿಸಿದ್ದಾರೆ. ಬೆಳಗಾವಿಯಿಂದ ಸಹಿ ಸಂಗ್ರಹದಲ್ಲಿ ಅತೀ ಹೆಚ್ಚು ಸಹಿ ಮಾಡಿ ಕಳುಹಿಸಿ. ಸೋನಿಯಾ ಗಾಂಧಿ ಎಲ್ಲಾ ಸಹಿ ಸಂಗ್ರಹಗಳನ್ನ ರಾಷ್ಟ್ರಪತಿ ಬಳಿ ತೆಗೆದುಕೊಂಡು ಹೋಗಲಿದ್ದಾರೆ.

ಸತೀಶ್ ಜಾರಕಿಹೊಳಿ‌ಯನ್ನ ಸಾಹುಕಾರ್ ಅಂದ ಡಿಕೆಶಿ: ಕೆಪಿಸಿಸಿ ಬೆಳಗಾವಿ ಕಚೇರಿಯನ್ನ ಸಾಹುಕಾರ್ ಸೇರಿಕೊಂಡು ಕಟ್ಟಿದ್ದಾರೆ. ಸಿಎಲ್‌ಪಿ ಸಭೆಯಲ್ಲಿ ಚರ್ಚೆ ಮಾಡಿ ಘಟಪ್ರಭಾ ಸೇವಾದಳ ತರಬೇತಿ ಕೇಂದ್ರಕ್ಕೆ ಮೂರು ಕೋಟಿ ಕೊಡಿಸುತ್ತೇನೆ. ಸತೀಶ್ ಜಾರಕಿಹೊಳಿ‌ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮೇಲೆ ಏನು ಜವಾಬ್ದಾರಿ ಬೇಕು ಅಂತಾ ಕೇಳಿದ್ದೆ.

ಆಗ ತರಬೇತಿ ನೀಡುವ ಜವಾಬ್ದಾರಿಯನ್ನ ಕೊಡಿ ಅಂತಾ ಕೇಳಿದ್ದರು. ಉತ್ತರ ಕರ್ನಾಟಕ, ಉಡುಪಿಯಲ್ಲಿ ಮತ್ತು ಬೆಂಗಳೂರಿನಲ್ಲಿ ಒಂದು ತರಬೇತಿ ಕೇಂದ್ರ ಇದ್ದು. ಇನ್ನು ಒಂದು ಸೇವಾದಳ ತರಬೇತಿ ಕೇಂದ್ರ ಮಾಡುವ ಚಿಂತನೆ ನಡೆದಿದೆ ಎಂದು ಘಟಪ್ರಭಾ ಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ರು.

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್