ರಾಜ್ಯದಲ್ಲಿ ಡ್ರಗ್ ಮಾಫಿಯಾ ಜೋರು, ಗುಟ್ಕಾದಲ್ಲಿಟ್ಟು ಡ್ರಗ್ ಮಾರಲಾಗುತ್ತಿದೆಯಾ?
ಬೆಂಗಳೂರು: ರಾಜ್ಯದಲ್ಲಿ ಗುಟ್ಕಾದಲ್ಲಿ ಡ್ರಗ್ ಮಾರುವ ಜಾಲ ಇದೆಯಾ? ಈ ಪ್ರಶ್ನೆ ಮೂಡಲು ಕಾರಣ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ನೀಡಿರುವ ಸೂಚನೆ. ಹೌದು ರಾಜ್ಯಪಾಲ ವಜುಭಾಯಿ ವಾಲಾ ಅವರ ಭೇಟಿಯವೇಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ರಾಜ್ಯಪಾಲರು ಈ ಸೂಚನೆ ನೀಡಿದ್ದಾರೆ. ಈ ಬಗ್ಗೆ ರಾಜ್ಯಪಾಲರ ಭೇಟಿ ನಂತರ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲರು ನಮ್ಮನ್ನ ಕರೆದಿದ್ದರು. ಗುಟ್ಕಾದಲ್ಲಿ ಡ್ರಗ್ ಬರುತ್ತೆ ಅನ್ನೋ ಮಾಹಿತಿ […]
ಬೆಂಗಳೂರು: ರಾಜ್ಯದಲ್ಲಿ ಗುಟ್ಕಾದಲ್ಲಿ ಡ್ರಗ್ ಮಾರುವ ಜಾಲ ಇದೆಯಾ? ಈ ಪ್ರಶ್ನೆ ಮೂಡಲು ಕಾರಣ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ನೀಡಿರುವ ಸೂಚನೆ. ಹೌದು ರಾಜ್ಯಪಾಲ ವಜುಭಾಯಿ ವಾಲಾ ಅವರ ಭೇಟಿಯವೇಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ರಾಜ್ಯಪಾಲರು ಈ ಸೂಚನೆ ನೀಡಿದ್ದಾರೆ.
ಈ ಬಗ್ಗೆ ರಾಜ್ಯಪಾಲರ ಭೇಟಿ ನಂತರ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲರು ನಮ್ಮನ್ನ ಕರೆದಿದ್ದರು. ಗುಟ್ಕಾದಲ್ಲಿ ಡ್ರಗ್ ಬರುತ್ತೆ ಅನ್ನೋ ಮಾಹಿತಿ ಇದೆ. ಅದನ್ನ ಗಂಭೀರವಾಗಿ ಪರಿಗಣಿಸಿ ಅಂತಾ ಹೇಳಿದ್ದಾರೆ. ಹಾಗೇನೆ ಡ್ರಗ್ಸ್ ಮಾಫಿಯಾ ಕಂಟ್ರೋಲ್ ಮಾಡ್ತಿರೋ ವಿಚಾರದಲ್ಲಿ ಮತ್ತಷ್ಟು ಬಿಗಿಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೆ. ಜೊತೆಗೆ ಡ್ರಗ್ಸ್ ವಿರುದ್ದ ಸಮರ ಸಾರಿರೋ ಕ್ರಮಕ್ಕೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನೂ ದೊಡ್ಡ ಪ್ರಮಾಣದಲ್ಲಿ ಕಾರ್ಯ ಮಾಡಿ ಅಂತ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಇಷ್ಟೇ ಅಲ್ಲ ಕೊರೊನಾ ಮಾರಿಯ ವಿರುದ್ಧ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಮತ್ತಷ್ಟು ಕ್ರಮವಹಿಸಲು ಸೂಚಿಸಿದ್ದಾರೆ. ಹಾಗೇನೆ ಆಯುರ್ವೇದಕ್ಕೆ ಒತ್ತು ಕೊಡಲು ತಿಳಿಸಿದ್ದಾರೆ. ಇದರ ಜೊತೆಗೆ ಇನ್ನೂ ಕೆಲ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಆದ್ರೆ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಬೊಮ್ಮಾಯಿ ತಿಳಿಸಿದರು.