DK ಶಿವಕುಮಾರ್ ಸಾಕಷ್ಟು ಬಾರಿ ನನ್ನ ಬಳಿ ಬಂದು ಕಾಲು ಹಿಡಿದಿದ್ರು -CPY ತಿರುಗೇಟು
[lazy-load-videos-and-sticky-control id=”fAMeUVMfxPg”] ಬೆಂಗಳೂರು: ಯೋಗೇಶ್ವರ್ ನನ್ನ ಬಳಿ ಬಂದಿದ್ದರೆಂದು KPCC ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಕ್ಕೆ ಪ್ರಕಟಣೆ ನೀಡಿ ಸಿ.ಪಿ.ಯೋಗೇಶ್ವರ್ ತಿರುಗೇಟು ನೀಡಿದ್ದಾರೆ. ಪರಿಷತ್ಗೆ ನನ್ನ ನೇಮಕಾತಿಯ ಬಗ್ಗೆ 6 ತಿಂಗಳ ಹಿಂದೆಯೇ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬಗ್ಗೆ ನನಗೆ ಖುದ್ದು ಮುಖ್ಯಮಂತ್ರಿಗಳೇ ಮನೆಗೆ ಕರೆದು ಹೇಳಿದ್ರು. ನಾನು ಡಿಕೆ ಶಿವಕುಮಾರ್ ಮನೆಗೆ ಹೋಗಿದ್ದಕ್ಕೆ ಸಾಕ್ಷಿ ಇದ್ದರೆ ಕೊಡಲಿ. ಬೇಕಿದ್ದರೆ, ಅವರ ಮನೆ ಬಳಿ ಇರುವ ಸಿಸಿಟಿವಿ ದೃಶ್ಯ ನೀಡಲಿ ಎಂದು ಹೇಳಿದ್ದಾರೆ. ಜೊತೆಗೆ, ಅವರೇ ಸಾಕಷ್ಟು […]
[lazy-load-videos-and-sticky-control id=”fAMeUVMfxPg”]
ಬೆಂಗಳೂರು: ಯೋಗೇಶ್ವರ್ ನನ್ನ ಬಳಿ ಬಂದಿದ್ದರೆಂದು KPCC ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಕ್ಕೆ ಪ್ರಕಟಣೆ ನೀಡಿ ಸಿ.ಪಿ.ಯೋಗೇಶ್ವರ್ ತಿರುಗೇಟು ನೀಡಿದ್ದಾರೆ.
ಪರಿಷತ್ಗೆ ನನ್ನ ನೇಮಕಾತಿಯ ಬಗ್ಗೆ 6 ತಿಂಗಳ ಹಿಂದೆಯೇ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬಗ್ಗೆ ನನಗೆ ಖುದ್ದು ಮುಖ್ಯಮಂತ್ರಿಗಳೇ ಮನೆಗೆ ಕರೆದು ಹೇಳಿದ್ರು. ನಾನು ಡಿಕೆ ಶಿವಕುಮಾರ್ ಮನೆಗೆ ಹೋಗಿದ್ದಕ್ಕೆ ಸಾಕ್ಷಿ ಇದ್ದರೆ ಕೊಡಲಿ. ಬೇಕಿದ್ದರೆ, ಅವರ ಮನೆ ಬಳಿ ಇರುವ ಸಿಸಿಟಿವಿ ದೃಶ್ಯ ನೀಡಲಿ ಎಂದು ಹೇಳಿದ್ದಾರೆ.
ಜೊತೆಗೆ, ಅವರೇ ಸಾಕಷ್ಟು ಬಾರಿ ನನ್ನ ಬಳಿ ಬಂದು ಕಾಲು ಹಿಡಿದಿದ್ರು. ಆ ದೃಶ್ಯಗಳು ನನ್ನ ಬಳಿ ಇವೆ. ಬೇಕೆಂದರೆ ಪ್ರದರ್ಶಿಸುತ್ತೇನೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಕೆಪಿಸಿಸಿ ಅಧ್ಯಕ್ಷರಿಗೆ ಸವಾಲ್ ಎಸೆದಿದ್ದಾರೆ. ನನಗೆ ಸಚಿವ ಸ್ಥಾನ ಸಿಗುತ್ತೆಂದು ಡಿಕೆಶಿ ಸುಳ್ಳು ಹೇಳುತ್ತಿದ್ದಾರೆ. ಅವರ ಬಳಿ ಯಾವುದೇ ಸಾಕ್ಷಿ ಇದ್ದರೆ ಜನರ ಮುಂದಿಡಲಿ. ನಾನೂ ಸಾಕ್ಷ್ಯಗಳನ್ನ ರಾಜ್ಯದ ಜನರ ಮುಂದೆ ಇಡಲು ಸಿದ್ಧ ಎಂದು ಹೇಳಿದ್ದಾರೆ.
Published On - 2:06 pm, Fri, 31 July 20