ಲೌಡ್​ಸ್ಪೀಕರ್ ಉಪಟಳ ತಡೆಯಲು ವಿಫಲ: ಅಧಿಕಾರಿಗಳಿಗೆ ಹೈಕೋರ್ಟ್​ ಚಾಟಿ

ಈ ಅಧಿಕಾರಿಗೆ ಪರಿಸರ ಕಾನೂನಿನ ಎ ಬಿ ಸಿ ಸಹ ಗೊತ್ತಿಲ್ಲ. ಆದರೂ ಪರಿಸರ ಅಧಿಕಾರಿಯಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ಇಷ್ಟೇಕೆ ಅಸಹಾಯಕರಾಗಿದ್ದಾರೆ ಎಂದು ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿತು.

ಲೌಡ್​ಸ್ಪೀಕರ್ ಉಪಟಳ ತಡೆಯಲು ವಿಫಲ: ಅಧಿಕಾರಿಗಳಿಗೆ ಹೈಕೋರ್ಟ್​ ಚಾಟಿ
ಕರ್ನಾಟಕ ಹೈಕೋರ್ಟ್​
preethi shettigar

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 01, 2020 | 7:07 PM

ಬೆಂಗಳೂರು: ಈ ಅಧಿಕಾರಿಗೆ ಪರಿಸರ ಕಾನೂನಿನ ಎ ಬಿ ಸಿ ಸಹ ಗೊತ್ತಿಲ್ಲ. ಆದರೂ ಪರಿಸರ ಅಧಿಕಾರಿಯಾಗಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಜವಾಬ್ದಾರಿಯನ್ನು ಮತ್ತೊಂದು ಸಂಸ್ಥೆಗೆ ವರ್ಗಾಯಿಸಿ ಕೈ ತೊಳೆದುಕೊಂಡಿದ್ದು ಹೇಗೆ? ಪೊಲೀಸ್ ಅಧಿಕಾರಿಗಳು ಇಷ್ಟೇಕೆ ಅಸಹಾಯಕರಾಗಿದ್ದಾರೆ ಎಂದು ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿತು.

ವಿಜಯನಗರ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಪ್ರಾರ್ಥನಾ ಮಂದಿರದಲ್ಲಿ ಕಾನೂನುಬಾಹಿರವಾಗಿ ಧ್ವನಿವರ್ಧಕ ಬಳಕೆ ಮಾಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವನ್ನು ತೋರಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ನ್ಯಾಯಾಧೀಶರು ಮಾತಿನ ಚಾಟಿ ಬೀಸಿದರು.

ಕೆಎಸ್​ಪಿಸಿಬಿ ಸಲ್ಲಿಸಿದ ಪ್ರಮಾಣ ಪತ್ರವನ್ನು ಆಧರಿಸಿ ನ್ಯಾಯಪೀಠ ಮೇಲಿನಂತೆ ಅಸಮಾಧಾನ ವ್ಯಕ್ತಪಡಿಸಿತು. ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಪರಿಸರ ಅಧಿಕಾರಿಗೆ ಅಧಿಕಾರವಿದೆ. ಈ ಕೆಲಸವನ್ನು ಅವರು ತಕ್ಷಣ ಮಾಡಬೇಕು. ‘ರಾಜ್ಯ ಸರ್ಕಾರವು ಮಾಲಿನ್ಯ ನಿಯಂತ್ರಣ ಮಂಡಳಿ ಈ ಸಂಬಂಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳುತ್ತದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯ ಸರ್ಕಾರದ ಮೇಲೆ ಜವಾಬ್ದಾರಿ ಹೊರಿಸುತ್ತಿದೆ’ ಎಂದು ನ್ಯಾಯಪೀಠವು ಹೇಳಿತು.

ಅಪರಾಧಿಗಳ ವಿರುದ್ಧ ಕ್ರಮ ಜರುಗಿಸುವಂತೆ ಫೆ.28ರಂದು ನ್ಯಾಯಾಲಯ ಆದೇಶ ನೀಡಿದ್ದರೂ, ಮಾಲಿನ್ಯ ನಿಯಂತ್ರಣ ಮಂಡಳಿ ಅದನ್ನು ಲಕ್ಷ್ಯಕ್ಕೆ ತೆಗೆದುಕೊಂಡಿಲ್ಲ. ಮಂಡಳಿಯ ಅಧ್ಯಕ್ಷರಿಂದ ನ್ಯಾಯಾಂಗ ನಿಂದನೆಯಾಗಿದೆ. ಮಾಲಿನ್ಯ ನಿಯಂತ್ರಣ ಅಧಿಕಾರಿಯು ಪರಿಸರ ಸಂರಕ್ಷಣಾ ಕಾಯ್ದೆಯ 15ನೇ ಪರಿಚ್ಛೇದವನ್ನು ಮುಂದಿಟ್ಟು, ಹೊಣೆಯಿಂದ ನುಣುಚಿಕೊಂಡಿದ್ದಾರೆ. ಈ ಪರಿಚ್ಛೇದವು ಕಾರ್ಯ ನಿರ್ದೇಶನ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಆದರೆ ಇದೇ ಪರಿಚ್ಛೇದವು, ಪರಿಸರ ಸಂರಕ್ಷಣಾ ನಿಯಮಾವಳಿ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲು ಪರಿಸರ ಅಧಿಕಾರಿಗೆ ಅಧಿಕಾರ ನೀಡುತ್ತದೆ. ಆದರೂ ಅವರು ನ್ಯಾಯಾಲಯದ ಆದೇಶ ಅನುಷ್ಠಾನಗೊಳಿಸಲು ಅಸಹಾಯಕತೆ ತೋರಿದ್ದಾರೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.

ನಾವು ನ್ಯಾಯಾಂಗ ನಿಂದನೆ ವಿಚಾರಣೆ ಆರಂಭಿಸುವ ಮೊದಲು ಮಂಡಳಿಯ ಅಧ್ಯಕ್ಷರು ತಮ್ಮ ಕಡೆಯಿಂದ ಆದ ಕರ್ತವ್ಯಲೋಪವನ್ನು ಒಪ್ಪಿಕೊಳ್ಳಬೇಕು ಮತ್ತು ನಾವು ನೀಡಿದ ಆದೇಶವನ್ನು ಅನುಷ್ಠಾನಕ್ಕೆ ತರಬೇಕು ಎಂದು ನ್ಯಾಯಪೀಠ ಸೂಚಿಸಿತು. ಧ್ವನಿವರ್ಧಕ ಬಳಕೆಗೆ ಪೊಲೀಸ್ ಇನ್​ಸ್ಪೆಕ್ಟರ್ ನೀಡಿದ್ದಾರೆ ಎನ್ನಲಾದ ಲೈಸೆನ್ಸ್​ ವಿಚಾರವಾಗಿ ರಾಜ್ಯ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಇಂದಿಗೂ ಧ್ವನಿವರ್ಧಕಗಳ ಬಳಕೆ ಮುಂದುವರಿದಿದೆ ಎಂದು ಅರ್ಜಿದಾರರಾದ ವಕೀಲೆ ಸುಮಂಗಲಾ ಎ. ಸ್ವಾಮಿ ನ್ಯಾಯಾಲಯದ ಗಮನಕ್ಕೆ ತಂದರು.

ಆದೇಶ ಜಾರಿಗೆ ತರಲು ಒಂದು ವಾರದ ಗಡುವು ನೀಡಿದ ನ್ಯಾಯಾಲಯ ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಿತು.

ಇದನ್ನೂ ಓದಿ: ಗೋವಿಂದರಾಜನಗರ ಮಸೀದಿಯಲ್ಲಿ ಲೌಡ್​ಸ್ಪೀಕರ್ ಬಳಕೆ: KSPCBಗೆ ಹೈಕೋರ್ಟ್ ತರಾಟೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada