ಅಜ್ಜಿಯ ತಿಥಿ ಕಾರ್ಯಕ್ಕೆ ಬಂದವಳು ಹೆಣವಾಗಿ ಮಸಣ ಸೇರಿದಳು, ಎಲ್ಲಿ?
ಬೆಂಗಳೂರು ಗ್ರಾಮಾಂತರ: ಎರಡನೇ ಮದುವೆ ಮಾಡಿಕೊಳ್ಳುವ ಆಸೆಗೆ ಬಿದ್ದ ಪತಿ ತನ್ನ ಹೆಂಡತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ನೆಲಮಂಗಲ ತಾಲೂಕಿನ ಯರಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ 7 ವರ್ಷದ ಹಿಂದೆ ಹಾಸನ ಮೂಲದ ದೇವರಾಜು ಜೊತೆ ವಿವಾಹವಾಗಿದ್ದ ಮೃತ ಗಂಗಮ್ಮ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಗಂಡನನ್ನು ತೊರೆದು ತವರು ಮನೆಗೆ ಸೇರಿದ್ದಳು. ಈ ನಡುವೆ ಆರೋಪಿ ಸಿದ್ದರಾಜು ತನ್ನ ಅಕ್ಕನ ಮಗಳಾಗಿದ್ದ ಗಂಗಮ್ಮಳನ್ನ ಕಳೆದ 3 ವರ್ಷಗಳ […]

ಬೆಂಗಳೂರು ಗ್ರಾಮಾಂತರ: ಎರಡನೇ ಮದುವೆ ಮಾಡಿಕೊಳ್ಳುವ ಆಸೆಗೆ ಬಿದ್ದ ಪತಿ ತನ್ನ ಹೆಂಡತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ನೆಲಮಂಗಲ ತಾಲೂಕಿನ ಯರಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ 7 ವರ್ಷದ ಹಿಂದೆ ಹಾಸನ ಮೂಲದ ದೇವರಾಜು ಜೊತೆ ವಿವಾಹವಾಗಿದ್ದ ಮೃತ ಗಂಗಮ್ಮ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಗಂಡನನ್ನು ತೊರೆದು ತವರು ಮನೆಗೆ ಸೇರಿದ್ದಳು. ಈ ನಡುವೆ ಆರೋಪಿ ಸಿದ್ದರಾಜು ತನ್ನ ಅಕ್ಕನ ಮಗಳಾಗಿದ್ದ ಗಂಗಮ್ಮಳನ್ನ ಕಳೆದ 3 ವರ್ಷಗಳ ಹಿಂದೆ ಮದುವೆಯಾಗಿದ್ದ.

ಆದರೆ, ಕಳೆದ ಕೆಲವು ದಿನಗಳಿಂದ ಆರೋಪಿ ಮತ್ತೊಂದು ಮದುವೆಯಾಗಲು ಬಯಸಿದ್ದ. ಹೀಗಾಗಿ, ಈ ವಿಚಾರವಾಗಿ, ಗಂಡ ಹೆಂಡತಿ ನಡುವೆ ನಿತ್ಯ ಗಲಾಟೆಯಾಗುತ್ತಿತ್ತು ಎಂದು ತಿಳಿದುಬಂದಿದೆ. ಇದೆ ತಿಂಗಳ 14 ರಂದು ತನ್ನ ಅಜ್ಜಿಯ ತಿಥಿ ಕಾರ್ಯಕ್ಕೆ ಬಂದಿದ್ದ ಗಂಗಮ್ಮಳ ಜೊತೆ ಸಿದ್ದರಾಜು ಎರಡನೇ ಮದುವೆ ವಿಚಾರಕ್ಕೆ ಮತ್ತೊಮ್ಮೆ ಜಗಳ ತೆಗೆದಿದ್ದಾನೆ. ಜಗಳವು ವಿಕೋಪಕ್ಕೆ ತಿರುಗಿ ಗಂಗಮ್ಮಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಸಿದ್ದರಾಜು ಯತ್ನಿಸಿದ್ದಾನೆ.
ಕೂಡಲೇ, ಗಂಗಮ್ಮಳನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ತೀವ್ರ ಸುಟ್ಟುಗಾಯಗಳಾಗಿದ್ದ ಕಾರಣವಾಗಿ ಆಸ್ಪತ್ರೆಯಲ್ಲಿದ್ದ ಗಂಗಮ್ಮ ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇನ್ನು, ನೆಲಮಂಗಲ ಗ್ರಾಮಾಂತರ ಪೊಲೀಸರು ಆರೋಪಿ ಸಿದ್ದರಾಜುವನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

Published On - 7:00 pm, Sun, 19 July 20
