AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಡತನದಲ್ಲಿ ಬೆಳೆದಿದ್ದೇನೆ, ಬಡವರ ಸೇವೆಗಾಗಿ ಹಣ ವಿನಿಯೋಗ ಮಾಡುತ್ತೇನೆ: ಕಾಂಗ್ರೆಸ್​ ಶಿಸ್ತು ಸಮಿತಿಗೆ ಕೆಜಿಎಫ್ ಬಾಬು ಉತ್ತರ

ಬಡತನದಲ್ಲಿ ಬೆಳೆದಿದ್ದೇನೆ, ಬಡವರ ಸೇವೆಗಾಗಿ ಹಣ ವಿನಿಯೋಗ ಮಾಡುತ್ತೇನೆ ಎಂದು ಕಾಂಗ್ರೆಸ್​ ಮುಖಂಡ ಕೆಜಿಎಫ್ ಬಾಬುಗೆ ಕಾಂಗ್ರೆಸ್​ ಶಿಸ್ತು ಸಮಿತಿಗೆ 3 ಪುಟದ ಉತ್ತರ ಸಲ್ಲಿಕೆ ಮಾಡಿದ್ದಾರೆ.

ಬಡತನದಲ್ಲಿ ಬೆಳೆದಿದ್ದೇನೆ, ಬಡವರ ಸೇವೆಗಾಗಿ ಹಣ ವಿನಿಯೋಗ ಮಾಡುತ್ತೇನೆ: ಕಾಂಗ್ರೆಸ್​ ಶಿಸ್ತು ಸಮಿತಿಗೆ ಕೆಜಿಎಫ್ ಬಾಬು ಉತ್ತರ
ಕೆಜಿಎಫ್ ಬಾಬು
TV9 Web
| Edited By: ವಿವೇಕ ಬಿರಾದಾರ|

Updated on: Aug 29, 2022 | 3:38 PM

Share

ಬೆಂಗಳೂರು: ಬಡತನದಲ್ಲಿ ಬೆಳೆದಿದ್ದೇನೆ, ಬಡವರ ಸೇವೆಗಾಗಿ ಹಣ ವಿನಿಯೋಗ ಮಾಡುತ್ತೇನೆ ಎಂದು ಕಾಂಗ್ರೆಸ್​ (Congress) ಮುಖಂಡ ಕೆಜಿಎಫ್ ಬಾಬುಗೆ (KGF Babu) ಕಾಂಗ್ರೆಸ್​ ಶಿಸ್ತು ಸಮಿತಿಗೆ 3 ಪುಟದ ಉತ್ತರ ಸಲ್ಲಿಕೆ ಮಾಡಿದ್ದಾರೆ. ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಕೆಜಿಎಫ್ ಬಾಬು ಹೇಳಿಕೆ ನೀಡಿದ ಹಿನ್ನೆಲೆ ಕಾಂಗ್ರೆಸ್​ ಶಿಸ್ತು ಸಮಿತಿ ಕೆಜಿಎಫ್ ಬಾಬುಗೆ ನೋಟಿಸ್​ ನೀಡಿತ್ತು.

ಈ ಸಂಬಂಧ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್​ಗೆ 3 ಪುಟದ ಉತ್ತರ ಸಲ್ಲಿಸಿದ್ದಾರೆ. ಸೇವಾ ಮನೋಭಾವದಿಂದ ಪರಿಷತ್​ ಚುನಾವಣೆಗೆ ಸ್ಪರ್ಧಿಸಿದ್ದೆ. ಪರಾಭವಗೊಂಡರೂ ರಾಜಕೀಯ ಅನುಭವ ಪಡೆದುಕೊಂಡಿದ್ದೇನೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವು ವರ್ಷದಿಂದ ನೆಲೆಸಿದ್ದೇನೆ. ಚಿಕ್ಕಪೇಟೆ ಕ್ಷೇತ್ರಕ್ಕೆ 350 ಕೋಟಿ ರೂಪಾಯಿ ಯೋಜನೆ ಸಿದ್ಧಪಡಿಸಿದ್ದೇನೆ ಎಂದು ಉತ್ತರ ನೀಡಿದ್ದಾರೆ.

ಮುಂದುವರೆದು ನನ್ನದೇ ಹಣ ವಿನಿಯೋಗಿಸಿ ಯೋಜನೆ ಅನುಷ್ಠಾನ ಮಾಡುವೆ. ಈ ವಿಚಾರ ಹೈಕಮಾಂಡ್ ಗಮನಕ್ಕೆ ತರಲು ಪ್ರಯತ್ನ ಮಾಡಿದ್ದೆ, ಆದರೆ ಹೈಕಮಾಂಡ್ ನಾಯಕರ ಭೇಟಿಗೆ ಅವಕಾಶ ಸಿಗಲಿಲ್ಲ. ಆದ್ದರಿಂದ ಮಾಧ್ಯಮಗಳ ಮೂಲಕ ನಾಯಕರ ಗಮನ ಸೆಳೆದೆ. ಕಾಂಗ್ರೆಸ್​ ಟಿಕೆಟ್ ಕೊಡಲಿ, ಬಿಡಲಿ ಸ್ಪರ್ಧಿಸುತ್ತೇನೆ ಎಂದು ಬಾಯ್ತಪ್ಪಿ ಹೇಳಿದೆ ಎಂದರು.

ನಾನು ಸವಾಲು ಹಾಕುವಷ್ಟ ದೊಡ್ಡವನಲ್ಲ, ಅಷ್ಟು ಬೆಳೆದಿಲ್ಲ. ನನ್ನ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಿದ್ದರೇ ಕ್ಷಮೆ ಕೇಳುವೆ. ತಪ್ಪು ತಿದ್ದಿಕೊಂಡು ಪಕ್ಷದ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
TV9 Web
TV9 Web

TV9 Kannada

Read More
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು