ಅತ್ತರೂ, ನಕ್ಕರೂ ಓಡೋಡಿ ಬರುತ್ತೆ ಈ ಶ್ವಾನ.. ಇದರ ಬೆಲೆ ಎಷ್ಟು ಗೊತ್ತಾ?
ಕೆಲವರಿಗೆ ಮನೆಯಲ್ಲಿ ಶ್ವಾನ ಸಾಕಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಕಾರಣಾಂತರಗಳಿಂದ ಇದು ಸಾಧ್ಯವಾಗಿರುವುದಿಲ್ಲ. ಅಂಥವರು ಈ ರೋಬಾಟ್ಶ್ವಾನ ಸಾಕಬಹುದು.

ಮಲಯಾಳಂನಲ್ಲಿ ‘ಆ್ಯಂಡ್ರಾಯ್ಡ್ ಕುಂಜಪ್ಪನ್ ವರ್ಷನ್ 5.25’ ಹೆಸರಿನ ಸಿನಿಮಾ ತೆರೆಗೆ ಬಂದಿತ್ತು. ಮನೆಯಲ್ಲಿ ಒಬ್ಬಂಟಿಯಾಗಿರುವ ತಂದೆಗೆ ವಿದೇಶದಲ್ಲಿರುವ ಮಗ ರೋಬಾಟ್ ಒಂದನ್ನು ತಂದುಕೊಡುತ್ತಾನೆ. ಆ ರೋಬಾಟ್ ಮನೆಯಲ್ಲಿ ಒಂಟಿಯಾಗಿರುವ ತಂದೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಆತನ ಭಾವನೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತದೆ/ ಪ್ರತಿಕ್ರಿಯಿಸುತ್ತದೆ. ಈಗ ವಿಜ್ಞಾನಿಗಳು ಇದೇ ಮಾದರಿಯಲ್ಲಿ ರೋಬಾಟ್ ನಾಯಿಯನ್ನು ಕಂಡು ಹಿಡಿದಿದ್ದಾರೆ. ಈ ಶ್ವಾನ ಮನುಷ್ಯನ ಭಾವನೆಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ!
ಹೌದು, ಕೊಡಾ ಸಂಸ್ಥೆ (Koda) ಹೊಸ ರೋಬಾಟ್ ಒಂದನ್ನು ಅನ್ವೇಷಣೆ ಮಾಡಿದೆ. ಶ್ವಾನದಂತೆ ಇರುವ ಈ ರೋಬಾಟ್, ವ್ಯಕ್ತಿಯ ಭಾವನೆಯನ್ನು ಗ್ರಹಿಸುತ್ತದೆ. ಬೇಸರ, ಸಂತೋಷ, ಉತ್ಸುಕತೆ, ಖಿನ್ನತೆ ಇವುಗಳನ್ನು ಸರಿಯಾದ ರೀತಿಯಲ್ಲಿ ಸೆನ್ಸ್ ಮಾಡುವ ಈ ಶ್ವಾನ, ಅದಕ್ಕೆ ತಕ್ಕನಾಗಿ ಪ್ರತಿಕ್ರಿಯಿಸುತ್ತದೆ.
ಕೆಲವರಿಗೆ ಮನೆಯಲ್ಲಿ ಶ್ವಾನ ಸಾಕಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಕಾರಣಾಂತರಗಳಿಂದ ಇದು ಸಾಧ್ಯವಾಗಿರುವುದಿಲ್ಲ. ಅಂಥವರು ಈ ರೋಬಾಟ್ಶ್ವಾನ ಸಾಕಬಹುದು. ಇನ್ನು, ಮನೆಯನ್ನು ಕಾಯುವ ಕೆಲಸವನ್ನು ಕೂಡ ಈ ರೋಬಾಟ್ ಮಾಡಲಿದೆ.
ನಾಯಿಗಳಿಗೆ ಶೇಕ್ ಹ್ಯಾಂಡ್ ಮಾಡುವುದು ಸೇರಿ ಸಾಕಷ್ಟು ವಿಚಾರಗಳನ್ನು ನೀವು ಕಲಿಸಿಕೊಟ್ಟಿರುತ್ತೀರಿ. ಈ ರೋಬಾಟ್ ಶ್ವಾನಕ್ಕೂ ನೀವು ಈ ರೀತಿ ವಿಚಾರಗಳನ್ನು ಕಲಿಸಿಕೊಡಬಹುದು. ನೀವು ಕಲಿಸುವ ಹೊಸ ಅಂಶಗಳನ್ನು ಅದು ಸುಲಭವಾಗಿ ಕಲಿತುಕೊಳ್ಳುತ್ತದೆ.
ಈ ರೋಬೋಟ್ ನಿತ್ಯ ನಿಮ್ಮನ್ನು ಪರಮಾರ್ಶಿಸುತ್ತದೆ. ನಿಮ್ಮಲ್ಲಿ ಆಗುವ ಬದಲಾವಣೆಯ ಮಾಹಿತಿಯನ್ನು ಅದು ತನ್ನಲ್ಲಿಯೇ ಇಟ್ಟುಕೊಳ್ಳುತ್ತದೆ. ಈ ರೀತಿ ಸಂಗ್ರಹವಾದ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದ್ದು, ಇದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಈ ಶ್ವಾನದ ಬೆಲೆ ಕೇಳಿದರೆ ನೀವು ಸ್ವಲ್ಪ ಭಯ ಬೀಳಬಹುದು. ಏಕೆಂದರೆ ಈ ರೋಬಾಟ್ ನಾಯಿಯ ಬೆಲೆ ಬರೋಬ್ಬರಿ 40 ಲಕ್ಷ ರೂಪಾಯಿ.
ಕನ್ನಡಕ್ಕೆ ಸಿಕ್ತು ತಂತ್ರಜ್ಞಾನದ ಬಲ: ‘ಕ-ನಾದ’ ಕೀಲಿಮಣೆಯಿಂದ ಈಗ ಕನ್ನಡ ಟೈಪಿಂಗ್ ಬಹು ಸುಲಭ!
tecnoa