ಮಂಗಳೂರಿನಲ್ಲಿ ನಟ ಕಿಶೋರ್ ಅರೆಸ್ಟ್: ಬೆಂಗಳೂರಿನ ಖ್ಯಾತ ಌಂಕರ್ ಕಂ ನಟಿ ಮೇಲೆ CCB ಕಣ್ಣು!
ದಕ್ಷಿಣ ಕನ್ನಡ: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ನಟ ಕಿಶೋರ್ ಶೆಟ್ಟಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಿಶೋರ್ ಶೆಟ್ಟಿ ಮೂಲತಃ ಮಂಗಳೂರಿನ ಕುಳಾಯಿಗುಡ್ಡೆಯ ನಿವಾಸಿ. ಖ್ಯಾತ ಡ್ಯಾನ್ಸರ್ ಹಾಗೂ ದಕ್ಷಿಣ ಚಿತ್ರರಂಗದ ದೊಡ್ಡ ನಟ ಪ್ರಭುದೇವ ಶಿಷ್ಯನಾಗಿರುವ ಕಿಶೋರ್ ಶೆಟ್ಟಿ 10 ವರ್ಷದ ಹಿಂದೆ ಕಡು ಬಡವನಾಗಿದ್ದ ಎಂದು ತಿಳಿದುಬಂದಿದೆ. ರತ್ನಾವತಿ ಎಂಬುವವರ ಪುತ್ರನಾಗಿರುವ ಕಿಶೋರ್ ಸರ್ಕಾರ ಕೊಟ್ಟಿದ್ದ ಸಣ್ಣ ಮನೆಯಲ್ಲಿ ವಾಸವಿದ್ದ. ಕಿಶೋರ್ ಕಾಲಕ್ರಮೇಣ ಡ್ಯಾನ್ಸಿಂಗ್ ಮೂಲಕ ಹೆಸರು ಮಾಡಿದ್ದ. ABCD ಹಿಂದಿ ಸಿನಿಮಾ ಮೂಲಕ […]

ದಕ್ಷಿಣ ಕನ್ನಡ: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ನಟ ಕಿಶೋರ್ ಶೆಟ್ಟಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಿಶೋರ್ ಶೆಟ್ಟಿ ಮೂಲತಃ ಮಂಗಳೂರಿನ ಕುಳಾಯಿಗುಡ್ಡೆಯ ನಿವಾಸಿ. ಖ್ಯಾತ ಡ್ಯಾನ್ಸರ್ ಹಾಗೂ ದಕ್ಷಿಣ ಚಿತ್ರರಂಗದ ದೊಡ್ಡ ನಟ ಪ್ರಭುದೇವ ಶಿಷ್ಯನಾಗಿರುವ ಕಿಶೋರ್ ಶೆಟ್ಟಿ 10 ವರ್ಷದ ಹಿಂದೆ ಕಡು ಬಡವನಾಗಿದ್ದ ಎಂದು ತಿಳಿದುಬಂದಿದೆ.
ರತ್ನಾವತಿ ಎಂಬುವವರ ಪುತ್ರನಾಗಿರುವ ಕಿಶೋರ್ ಸರ್ಕಾರ ಕೊಟ್ಟಿದ್ದ ಸಣ್ಣ ಮನೆಯಲ್ಲಿ ವಾಸವಿದ್ದ. ಕಿಶೋರ್ ಕಾಲಕ್ರಮೇಣ ಡ್ಯಾನ್ಸಿಂಗ್ ಮೂಲಕ ಹೆಸರು ಮಾಡಿದ್ದ. ABCD ಹಿಂದಿ ಸಿನಿಮಾ ಮೂಲಕ ಹೆಸರು ಮಾಡಿದ್ದ ಕಿಶೋರ್, ಖಾಸಗಿ ವಾಹಿನಿ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಸಹ ಆಗಿದ್ದ.
ಪ್ರಖ್ಯಾತ ಌಂಕರ್ ಕಮ್ ನಟಿ ಮೇಲೆ CCB ಕಣ್ಣು? ಇದೀಗ, ಆತ ಬಹಳ ಹುಡುಗಿಯರಿಗೆ ಡ್ರಗ್ಸ್ ಕೊಟ್ಟು ಪಾರ್ಟಿ ಮಾಡುತ್ತಿದ್ದ ಎಂಬ ಮಾಹಿತಿ ದೊರೆತಿದೆ. ಇದಲ್ಲದೆ, ಬೆಂಗಳೂರಿನ ಪ್ರಖ್ಯಾತ ಆ್ಯಂಕರ್ ಕಂ ನಟಿ ಜೊತೆಗೂ ಪಾರ್ಟಿ ಮಾಡಿದ್ದ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಮಂಗಳೂರಲ್ಲಿ ಒಂದು ಡ್ರಗ್ ಪಾರ್ಟಿ ಆಗಿತ್ತು. ಆ ಪಾರ್ಟಿಯಲ್ಲಿ ಆ ನಟಿ ಕಂ ಆ್ಯಂಕರ್ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಯುವತಿಯರನ್ನ ಸೇರಿಸಿ ಅವರಿಗೆ ಡ್ರಗ್ಸ್ ನೀಡುತ್ತಿದ್ದ ಈತನ ಜೊತೆ ತಂಡವು ಸಹ ಇತ್ತು ಎಂದು ತಿಳದುಬಂದಿದೆ.
ಇನ್ನು ಡ್ರಗ್ಸ್ ಸಾಗಿಸುತ್ತಿದ್ದ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ ಕೇಸ್ಗೆ ಸಂಬಂಧಿಸಿದಂತೆ ಆತ ಮುಂಬೈನಲ್ಲಿ MDMA ಮಾದಕ ಮಾತ್ರೆಗಳನ್ನು ಅಕ್ರಮವಾಗಿ ಖರೀದಿಸಿ, ಮಂಗಳೂರಿನಲ್ಲಿ ಮಾರುತ್ತಿದ್ದ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕಿಶೋರ್ ಅಮನ್ ಶೆಟ್ಟಿ(30) ಮತ್ತು ಅಕಿಲ್ ನೌಶೀಲ್(28) ಎಂಬಿಬ್ಬರನ್ನು ಬಂಧಿಸಲಾಗಿದ್ದು ಆರೋಪಿಗಳ ಬಳಿ ಮಾದಕ ವಸ್ತು, ಒಂದು ಬೈಕ್ ಮತ್ತು 2 ಮೊಬೈಲ್ ವಶಕ್ಕೆ ಪಡೆದಿದ್ದೇವೆ. ಒಟ್ಟು 1 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ವಶಕ್ಕೆ ಪಡೆದಿದ್ದೇವೆ ಅಂತಾ ಮಾಹಿತಿಯಿದೆ.
ಇವರಿಬ್ಬರೂ ಮಾದಕ ವಸ್ತುಗಳನ್ನು ಹೈಫೈ ಜನರಿಗೆ ಹಾಗೂ ಮಕ್ಕಳಿಗೆ ಮಾರಾಟ ಮಾಡ್ತಿದ್ರು. ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾರೆ.
Published On - 1:19 pm, Sat, 19 September 20