ತೋಟದ ಮನೆಯಲ್ಲಿ ರೌಡಿಗಾಗಿ ತಲಾಶ್.. ದಂಪತಿಯ ಬೆದರಿಸಿ 3 ಲಕ್ಷ ನಗದು, 250ಗ್ರಾಂ ಆಭರಣ ದೋಚಿದ ದುಷ್ಕರ್ಮಿಗಳು
ಮಂಡ್ಯದ ಕುಖ್ಯಾತ ರೌಡಿ ಅಶೋಕ್ ಪೈ ಸಂಬಂಧಿ ಮನೆಯಲ್ಲಿ ತಡರಾತ್ರಿ ಈ ದರೋಡೆ ನಡೆದಿದೆ. ಅಶೋಕ್ ಪೈ ತಂಗಿಯ ಗಂಡ ಅಶ್ವಥ್ ಮನೆಗೆ ಮಾರಕಾಸ್ತ್ರಗಳೊಂದಿಗೆ ಕೆಲ ದುಷ್ಕರ್ಮಿಗಳು ನುಗ್ಗಿದ್ದು ಅಶ್ವತ್ಥ್ ದಂಪತಿಗೆ ಬೆದರಿಸಿ ಹಣ, ಚಿನ್ನಾಭರಣ ದರೋಡೆ ಮಾಡಿದ್ದಾರೆ. ಮೊದಲಿಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅಶೋಕ್‌ಗಾಗಿ ಹುಡುಕಾಟ ನಡೆಸಿ ಬಳಿಕ ಮನೆಯಲ್ಲಿದ್ದವರನ್ನು ಬೆದರಿಸಿ ಮನೆಯಲ್ಲಿದ್ದ ಹಣ ಮತ್ತು ಆಭರಣಗಳನ್ನು ಕಸಿದು ಪರಾರಿಯಾಗಿದ್ದಾರೆ.
ಮಂಡ್ಯ: ತೋಟದ ಮನೆಯಲ್ಲಿದ್ದ ದಂಪತಿಯನ್ನು ಬೆದರಿಸಿ ದರೋಡೆ ಮಾಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಹರಳಕೆರೆ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಈ ಘಟನೆ ನಡೆದಿದ್ದು ಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ.
ಮಂಡ್ಯದ ಕುಖ್ಯಾತ ರೌಡಿ ಅಶೋಕ್ ಪೈ ಸಂಬಂಧಿ ಮನೆಯಲ್ಲಿ ತಡರಾತ್ರಿ ಈ ದರೋಡೆ ನಡೆದಿದೆ. ಅಶೋಕ್ ಪೈ ತಂಗಿಯ ಗಂಡ ಅಶ್ವಥ್ ಮನೆಗೆ ಮಾರಕಾಸ್ತ್ರಗಳೊಂದಿಗೆ ಕೆಲ ದುಷ್ಕರ್ಮಿಗಳು ನುಗ್ಗಿದ್ದು ಅಶ್ವತ್ಥ್ ದಂಪತಿಗೆ ಬೆದರಿಸಿ ಹಣ, ಚಿನ್ನಾಭರಣ ದರೋಡೆ ಮಾಡಿದ್ದಾರೆ. ಮೊದಲಿಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅಶೋಕ್‌ಗಾಗಿ ಹುಡುಕಾಟ ನಡೆಸಿ ಬಳಿಕ ಮನೆಯಲ್ಲಿದ್ದವರನ್ನು ಬೆದರಿಸಿ ಮನೆಯಲ್ಲಿದ್ದ ಹಣ ಮತ್ತು ಆಭರಣಗಳನ್ನು ಕಸಿದು ಪರಾರಿಯಾಗಿದ್ದಾರೆ.
ಮನೆಯಲ್ಲಿಟ್ಟಿದ್ದ 3 ಲಕ್ಷ ನಗದು, 250ಗ್ರಾಂ ಆಭರಣಗಳನ್ನು ದರೋಡೆ ಮಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ದುಷ್ಕರ್ಮಿಗಳ ಪತ್ತೆಗಾಗಿ ಶೋಧ ಕಾರ್ಯ ಶುರುವಾಗಿದೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಎಂ ದೊಡ್ಡಿ ಠಾಣಾ ವ್ಯಾಪ್ತಿಯಲ್ಲಿನ ಹಳ್ಳಿಯಲ್ಲಿ ಮೂರು ವರ್ಷದ ಹಿಂದೆ ಅಶೋಕ್ ಪೈ ಮೇಲೆ ಅಟ್ಯಾಕ್ ಆಗಿತ್ತು.
ಇದನ್ನೂ ಓದಿ: ದೃಶ್ಯಂ ಸಿನಿಮಾ ನೋಡಿ ದರೋಡೆಗೆ ಪ್ಲ್ಯಾನ್.. ಇದು ನಿಮ್ಮ ಊಹೆಗೂ ನಿಲುಕದಂಥ ‘ಶೂ’ ಮ್ಯಾನ್ ಥ್ರಿಲ್ಲರ್!