AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಧಿ ಕಂಡ ಕನಸು ಕೊರೊನಾದಿಂದ ಆಯ್ತು ನನಸು, ಹೇಗೆ?

ಕೋಲಾರ: ಕೊರೊನಾ ಮಹಾಮಾರಿಗೆ ಹೆದರಿ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿದ್ದ ಲಕ್ಷಾಂತರ ಜನರು ಮತ್ತೆ ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ. ಆದ್ರೆ, ಊರುಗಳಿಗೆ ಹಿಂತಿರುಗಿದ್ದ ಯುವಕರನ್ನು ಮತ್ತೆ ಬೆಂಗಳೂರಿಗೆ ತೆರಳದೆ ಹಳ್ಳಿಗಳಲ್ಲೇ ಕಟ್ಟಿಹಾಕಲು ಇಲ್ಲೊಂದು ಭರ್ಜರಿ ಪ್ಲಾನ್​ ಮಾಡಲಾಗುತ್ತಿದೆ. ಆ ಪ್ಲಾನ್​ ಏನು ಅಂತೀರಾ?  ಮುಂದೆ ಓದಿ. ಹೌದು, ಜಿಲ್ಲೆಯಲ್ಲೇ ಅತಿದೊಡ್ಡ ಕೆರೆ ಎಂಬ ಖ್ಯಾತಿ ಹೊಂದಿರುವ ಬೇತಮಂಗಲ ಕೆರೆ ಸುಮಾರು 1,000 ಎಕರೆ ವಿಸ್ತೀರ್ಣ​ ಹೊಂದಿದೆ. ಸುಮಾರು 50 ರಿಂದ 60 ಗ್ರಾಮಗಳ ರೈತರು ಈ ಕೆರೆಯ ಮೇಲೆ […]

ಗಾಂಧಿ ಕಂಡ ಕನಸು ಕೊರೊನಾದಿಂದ ಆಯ್ತು ನನಸು, ಹೇಗೆ?
ಸಾಧು ಶ್ರೀನಾಥ್​
|

Updated on:Aug 03, 2020 | 11:45 AM

Share

ಕೋಲಾರ: ಕೊರೊನಾ ಮಹಾಮಾರಿಗೆ ಹೆದರಿ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿದ್ದ ಲಕ್ಷಾಂತರ ಜನರು ಮತ್ತೆ ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ. ಆದ್ರೆ, ಊರುಗಳಿಗೆ ಹಿಂತಿರುಗಿದ್ದ ಯುವಕರನ್ನು ಮತ್ತೆ ಬೆಂಗಳೂರಿಗೆ ತೆರಳದೆ ಹಳ್ಳಿಗಳಲ್ಲೇ ಕಟ್ಟಿಹಾಕಲು ಇಲ್ಲೊಂದು ಭರ್ಜರಿ ಪ್ಲಾನ್​ ಮಾಡಲಾಗುತ್ತಿದೆ. ಆ ಪ್ಲಾನ್​ ಏನು ಅಂತೀರಾ?  ಮುಂದೆ ಓದಿ.

ಹೌದು, ಜಿಲ್ಲೆಯಲ್ಲೇ ಅತಿದೊಡ್ಡ ಕೆರೆ ಎಂಬ ಖ್ಯಾತಿ ಹೊಂದಿರುವ ಬೇತಮಂಗಲ ಕೆರೆ ಸುಮಾರು 1,000 ಎಕರೆ ವಿಸ್ತೀರ್ಣ​ ಹೊಂದಿದೆ. ಸುಮಾರು 50 ರಿಂದ 60 ಗ್ರಾಮಗಳ ರೈತರು ಈ ಕೆರೆಯ ಮೇಲೆ ಅವಲಂಬಿತರಾಗಿದ್ದಾರೆ. ಇಂಥ ಕೆರೆ ಕಳೆದ ಹಲವು ವರ್ಷಗಳಿಂದ ನೀರು ಬಾರದೆ ಗಿಡ ಗಂಟೆಗಳಿಂದ ತುಂಬಿ ಹೋಗಿತ್ತು.

ಅದಕ್ಕಾಗಿ ಬೆಂಗಳೂರಿನಿಂದ ತಮ್ಮೂರಿಗೆ ಮರಳಿರುವ ಯುವಕರನ್ನು ಇಲ್ಲೇ ಉಳಿಸಿಕೊಳ್ಳಬೇಕೆಂದು ನಿರ್ಧಾರ ಮಾಡಿರುವ ಸ್ಥಳೀಯ ಶಾಸಕಿ ರೂಪಕಲಾ ತಮ್ಮ ಸ್ವಂತ ಹಣದಿಂದ ಬೇತಮಂಗಲ ಕೆರೆಯನ್ನ ಕ್ಲೀನ್​ ಮಾಡಿಸಿದ್ದಾರೆ. ಇದಲ್ಲದೆ, ಕೆರೆಗೆ ಕೆಸಿ ವ್ಯಾಲಿ ನೀರು ಹರಿಸುವ ಜೊತೆಗೆ ಮಳೆಗಾಲ ಆರಂಭವಾಗುತ್ತಿದ್ದು, ಕೆರೆಗೆ ತುಂಬಿದರೆ ಯುವಕರು ಹಳ್ಳಿಗಳಲ್ಲೇ ಉಳಿದು ಕೃಷಿ ಕಾರ್ಯದಲ್ಲಿ ತೊಡಗುತ್ತಾರೆ ಅನ್ನೋದು ಶಾಸಕಿಯ ಪ್ಲಾನ್​. ಕೆರೆ ಕ್ಲೀನ್​ ಮಾಡೋದಕ್ಕೆ ಸರ್ಕಾರ ಅಥವಾ ಜಿಲ್ಲಾಡಳಿತದ ಮೊರೆ ಹೋದ್ರೆ ಕೆಲಸ ನಿಧಾನವಾಗುತ್ತದೆ ಅಂತಲೇ ತಮ್ಮ ಸ್ವಂತ ಹಣದಿಂದಲೇ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ಇಪ್ಪತ್ತು ವರ್ಷಗಳಿಂದ ಕೆರೆಯ ಪುನಶ್ಚೇತನ ಕಾರ್ಯ ಆಗಿರಲಿಲ್ಲ..

ಕೆಜಿಎಫ್​ ವಿಧಾನಸಭಾ ಕ್ಷೇತ್ರವ್ಯಾಪ್ತಿಗೆ ಬರುವ ಈ ಕೆರೆಗೆ ಒಂದಷ್ಟು ನೀರು ಬಂದಿದ್ದೇ ಆದಲ್ಲಿ ಕೃಷಿ ಚಟುವಟಿಕೆ ಜೊತೆಗೆ ಕುಡಿಯುವ ನೀರಿಗೂ ಅನುಕೂಲವಾಗುತ್ತದೆ ಅನ್ನೋ ದೃಷ್ಟಿಯಿಂದ ಈ ಕೆಲಸಕ್ಕೆ ಮುಂದಾಗಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಕೆರೆಯ ಪುನಶ್ಚೇತನ ಕಾರ್ಯ ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ಆದ್ರೆ ಈ ಸಂದರ್ಭದಲ್ಲಿ ಶಾಸಕಿಯ ಯೋಜನೆಗೆ  ಸ್ಥಳೀಯರು ಸಾಥ್ ನೀಡಿದ್ದಾರೆ.

ಒಟ್ಟಾರೆ, ದೇಶದಲ್ಲಿ ಕೊರೊನಾದಿಂದ ನೂರಾರು ತೊಂದರೆ ಆಗಿರಬಹುದು. ಆದರೆ,  ನಗರ ಪ್ರದೇಶಕ್ಕೆ ಹೋಗಿದ್ದ ಯುವಕರನ್ನು ಮತ್ತೆ ಹಳ್ಳಿಗಳತ್ತ ಮುಖಮಾಡುವಂತೆ ಮಾಡಿರುವ ಕೊರೊನಾ ಗಾಂಧಿ ಕಂಡ ಕನಸಂತೆ ಹಳ್ಳಿಗಳು ಉದ್ಧಾರವಾಗಬೇಕು ಅನ್ನೋ ಕೆಲಸಕ್ಕೆ ಕೈಜೋಡಿಸಿದೆ ಅಂದ್ರೆ ತಪ್ಪಾಗೋದಿಲ್ಲ. ರಾಜೇಂದ್ರ ಸಿಂಹ

Published On - 6:18 pm, Sun, 2 August 20