ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೊನಾಕ್ಕೆ ಬೆಚ್ಚಿದ ಜನತೆ, ಹೇಳುತ್ತಿದ್ದಾರೆ ಬೆಂಗಳೂರಿಗೆ ಗುಡ್‌ ಬೈ

  • TV9 Web Team
  • Published On - 18:31 PM, 2 Aug 2020
ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೊನಾಕ್ಕೆ ಬೆಚ್ಚಿದ ಜನತೆ, ಹೇಳುತ್ತಿದ್ದಾರೆ ಬೆಂಗಳೂರಿಗೆ ಗುಡ್‌ ಬೈ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರೋದ್ರಿಂದ ಜನರು ಮತ್ತೆ ಬೆಂಗಳೂರನ್ನು ತೊರೆಯುತ್ತಿದ್ದಾರೆ. ಹೀಗಾಗಿ ನೆಲಮಂಗಲದ ನವಯುಗ್‌ ಟೋಲ್‌ನಲ್ಲಿ ಬೆಂಗಳೂರಿನಿಂದ ಹೊರಹೋಗುವ ಬದಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಲಾಕ್‌ ಡೌನ್‌ ತೆರವುಗೊಳಿಸಿದರೂ ಜನ ಮಾತ್ರ ಬೆಂಗಳೂರಿನಿಂದ ಹೊರಹೋಗುವುದನ್ನು ನಿಲ್ಲಿಸಿಲ್ಲ. ಪರಿಸ್ಥಿತಿ ಸಹಜ ಸ್ಥಿತಿಯತ್ತ ಬಂದರೂ ಜನ ಮಾತ್ರ ಮನೆಗಳನ್ನು ಖಾಲಿ ಮಾಡಿಕೊಂಡು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಭಾನುವಾರವಾದರೂ ಜನ ತಮ್ಮ ಊರಿನತ್ತ ವಾಪಸ್‌ ಹೋಗುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಹೊರವಲಯದಲ್ಲಿರುವ ನವಯುಗ್‌ ಟೋಲ್‌ನಲ್ಲಿ ಜನಸಂದಣಿ ಏರ್ಪಟ್ಟಿದೆ.

ಈ ಜನಸಂದಣಿ ಬೆಂಗಳೂರಿನಿಂದ ಹೊರಹೋಗುತ್ತಿರುವ ಬದಿಯಲ್ಲಿ ಮಾತ್ರ ಇದೆ. ಆದ್ರೆ ಹೊರಗಿನಿಂದ ಬೆಂಗಳೂರಿಗೆ ಬರುವ ಬದಿಯಲ್ಲಿ ಮಾತ್ರ ಹೆದ್ದಾರಿ ಖಾಲಿ ಖಾಲಿ ಹೊಡೆಯುತ್ತಿದೆ.