ಶಿಕಾರಿಪುರ: ಓಮ್ನಿ-ಬೈಕ್ ಮುಖಾಮುಖಿ, ತಾಯಿ-ಮಗ ಸ್ಥಳದಲ್ಲೇ ದುರ್ಮರಣ

ಶಿಕಾರಿಪುರ: ಓಮ್ನಿ-ಬೈಕ್ ಮುಖಾಮುಖಿ, ತಾಯಿ-ಮಗ ಸ್ಥಳದಲ್ಲೇ ದುರ್ಮರಣ

ಶಿವಮೊಗ್ಗ: ಓಮ್ನಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದ ಬಳಿ ಸಂಭವಿಸಿದೆ. ಅಪಘಾತದಲ್ಲಿ ತಾಯಿ ಈರಮ್ಮ, ಮಗ ಸಿದ್ದೇಶ್ ಸಾವಿಗೀಡಾಗಿದ್ದಾರೆ.

ತರಲಘಟ್ಟ ಬಳಿ ಓಮ್ನಿ ವ್ಯಾನ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಓಮ್ನಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 5:30 pm, Mon, 27 April 20

Click on your DTH Provider to Add TV9 Kannada