Pawri Ho Rai Hai: ಟಾಪ್ ಬ್ರಾಂಡ್ಗಳ ಜಾಹೀರಾತುಗಳಿಗೆ ಬಳಕೆಯಾಯ್ತು ‘ಪೌರಿ ಹೋ ರಹೀ ಹೈ’ ಸಾಲು
Social Media Trend: ಉತ್ತರ ಪ್ರದೇಶದ ಪೊಲೀಸರು ಯಾರಾದರೂ ತಡರಾತ್ರಿ ಪಾರ್ಟಿ ಮಾಡಿ ತೊಂದರೆ ನೀಡುತ್ತಿದ್ದರೆ 112 ಎಂಬ ಸಂಖ್ಯೆಗೆ ಕರೆ ಮಾಡಿ ಎಂದು ಹೇಳಲು ಕೂಡಾ pawrihoraihai ಸಾಲನ್ನು ಬಳಸಿ ಟ್ವೀಟ್ ಮಾಡಿದ್ದಾರೆ.

ಕಳೆದೆರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ‘ಪೌರಿ ಹೋ ರಹೀ ಹೈ’ (pawri ho rai hai) ಎಂಬ ಹ್ಯಾಷ್ಟ್ಯಾಗ್ ಟ್ರೆಂಡ್ ಆಗುತ್ತಿದೆ. ಇನ್ಸ್ಟಾಗ್ರಾಂನಲ್ಲಿ 6.14 ಲಕ್ಷ ಫಾಲೋಯರ್ಗಳನ್ನು ಹೊಂದಿರುವ ಪಾಕಿಸ್ತಾನದ 19ರ ಹರೆಯದ ದನಾನೀರ್ ಮೊಬೀನ್ ಫೆಬ್ರವರಿ 6ರಂದು ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ತನ್ನ ಕಾರನ್ನು ತೋರಿಸಿ ‘ಯೇ ಹಮಾರಿ ಕಾರ್ ಹೈ, ಯೇ ಹಮ್ ಹೈ, ಔರ್ ಯೇ ಹಮಾರಿ ಪೌರಿ ಹೋ ರಹೀ ಹೈ’ (ಇದು ನನ್ನ ಕಾರು, ಇದು ನಾನು, ಇಲ್ಲಿ ನಮ್ಮ ಪಾರ್ಟಿ ನಡೆಯುತ್ತಿದೆ) ಎಂದು ಹೇಳಿದ್ದರು.
ಪಾರ್ಟಿ ಎಂದು ಹೇಳುವ ಬದಲು ‘ಪೌರಿ’ ಎಂದು ಮೊಬೀನ್ ಉಚ್ಚರಿಸಿದ್ದರಿಂದ ಈ ವಿಡಿಯೊ ವೈರಲ್ ಆಗಿತ್ತು. ಇದೇ ಪದವನ್ನು ಬಳಸಿ ನೆಟ್ಟಿಗರು ಮೀಮ್, ಜೋಕ್ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು pawri ho rai hai ಎಂಬ ಹ್ಯಾಷ್ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.
View this post on Instagram
ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿರುವ, ತಮಾಷೆಯ ಪ್ರಸಂಗಗಳಿಗೆ ಸಂಗೀತ ನೀಡಿ ಹಾಡು ಸಂಯೋಜನೆ ಮಾಡುವ ಯಶ್ ರಾಜ್ ಮುಖಾಟೆ ‘ಪೌರಿ ಹೋ ರಹೀ ಹೈ’ ಎಂಬ ಸಾಲನ್ನೂ ಹಾಡಾಗಿ ಪರಿವರ್ತಿಸಿದ್ದಾರೆ.
View this post on Instagram
ಇತ್ತ ಪ್ರಮುಖ ಬ್ರಾಂಡ್ಗಳು ಕೂಡಾ #pawrihoraihai ಎಂಬ ಹ್ಯಾಷ್ಟ್ಯಾಗ್ ಬಳಸಿ ತಮ್ಮ ಬ್ರಾಂಡ್ ಪ್ರಚಾರವನ್ನು ಮಾಡಿವೆ.
We joined the pawri!! #pawrihorihai #RanbirKapoor #PriyankaChopra pic.twitter.com/oawcuQtFVO
— Eros Now (@ErosNow) February 13, 2021
Yeh humari car haiYeh hum haiHope we’re not too late to the parrrrty pic.twitter.com/sfQcOXlODa
— Netflix India (@NetflixIndia) February 13, 2021
Aise offers ho toh pawwrty toh banti hai. #YONOSBI #PawriHoRiHai pic.twitter.com/QJRmCtZ6jr
— State Bank of India (@TheOfficialSBI) February 14, 2021
View this post on Instagram
ಉತ್ತರ ಪ್ರದೇಶದ ಪೊಲೀಸರು ಯಾರಾದರೂ ತಡರಾತ್ರಿ ಪಾರ್ಟಿ ಮಾಡಿ ತೊಂದರೆ ನೀಡುತ್ತಿದ್ದರೆ 112 ಎಂಬ ಸಂಖ್ಯೆಗೆ ಕರೆ ಮಾಡಿ ಎಂದು ಹೇಳಲು ಕೂಡಾ pawrihoraihai ಸಾಲನ್ನು ಬಳಸಿ ಟ್ವೀಟ್ ಮಾಡಿದ್ದಾರೆ.
Late night #PawriHoRahiHai aur aap disturb ho rahe toh call karein 112 pic.twitter.com/vc74SmtDmF
— Call 112 (@112UttarPradesh) February 14, 2021
ಕೇಂದ್ರ ಸಚಿವೆ ಹಾಗೂ ಮಾಜಿ ಕಿರುತೆರೆ ನಟಿ ಸ್ಮೃತಿ ಇರಾನಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಶೆಹನಾಜ್ ಗಿಲ್ ಅವರ ವೈರಲ್ ವಿಡಿಯೊ ತೌದಾ ಕುತ್ತಾ ಟೋಮಿ ಎಂಬ ಮಾತಿನ ರ‍್ಯಾಪ್ ಸಾಂಗ್ ವಿಡಿಯೊವನ್ನು ಶೇರ್ ಮಾಡಿ ನನಗೆ ಪೌರಿ ಹೋ ರಹೀ ಹೈ ಗಿಂತ ಅದೇ ಇಷ್ಟ ಎಂದಿದ್ದಾರೆ.



