Salaar Movie Release Date: ಪ್ರಶಾಂತ್ ನೀಲ್ ನಿರ್ದೇಶನದ ‘ಸಾಲಾರ್​ ಚಿತ್ರ ಬಿಡುಗಡೆ ದಿನಾಂಕ ಘೋಷಣೆ; ಥ್ರಿಲ್​ ಆಗಿದ್ದಾರಂತೆ ಪ್ರಭಾಸ್​

Salaar Telugu Movie Release Date: ಸಾಲಾರ್​ ಒಂದು ಸಂಪೂರ್ಣ ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾ. ಇದರಲ್ಲಿ ಪ್ರಭಾಸ್​ ತುಂಬ ಪವರ್​ಫುಲ್​ ಆಗಿ ಮಿಂಚಲಿದ್ದಾರೆ ಎಂದಿದ್ದಾರೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್​.

Salaar Movie Release Date: ಪ್ರಶಾಂತ್ ನೀಲ್ ನಿರ್ದೇಶನದ ‘ಸಾಲಾರ್​ ಚಿತ್ರ ಬಿಡುಗಡೆ ದಿನಾಂಕ ಘೋಷಣೆ; ಥ್ರಿಲ್​ ಆಗಿದ್ದಾರಂತೆ ಪ್ರಭಾಸ್​
ಸಾಲಾರ್ ಪೋಸ್ಟರ್​ನಲ್ಲಿ ಪ್ರಭಾಸ್​
Follow us
Lakshmi Hegde
| Updated By: Digi Tech Desk

Updated on:Mar 01, 2021 | 9:34 AM

ಪ್ರಶಾಂತ್ ನೀಲ್​ ನಿರ್ದೇಶನದ, ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್​ ‘ಸಾಲಾರ್​’ ಸಿನಿಮಾ ಬಿಡುಗಡೆ ದಿನಾಂಕ ಇಂದು ಘೋಷಣೆಯಾಗಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್​​ನಡಿ ವಿಜಯ ಕಿರಗಂದೂರು​​ ನಿರ್ಮಾಣ ಮಾಡಿರುವ ಈ ತೆಲುಗು ಸಿನಿಮಾ 2022 ರ ಏಪ್ರಿಲ್​ 14ರಂದು ದೇಶಾದ್ಯಂತ ಕನ್ನಡ, ಹಿಂದಿ, ಮಲೆಯಾಳಂ, ತಮಿಳುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸಾಲಾರ್​ ಸಿನಿಮಾದ ಒಂದು ಹೊಸ ಪೋಸ್ಟರ್​​ನ್ನು ಇಂದು ಪ್ರಶಾಂತ್​ ನೀಲ್​, ಹೊಂಬಾಳೆ ಫಿಲ್ಮ್ಸ್​, ಪ್ರಭಾಸ್​, ನಟಿ ಶ್ರುತಿ ಹಾಸನ್​ ಶೇರ್​ ಮಾಡಿಕೊಂಡಿದ್ದಾರೆ.

2020ರ ಡಿಸೆಂಬರ್​​ನಲ್ಲಿ ಹೈದರಾಬಾದ್​ನಲ್ಲಿ ಸಾಂಪ್ರಾದಾಯಿಕವಾಗಿ ಪೂಜೆ ಮಾಡುವ ಮೂಲಕ ಸಾಲಾರ್​ ಸಿನಿಮಾ ಸೆಟ್ಟೇರಿತ್ತು. ಯಶಸ್ವಿ ಕೆಜಿಎಫ್​ನ್ನು ನಿರ್ಮಾಣ ಮಾಡಿರುವ ಬ್ಯಾನರ್​​ನಡಿ, ಆ ಸಿನಿಮಾಗಳನ್ನು ನಿರ್ದೇಶನ ಮಾಡಿದ ನಿರ್ದೇಶಕ ಪ್ರಶಾಂತ್​ ನೀಲ್ ಅವರೇ ಸಾಲಾರ್​ನ್ನು ನಿರ್ಮಾಣ ಮಾಡುತ್ತಿರುವುದು ಒಂದು ಕಡೆ ಕುತೂಹಲ ಹುಟ್ಟಿಸಿದ್ದರೆ, ಇನ್ನೊಂದೆಡೆ ಬಾಹುಬಲಿಯಂತಹ ಭರ್ಜರಿ ಹಿಟ್​ ಸಿನಿಮಾ ಕೊಟ್ಟ ಸ್ಟಾರ್ ಪ್ರಭಾಸ್ ನಟಿಸುತ್ತಿರುವುದು ಇನ್ನಷ್ಟು ನಿರೀಕ್ಷೆಗೆ ಕಾರಣವಾಗಿದೆ.

ಏನಂತಾರೆ ಪ್ರಭಾಸ್​, ಪ್ರಶಾಂತ್ ನೀಲ್​? ಸಾಲಾರ್​ ಒಂದು ಸಂಪೂರ್ಣ ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾ. ಇದರಲ್ಲಿ ಪ್ರಭಾಸ್​ ತುಂಬ ಪವರ್​ಫುಲ್​ ಆಗಿ ಮಿಂಚಲಿದ್ದಾರೆ ಎಂದಿದ್ದಾರೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್​. ಇನ್ನು ಸಾಲಾರ್ ಬಗ್ಗೆ ಮಾತನಾಡಿದ ಪ್ರಭಾಸ್​, ನಾನು ಚಿತ್ರದ ಶೂಟಿಂಗ್​​ನಲ್ಲಿ ಪಾಲ್ಗೊಳ್ಳಲು ಮತ್ತು ಇದರಲ್ಲಿನ ನನ್ನ ಲುಕ್​ನ್ನು ಅಭಿಮಾನಿಗಳಿಗಾಗಿ ಬಿಡುಗಡೆ ಮಾಡಲು ತುಂಬ ಕಾತರಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ಬಾಲಿವುಡ್​ ನಟ ಜಾನ್​ ಅಬ್ರಾಹಂ ಜತೆ ಸಾಲಾರ್​ ಟೀಂ ಮಾತುಕತೆ ನಡೆಸುತ್ತಿದ್ದು, ಅವರು ಒಪ್ಪಿಕೊಂಡರೆ ವಿಲನ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

View this post on Instagram

A post shared by Prabhas (@actorprabhas)

Published On - 5:15 pm, Sun, 28 February 21

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್