ವಿಷಪೂರಿತ ಕೈಗಾರಿಕಾ ನೀರು ಕುಡಿದು 22 ಕುರಿ ಸಾವು, ಯಾವೂರಲ್ಲಿ?

ತುಮಕೂರು‌: ವಿಷಯುಕ್ತ ನೀರು ಕುಡಿದು 22 ಕುರಿಗಳು ಬಲಿಯಾಗಿರೋ ಘಟನೆ ಜಿಲ್ಲೆಯ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಶಿರಾದ ತರೂರು ಗ್ರಾಮದ ಶಿವಣ್ಣ ಎಂಬುವವರಿಗೆ ಸೇರಿದ್ದ ಕುರಿಗಳು ಸಾವನ್ನಪ್ಪಿದೆ. ಗುಂಡಿಯಲ್ಲಿ ನಿಂತಿದ್ದ ವಿಷಯುಕ್ತ ನೀರು ಸೇವಿಸಿ ಕುರಿಗಳು ಸಾವನ್ನಪ್ಪಿದೆ ಎಂದು ರೈತರು ತಿಳಿಸಿದ್ದಾರೆ. ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು ತಮ್ಮ ತ್ಯಾಜ್ಯ ನೀರನ್ನು ಶುದ್ಧೀಕರಿಸದೇ ಹಾಗೇ ಕೆರೆ, ಕಟ್ಟೆಗಳಿಗೆ ಬಿಡುತ್ತಿರುವ ಕಾರಣದಿಂದಾಗಿ ಈ ದುರಂತ ಸಂಭವಿಸಿದೆ ಅಂತಾ ರೈತರು ಹೇಳಿದ್ದಾರೆ. ಜೊತೆಗೆ, ಕಾರ್ಖಾನೆಗಳ ವಿರುದ್ಧ ತಮ್ಮ ಆಕ್ರೋಶವನ್ನೂ […]

ವಿಷಪೂರಿತ ಕೈಗಾರಿಕಾ ನೀರು ಕುಡಿದು 22 ಕುರಿ ಸಾವು, ಯಾವೂರಲ್ಲಿ?
Edited By:

Updated on: Sep 14, 2020 | 11:08 AM

ತುಮಕೂರು‌: ವಿಷಯುಕ್ತ ನೀರು ಕುಡಿದು 22 ಕುರಿಗಳು ಬಲಿಯಾಗಿರೋ ಘಟನೆ ಜಿಲ್ಲೆಯ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಶಿರಾದ ತರೂರು ಗ್ರಾಮದ ಶಿವಣ್ಣ ಎಂಬುವವರಿಗೆ ಸೇರಿದ್ದ ಕುರಿಗಳು ಸಾವನ್ನಪ್ಪಿದೆ.

ಗುಂಡಿಯಲ್ಲಿ ನಿಂತಿದ್ದ ವಿಷಯುಕ್ತ ನೀರು ಸೇವಿಸಿ ಕುರಿಗಳು ಸಾವನ್ನಪ್ಪಿದೆ ಎಂದು ರೈತರು ತಿಳಿಸಿದ್ದಾರೆ. ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು ತಮ್ಮ ತ್ಯಾಜ್ಯ ನೀರನ್ನು ಶುದ್ಧೀಕರಿಸದೇ ಹಾಗೇ ಕೆರೆ, ಕಟ್ಟೆಗಳಿಗೆ ಬಿಡುತ್ತಿರುವ ಕಾರಣದಿಂದಾಗಿ ಈ ದುರಂತ ಸಂಭವಿಸಿದೆ ಅಂತಾ ರೈತರು ಹೇಳಿದ್ದಾರೆ.

ಜೊತೆಗೆ, ಕಾರ್ಖಾನೆಗಳ ವಿರುದ್ಧ ತಮ್ಮ ಆಕ್ರೋಶವನ್ನೂ ಹೊರಹಾಕಿದ್ದಾರೆ. ಇನ್ನು ಘಟನೆ ಸಂಬಂಧಿಸಿ ಕೋರಾ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 11:07 am, Mon, 14 September 20