ಕಾಡುಹಂದಿಯ ಹಿಡಿಯಲು ಉರುಳು ಇಟ್ಟರು.. ಆದ್ರೆ ಸಿಕ್ಕಿಬಿದ್ದಿದ್ದು ಮಾತ್ರ..

  • Publish Date - 11:13 am, Mon, 14 September 20
ಕಾಡುಹಂದಿಯ ಹಿಡಿಯಲು ಉರುಳು ಇಟ್ಟರು.. ಆದ್ರೆ ಸಿಕ್ಕಿಬಿದ್ದಿದ್ದು ಮಾತ್ರ..

ಕೋಲಾರ: ಕಾಡುಹಂದಿಗೆ ಹಾಕಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ನರಳಾಡಿದ ಮನಕಲುಕುವ ಘಟನೆ ಜಿಲ್ಲೆಯ
ಚಿಕ್ಕಅಯ್ಯೂರು ಗ್ರಾಮದ ಬಳಿ ನಡೆದಿದೆ.
ಕಾಡುಹಂದಿ ಹಾವಳಿಗೆ ಬೇಸತ್ತು ಅದನ್ನು ಹಿಡಿಯಲು ಗ್ರಾಮಸ್ಥರು ಉರುಳು ಹಾಕಿದ್ದರು. ಆದರೆ, ಪಾಪ ಅದೇ ಮಾರ್ಗವಾಗಿ ಹಾದುಹೋದ ಚಿರತೆ ಅದರಲ್ಲಿ ಸಿಕ್ಕಿಬಿದ್ದಿದೆ.

ಉರುಳಿಗೆ ಸಿಕ್ಕಿಬಿದ್ದ ಚಿರತೆಯನ್ನು ನೋಡಲು ಸುತ್ತಮುತ್ತಲ ಹಳ್ಳಿಗಳಿಂದ ನೂರಾರು ಜನರು ಜಮಾಯಿಸಿದರು. ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ರಕ್ಷಿಸುವ ಯತ್ನದಲ್ಲಿ ತೊಡಗಿದರು.

Click on your DTH Provider to Add TV9 Kannada