ಕ್ವಾರಂಟೈನ್​ನಲ್ಲಿದ 2 ವರ್ಷದ ಮಗುವಿಗೆ ತಹಶೀಲ್ದಾರ್​ರಿಂದ ನೋಟಿಸ್ ಜಾರಿ.. ಏಕೆ?

ಗದಗ: ಕ್ವಾರಂಟೈನ್ ಅವಧಿ ಮುಗಿಯುವ ಮುನ್ನ ಫೋನ್ ಸ್ವಿಚ್ ಆಫ್ ಮಾಡಿದಕ್ಕೆ ಜಿಲ್ಲೆಯ ಮುಂಡರಗಿ ಹುಡ್ಕೋ ಕಾಲೋನಿಯ ನಿವಾಸಿಯಾಗಿರುವ 2 ವರ್ಷದ ಮಗುವಿಗೆ ಮುಂಡರಗಿ ತಹಶೀಲ್ದಾರ್​ ನೋಟಿಸ್ ಜಾರಿಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ 2 ವರ್ಷದ ಪುಟ್ಟ ಮಗು ಹೋಮ್ ಕ್ವಾರಂಟೈನ್ ನಲ್ಲಿದೆ. ಆದರೆ ಮಗುವಿನ ಕುಟುಂಬದವರು ಅಧಿಕಾರಿಗಳಿಗೆ ನೀಡಿರುವ ಮೊಬೈಲ್ ನಂಬರ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಮಗುವಿನ  ಕ್ವಾರಂಟೈನ್ ಅವಧಿ ಮುಗಿಯುವ ಮುನ್ನವೇ ಫೋನ್ ಸ್ವಿಚ್ ಆಫ್ ಆಗಿದ್ದರಿಂದ  ಮುಂಡರಗಿಯ ತಹಶೀಲ್ದಾರ್  ಮಗುವಿನ ಹೆಸರಿನಲ್ಲಿ […]

ಕ್ವಾರಂಟೈನ್​ನಲ್ಲಿದ 2 ವರ್ಷದ ಮಗುವಿಗೆ ತಹಶೀಲ್ದಾರ್​ರಿಂದ ನೋಟಿಸ್ ಜಾರಿ.. ಏಕೆ?
ಕೊರೊನಾ ವೈರಸ್
Edited By:

Updated on: Jul 12, 2020 | 4:45 PM

ಗದಗ: ಕ್ವಾರಂಟೈನ್ ಅವಧಿ ಮುಗಿಯುವ ಮುನ್ನ ಫೋನ್ ಸ್ವಿಚ್ ಆಫ್ ಮಾಡಿದಕ್ಕೆ ಜಿಲ್ಲೆಯ ಮುಂಡರಗಿ ಹುಡ್ಕೋ ಕಾಲೋನಿಯ ನಿವಾಸಿಯಾಗಿರುವ 2 ವರ್ಷದ ಮಗುವಿಗೆ ಮುಂಡರಗಿ ತಹಶೀಲ್ದಾರ್​ ನೋಟಿಸ್ ಜಾರಿಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಸದ್ಯ 2 ವರ್ಷದ ಪುಟ್ಟ ಮಗು ಹೋಮ್ ಕ್ವಾರಂಟೈನ್ ನಲ್ಲಿದೆ. ಆದರೆ ಮಗುವಿನ ಕುಟುಂಬದವರು ಅಧಿಕಾರಿಗಳಿಗೆ ನೀಡಿರುವ ಮೊಬೈಲ್ ನಂಬರ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಮಗುವಿನ  ಕ್ವಾರಂಟೈನ್ ಅವಧಿ ಮುಗಿಯುವ ಮುನ್ನವೇ ಫೋನ್ ಸ್ವಿಚ್ ಆಫ್ ಆಗಿದ್ದರಿಂದ  ಮುಂಡರಗಿಯ ತಹಶೀಲ್ದಾರ್  ಮಗುವಿನ ಹೆಸರಿನಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪದಡಿ ಕೇಸ್ ಹಾಕುವ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸುವುದಾಗಿ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

Published On - 3:17 pm, Sun, 12 July 20