ಮರಳಿ ಕೃಷಿಗೆ: ನೇಗಿಲು ಹಿಡಿದು ಉಳುಮೆಗೆ ಇಳಿದ ‘ಸಾರಥಿ’
ಉಡುಪಿ: ಕೊರೊನಾ ಮಹಾಮಾರಿ ಜನರಿಗೆ ಕಷ್ಟದ ನೀಡುವ ಜೊತೆಗೆ ಹೊಸ ಪಾಠಗಳನ್ನೂ ಸಹ ಕಲಿಸುತ್ತಿವೆ. ಅದರಲ್ಲೂ ಮಧ್ಯಮ ವರ್ಗದವರಿಗೆ ಸಂಕಷ್ಟಗಳನ್ನು ಅರಿತು ಅದಕ್ಕೆ ಹೊಂದಿಕೊಳ್ಳುವಂಥ ಅನುಭವವನ್ನೂ ಸಹ ನೀಡುತ್ತಿದೆ. ಅದರಲ್ಲಿ ಪ್ರಮುಖವಾಗಿ ಉದ್ಯೋಗ ಕಳೆದುಕೊಂಡ ಬಹಳಷ್ಟು ಮಂದಿಗೆ ಮರಳಿ ಬೇಸಾಯದಲ್ಲಿ ತೊಡಗಿಕೊಳ್ಳುವ ಸ್ಫೂರ್ತಿ ನೀಡಿದೆ. ಇದಕ್ಕೆ ಉತ್ತಮ ಉದಾಹರಣೆ ದಿನೇಶ್ ಶೆಟ್ಟಿ. ಮೂಲತಃ ಜಿಲ್ಲೆಯ ಕಟಪಾಡಿಯ ಕುಂಜಾರುಗಿರಿಯ ನಿವಾಸಿಯಾದ ದಿನೇಶ್ ಜೀವನೋಪಾಯಕ್ಕಾಗಿ ಆಟೋ ಚಲಾಯಿಸುತ್ತಿದ್ದರು. ಆದರೆ, ಕೊರೊನಾದಿಂದ ಘೋಷಣೆಯಾದ ಲಾಕ್ಡೌನ್ ನಂತರದಲ್ಲಿ ಸಂಪಾದನೆಗೆ ಕಲ್ಲುಬಿತ್ತು. ಆದರೆ, ಇದಕ್ಕೆ […]

ಉಡುಪಿ: ಕೊರೊನಾ ಮಹಾಮಾರಿ ಜನರಿಗೆ ಕಷ್ಟದ ನೀಡುವ ಜೊತೆಗೆ ಹೊಸ ಪಾಠಗಳನ್ನೂ ಸಹ ಕಲಿಸುತ್ತಿವೆ. ಅದರಲ್ಲೂ ಮಧ್ಯಮ ವರ್ಗದವರಿಗೆ ಸಂಕಷ್ಟಗಳನ್ನು ಅರಿತು ಅದಕ್ಕೆ ಹೊಂದಿಕೊಳ್ಳುವಂಥ ಅನುಭವವನ್ನೂ ಸಹ ನೀಡುತ್ತಿದೆ. ಅದರಲ್ಲಿ ಪ್ರಮುಖವಾಗಿ ಉದ್ಯೋಗ ಕಳೆದುಕೊಂಡ ಬಹಳಷ್ಟು ಮಂದಿಗೆ ಮರಳಿ ಬೇಸಾಯದಲ್ಲಿ ತೊಡಗಿಕೊಳ್ಳುವ ಸ್ಫೂರ್ತಿ ನೀಡಿದೆ.
ಇದಕ್ಕೆ ಉತ್ತಮ ಉದಾಹರಣೆ ದಿನೇಶ್ ಶೆಟ್ಟಿ. ಮೂಲತಃ ಜಿಲ್ಲೆಯ ಕಟಪಾಡಿಯ ಕುಂಜಾರುಗಿರಿಯ ನಿವಾಸಿಯಾದ ದಿನೇಶ್ ಜೀವನೋಪಾಯಕ್ಕಾಗಿ ಆಟೋ ಚಲಾಯಿಸುತ್ತಿದ್ದರು. ಆದರೆ, ಕೊರೊನಾದಿಂದ ಘೋಷಣೆಯಾದ ಲಾಕ್ಡೌನ್ ನಂತರದಲ್ಲಿ ಸಂಪಾದನೆಗೆ ಕಲ್ಲುಬಿತ್ತು. ಆದರೆ, ಇದಕ್ಕೆ ಬದುಕು ನಿರ್ವಹಣೆ ಇನ್ನು ಹೇಗೋ ಎಂದು ಎದೆಗುಂದದೆ ತಮ್ಮ ಪೂರ್ವಿಕರ ಕುಲಕಸುಬಾದ ಬೇಸಾಯವನ್ನೇ ಕೈಗೆತ್ತಿಕೊಂಡಿದ್ದಾರೆ.
ಮೂಲತ: ರೈತರ ಕುಟುಂಬಕ್ಕೆ ಸೇರಿರುವ ದಿನೇಶ್ ಹಿರಿಯರಿಂದ ಎರಡು ಎಕರೆ ಜಮೀನು ಬಳುವಳಿಯಾಗಿ ಪಡೆದಿದ್ದರು. ಆದರೆ, ಆಟೋ ನಡೆಸುವ ಭರದಲ್ಲಿ ಬೇಸಾಯಕ್ಕೆ ಗುಡ್ಬೈ ಹೇಳಿದ್ದರು. ಆದರೆ, ಇದೀಗ ಮರಳಿ ಕೃಷಿಕನಾಗಿದ್ದಾರೆ. ಗಿಡ, ಪೊದೆ ಬೆಳೆದುನಿಂತು ಪಾಳು ಬಿದ್ದಿದ್ದ ತಮ್ಮ ಜಮೀನನ್ನು ಸಜ್ಜುಮಾಡಿ ಬೇಸಾಯ ಪ್ರಾರಂಭಿಸಿದ್ದಾರೆ.
ಇದಲ್ಲದೆ ಇತರರ 3 ಎಕರೆ ಜಾಗವನ್ನು ಭೋಗ್ಯಕ್ಕೆ ಪಡೆದು ಒಟ್ಟು 5 ಎಕರೆ ಜಾಗದಲ್ಲಿ ಬೇಸಾಯ ಮಾಡುತ್ತಿದ್ದಾರೆ. ತನ್ನ ಪತ್ನಿ ಹಾಗೂ ಎರಡು ಗಂಡು ಮಕ್ಕಳ ಜೊತೆ ಹಾಯಾಗಿದ್ದಾರೆ. ಒಟ್ನಲ್ಲಿ, ಜೀವನದಲ್ಲಿ ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ತೆರೆಯುವುದು ಎಂಬ ಮಾತಿದೆ. ಅಂತೆಯೇ, ಕೊರೊನಾ ಮತ್ತು ಲಾಕ್ಡೌನ್ನಿಂದ ಸಂಪಾದನೆಯ ಒಂದು ಬಾಗಿಲು ಬಂದಾದರೂ ಹಿರಿಯರ ಕುಲಕಸುಬು ಇದೀಗ ದಿನೇಶ್ರಿಗೆ ಮತ್ತೊಂದು ಭವ್ಯ ಬಾಗಿಲು ತೆರೆದಿಟ್ಟಿದೆ. ಹರೀಶ್ ಪಾಲೆಚ್ಚಾರ್
Published On - 2:44 pm, Sun, 12 July 20