ಬೆಂಗಳೂರಿಗರ ಬೆನ್ನಿಗೆ ಬಿದ್ದ ಕೊರೊನಾ, ಒಟ್ಟು ಸೋಂಕಿತರ ಡೀಟೇಲ್ಸ್ ಇಲ್ಲಿದೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇದಿನೆ ಕೊರೊನಾ ಕೇಸ್‌ಗಳು ಮಿತಿ ಮೀರಿ ಹೆಚ್ಚುತ್ತಿವೆ. ಮುಂದೆ ಬೆಂಗಳೂರಿಗೆ ಮಹಾ ಕಂಟಕ ಕಾದಿದಿಯಾ ಎಂಬ ಭಯ ಶುರುವಾಗಿದೆ. ಬೆಂಗಳೂರು ಪೂರ್ವದಲ್ಲಿ ಒಟ್ಟು 168 ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 68 ಸಕ್ರಿಯ ಕೇಸ್‌ಗಳು, 85 ಜನ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ 15 ಜನ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ಪಶ್ಚಿಮದಲ್ಲಿ ಒಟ್ಟು 144 ಕೊರೊನಾ ಕೇಸ್‌ಗಳು ಪತ್ತೆಯಾಗಿವೆ. ಈ ಪೈಕಿ 39 ಸಕ್ರಿಯ ಕೇಸ್, 94 ಜನ ಡಿಸ್ಚಾರ್ಜ್, 11 ಜನರ […]

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇದಿನೆ ಕೊರೊನಾ ಕೇಸ್‌ಗಳು ಮಿತಿ ಮೀರಿ ಹೆಚ್ಚುತ್ತಿವೆ. ಮುಂದೆ ಬೆಂಗಳೂರಿಗೆ ಮಹಾ ಕಂಟಕ ಕಾದಿದಿಯಾ ಎಂಬ ಭಯ ಶುರುವಾಗಿದೆ. ಬೆಂಗಳೂರು ಪೂರ್ವದಲ್ಲಿ ಒಟ್ಟು 168 ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 68 ಸಕ್ರಿಯ ಕೇಸ್‌ಗಳು, 85 ಜನ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ 15 ಜನ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ಪಶ್ಚಿಮದಲ್ಲಿ ಒಟ್ಟು 144 ಕೊರೊನಾ ಕೇಸ್‌ಗಳು ಪತ್ತೆಯಾಗಿವೆ. ಈ ಪೈಕಿ 39 ಸಕ್ರಿಯ ಕೇಸ್, 94 ಜನ ಡಿಸ್ಚಾರ್ಜ್, 11 ಜನರ ಸಾವು.
ಬೆಂಗಳೂರು ದಕ್ಷಿಣದಲ್ಲಿ ಒಟ್ಟು 136 ಕೊರೊನಾ ಪ್ರಕರಣಗಳಲ್ಲಿ 96 ಸಕ್ರಿಯ ಕೇಸ್, 28 ಜನ ಡಿಸ್ಚಾರ್ಜ್, 8 ಜನ ಮೃತಪಟ್ಟಿದ್ದಾರೆ. R.R.ನಗರ ವಲಯದಲ್ಲಿ ಒಟ್ಟು 23 ಕೊರೊನಾ ಪ್ರಕರಣಗಳು ಸಿಕ್ಕಿವೆ. ಅದರಲ್ಲಿ 12 ಸಕ್ರಿಯ ಕೇಸ್, 5 ಜನ ಡಿಸ್ಚಾರ್ಜ್, ಇಬ್ಬರು ಸಾವು.
ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 137 ಕೊರೊನಾ ಕೇಸ್ಗಳಿವೆ. ಅದರಲ್ಲಿ 57 ಸಕ್ರಿಯ ಕೇಸ್, 74 ಜನ ಡಿಸ್ಚಾರ್ಜ್, 6 ಜನರ ಸಾವು. ಮಹದೇವಪುರ ವಲಯದಲ್ಲಿ ಒಟ್ಟು 54 ಕೊರೊನಾ ಪ್ರಕರಣಗಳಿವೆ. ಈ ಪೈಕಿ 27 ಸಕ್ರಿಯ ಕೇಸ್, 27 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಯಲಹಂಕ ವಲಯದಲ್ಲಿ ಒಟ್ಟು 21 ಕೊರೊನಾ ಕೇಸ್ಗಳಿವೆ. ಇದರಲ್ಲಿ 15 ಸಕ್ರಿಯ ಪ್ರಕರಣ, 5 ಜನ ಡಿಸ್ಚಾರ್ಜ್, ಓರ್ವ ಸಾವು.
ದಾಸರಹಳ್ಳಿ ವಲಯದಲ್ಲಿ ಒಟ್ಟು 10 ಕೊರೊನಾ ಪ್ರಕರಣಗಳಿವೆ. 9 ಸಕ್ರಿಯ ಪ್ರಕರಣ, ಓರ್ವ ಗುಣಮುಖನಾಗಿ ಡಿಸ್ಚಾರ್ಜ್. ಬೆಂಗಳೂರು ಹೊರವಲಯದಲ್ಲಿ 42 ಕೊರೊನಾ ಪ್ರಕರಣಗಳಲ್ಲಿ 30 ಸಕ್ರಿಯ ಪ್ರಕರಣ, 6 ಜನ ಡಿಸ್ಚಾರ್ಜ್, 6 ಜನ ಸಾವು. ಇನ್ನು ರೆಸ್ಟ್ ಆಫ್ ಬೆಂಗಳೂರಿನಲ್ಲಿ ಒಟ್ಟು 16 ಕೊರೊನಾ ಕೇಸ್. ಬಿಬಿಎಂಪಿ ವ್ಯಾಪ್ತಿಗೆ ಒಳಪಡದೆ ಇರುವ ಏರಿಯಾ ಸೇರಿ 9 ಸಕ್ರಿಯ ಪ್ರಕರಣ, 7 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.