ತುಮಕೂರು: ಕೊರೊನಾ ಕಂಟಕ ಎದುರಾದ ಮೇಲೆ ಎಲ್ಲೂ ಹೊರಗೇ ಹೋಗಿಲ್ಲ ಅನ್ನೋ ಕೊರಗು ನಿಮ್ಮನ್ನ ಕಾಡ್ತಾ ಇದೆಯಾ? ಅದರಲ್ಲೂ ನೀವು ತುಮಕೂರಿಗೆ ಹತ್ತಿರದಲ್ಲೇ ಇದ್ದೀರ? ಹಾಗಿದ್ರೆ ಚಿಂತೆ ಬಿಡಿ, ಈ ಸ್ಟೋರಿ ಓದಿ.
ಎತ್ತ ನೋಡಿದರು ಹಸಿರು. ನೋಡ ನೋಡುತ್ತಲೇ ಕಳೆದುಹೋಗುವಂತಹ ಸೌಂದರ್ಯ. ಇಂತಹ ರಮಣೀಯ ದೃಶ್ಯಗಳನ್ನ ಕಣ್ತುಂಬಿಕೊಳ್ಳಲು ನೀವು ಬೇರೆಲ್ಲೂ ಹೋಗಬೇಕಿಲ್ಲ ಜಸ್ಟ್ ತುಮಕೂರಿನತ್ತ ಹೊರಟುಬಿಟ್ಟರೆ ಸಾಕು. ದೇವರಾಯನದುರ್ಗ ಹಾಗೂ ನಾಮದ ಚಿಲುಮೆಯ ವಾತಾವರಣ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.
ಇಷ್ಟು ದಿನ ಕೊರೊನಾ ಕಂಟಕದಿಂದ ಟ್ರಿಪ್, ಪಿಕ್ನಿಕ್ ಎಲ್ಲಾ ಬಂದ್ ಆಗಿತ್ತು. ಆದ್ರೆ, ಈಗೀಗ ಒಂದಿಷ್ಟು ರಿಲೀಫ್ ಸಿಗುತ್ತಿದೆ. ಪರಿಣಾಮ ಜನರು ಮೆಲ್ಲಗೆ ಪ್ರವಾಸಿ ತಾಣಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಅದ್ರಲ್ಲೂ ಬೆಂಗಳೂರಿಗೆ ಹತ್ತಿರದಲ್ಲೇ ಇರುವ, ತುಮಕೂರು ಜಿಲ್ಲೆಯ ದೇವರಾಯನದುರ್ಗ ಹಾಗೂ ನಾಮದಚಿಲುಮೆಗೆ ನೂರಾರು ಪ್ರವಾಸಿಗರು ಎಂಟ್ರಿ ಕೊಡ್ತಾರೆ. ಪ್ರಕೃತಿ ಸೌಂದರ್ಯ ಕಣ್ತುಂಬಿಕೊಂಡು, ಮನಸ್ಸಿಗೆ ಮುದ ನೀಡುವ ವಾತಾವರಣದಲ್ಲಿ ಕಳೆದುಹೋಗ್ತಾರೆ.
ಪ್ರವಾಸಿಗರ ಜೊತೆ ಬೈಕ್ ರೈಡರ್ಸ್ಗೂ ಇದು ಹೇಳಿ ಮಾಡಿಸಿದ ಜಾಗ. ಹೀಗಾಗಿ ಬೈಕ್ ಕ್ರೇಜ್ ಇರುವ ಹಲವರು ದೇವರಾಯನದುರ್ಗ ಹಾಗೂ ನಾಮದಚಿಲುಮೆಯತ್ತ ಬರ್ತಾರೆ. ಬೈಕ್ನಲ್ಲಿ ಒಂದು ರೌಂಡ್ ಹಾಕುತ್ತಾ, ಪ್ರಕೃತಿ ಸೌಂದರ್ಯ ಸವಿತಾರೆ.
ಒಟ್ನಲ್ಲಿ ಕೊರೊನಾ ಜಂಜಾಟದ ನಡುವೆ ಟೂರ್, ಟ್ರಕ್ಕಿಂಗ್, ಪಿಕ್ನಿಕ್ ಅನ್ನೋದನ್ನೇ ಮರೆತಿದ್ದವರಿಗೆ ಮತ್ತೆ ಹಳೇ ಲೈಫ್ ನೆನಪಾಗಿದೆ. ಅದರಲ್ಲೂ ವೀಕೆಂಡ್ ಅಂತಾ ನಿನ್ನೆ ದೇವರಾಯನದುರ್ಗಕ್ಕೆ ಎಂಟ್ರಿಕೊಟ್ಟಿದ್ದ ಪ್ರವಾಸಿಗರು ಫುಲ್ ಎಂಜಾಯ್ ಮಾಡಿದ್ರು.