AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಇಂಪ್ಯಾಕ್ಟ್: ಕೊನೆಗೂ ಸೋಂಕಿತನ ಮೃತದೇಹ BBMPಗೆ ಹಸ್ತಾಂತರಿಸಿದ ಆಸ್ಪತ್ರೆ

ಬೆಂಗಳೂರು: ಕೊರೊನಾ ಸೋಂಕಿತ ಮೃತಪಟ್ಟು 3 ದಿನವಾದ್ರೂ ಮೃತದೇಹ ನೀಡದೆ ಸತಾಯಿಸುತ್ತಿದ್ದ ಸೇಂಟ್ ಮಾರ್ಥಾಸ್ ಆಸ್ಪತ್ರೆ ಕೊನೆಗೂ ಮೃತದೇಹವನ್ನ ಹಸ್ತಾಂತರಿಸಿದೆ. ಟಿವಿ9 ವರದಿಯಿಂದ ಎಚ್ಚೆತ್ತು ಬಿಬಿಎಂಪಿಗೆ ಕೊರೊನಾ ಸೋಂಕಿತನ ಶವವನ್ನು ಆಸ್ಪತ್ರೆ ಹಸ್ತಾಂತರ ಮಾಡಿದೆ. ಜೂನ್ 14ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ರೋಗಿಯೊಬ್ಬರನ್ನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಬಳಿಕ ಆತನಿಗೆ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದ್ರೂ ಕೋವಿಡ್ ಆಸ್ಪತ್ರೆಗೆ ಆಡಳಿತ ಮಂಡಳಿ ಶಿಫ್ಟ್ ಮಾಡಲಿಲ್ಲ. ಪೇಷಂಟ್ ಆರೋಗ್ಯ ಸ್ಥಿತಿ ಸರಿ ಇಲ್ಲ ಅಂತಾ ಹೇಳಿ ಅಲ್ಲೇ […]

ಟಿವಿ9 ಇಂಪ್ಯಾಕ್ಟ್: ಕೊನೆಗೂ ಸೋಂಕಿತನ ಮೃತದೇಹ BBMPಗೆ ಹಸ್ತಾಂತರಿಸಿದ ಆಸ್ಪತ್ರೆ
ಬಿಬಿಎಂಪಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:Jun 28, 2020 | 5:24 PM

Share

ಬೆಂಗಳೂರು: ಕೊರೊನಾ ಸೋಂಕಿತ ಮೃತಪಟ್ಟು 3 ದಿನವಾದ್ರೂ ಮೃತದೇಹ ನೀಡದೆ ಸತಾಯಿಸುತ್ತಿದ್ದ ಸೇಂಟ್ ಮಾರ್ಥಾಸ್ ಆಸ್ಪತ್ರೆ ಕೊನೆಗೂ ಮೃತದೇಹವನ್ನ ಹಸ್ತಾಂತರಿಸಿದೆ. ಟಿವಿ9 ವರದಿಯಿಂದ ಎಚ್ಚೆತ್ತು ಬಿಬಿಎಂಪಿಗೆ ಕೊರೊನಾ ಸೋಂಕಿತನ ಶವವನ್ನು ಆಸ್ಪತ್ರೆ ಹಸ್ತಾಂತರ ಮಾಡಿದೆ.

ಜೂನ್ 14ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ರೋಗಿಯೊಬ್ಬರನ್ನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಬಳಿಕ ಆತನಿಗೆ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದ್ರೂ ಕೋವಿಡ್ ಆಸ್ಪತ್ರೆಗೆ ಆಡಳಿತ ಮಂಡಳಿ ಶಿಫ್ಟ್ ಮಾಡಲಿಲ್ಲ. ಪೇಷಂಟ್ ಆರೋಗ್ಯ ಸ್ಥಿತಿ ಸರಿ ಇಲ್ಲ ಅಂತಾ ಹೇಳಿ ಅಲ್ಲೇ ಚಿಕಿತ್ಸೆ ನೀಡಲು ನಿರ್ಧರಿಸಿದರು. ಆದರೆ, ಜೂನ್ 25 ರಂದು ಚಿಕಿತ್ಸೆ ಫಲಿಸದೆ, ಸೋಂಕಿತ ಮೃತಪಟ್ಟಿದ್ದರು.

ಟಿವಿ9 ಇಂಪ್ಯಾಕ್ಟ್: ಚಿಕಿತ್ಸೆಗೆ ತಗಲಿದ ಖರ್ಚೆಂದು ಒಟ್ಟು 2 ಲಕ್ಷದ 68 ಸಾವಿರದ 725 ರೂಪಾಯಿ ಬಿಲ್ ಮಾಡಿದ್ದಾರೆ. ಇನ್ಶೂರೆನ್ಸ್​​ನಿಂದ 1 ಲಕ್ಷದ 80 ಸಾವಿರದವರೆಗೂ ಕ್ಲೈಮ್​ ಆಗಿದೆ. ಆದರೆ, ಉಳಿದ ಹಣವನ್ನು ಕಟ್ಟೋವರೆಗೂ ಮೃತದೇಹ ನೀಡುವುದಿಲ್ಲ ಎಂದು ಆಸ್ಪತ್ರೆಯವರು ಸತಾಯಿಸುತ್ತಿದ್ದಾರೆ ಎಂದು ಮೃತನ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದರು.

ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೇ ಬಿಬಿಎಂಪಿಗೆ ಮೃತದೇಹವನ್ನು ಆಸ್ಪತ್ರೆ ಹಸ್ತಾಂತರ ಮಾಡಿದೆ. ಬೆಂಗಳೂರಿನ ಸುಮನಹಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

Published On - 5:23 pm, Sun, 28 June 20

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು