ಮಲಪ್ರಭಾ ನದಿ ಕೆಸರಿನಲ್ಲಿ ಸಿಲುಕಿ 2 ಎತ್ತುಗಳ ನರಳಾಟ
ಗದಗ:ಮಲಪ್ರಭಾ ನದಿಯಲ್ಲಿ ಎತ್ತುಗಳನ್ನು ಮೈ ತೊಳೆಯಲು ಹೋದ ವೇಳೆ, ಎತ್ತುಗಳು ನದಿಯ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಘಟನೆ ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಹಳೇ ಸೇತುವೆ ಬಳಿ ಈ ಘಟನೆ ನಡೆದಿದ್ದು, ಗೋವನಕೊಪ್ಪ ಗ್ರಾಮದ ರೈತ ನಿಂಗಪ್ಪ ಹಿರಿಗಣ್ಣನವರು ತಮ್ಮ ಎತ್ತುಗಳ ಮೈತೊಳೆಯಲು ನದಿಗೆ ಇಳಿದಿದ್ದಾರೆ. ಇತ್ತೀಚೆಗೆ ಮಲಪ್ರಭಾ ನದಿ ಉಕ್ಕಿ ಹರಿದ ಪರಿಣಾಮ ಮಣ್ಣು ಮಿಶ್ರಿತ ಮರಳು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆ ಆಗಿರುವುದರಿಂದ ಎತ್ತುಗಳು ಕೆಸರಲ್ಲಿ ಸಿಲುಕಿಕೊಂಡಿವೆ. ನಿಂಗಪ್ಪ […]

ಗದಗ:ಮಲಪ್ರಭಾ ನದಿಯಲ್ಲಿ ಎತ್ತುಗಳನ್ನು ಮೈ ತೊಳೆಯಲು ಹೋದ ವೇಳೆ, ಎತ್ತುಗಳು ನದಿಯ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಘಟನೆ ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಹಳೇ ಸೇತುವೆ ಬಳಿ ಈ ಘಟನೆ ನಡೆದಿದ್ದು, ಗೋವನಕೊಪ್ಪ ಗ್ರಾಮದ ರೈತ ನಿಂಗಪ್ಪ ಹಿರಿಗಣ್ಣನವರು ತಮ್ಮ ಎತ್ತುಗಳ ಮೈತೊಳೆಯಲು ನದಿಗೆ ಇಳಿದಿದ್ದಾರೆ. ಇತ್ತೀಚೆಗೆ ಮಲಪ್ರಭಾ ನದಿ ಉಕ್ಕಿ ಹರಿದ ಪರಿಣಾಮ ಮಣ್ಣು ಮಿಶ್ರಿತ ಮರಳು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆ ಆಗಿರುವುದರಿಂದ ಎತ್ತುಗಳು ಕೆಸರಲ್ಲಿ ಸಿಲುಕಿಕೊಂಡಿವೆ.
ನಿಂಗಪ್ಪ ಹಿರಿಗಣ್ಣ ಹಾಗೂ ಗ್ರಾಮಸ್ಥರ ಒಂದೂವರೆ ಗಂಟೆ ಕಾರ್ಯಾಚರಣೆಯಲ್ಲಿ ಒಂದು ಎತ್ತನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ. ಇನ್ನೊಂದು ಎತ್ತನ್ನು ಹೊರ ತೆಗೆಯಲು ಗ್ರಾಮಸ್ಥರಿಂದ ಕಾರ್ಯಾಚರಣೆ ಮುಂದುವರಿದಿದೆ.

Published On - 6:46 pm, Mon, 31 August 20




