ಬೆಂಗಳೂರು ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ.. ಮನೆಗೆ ಸೇರಿಸದ ಅಪ್ಪನನ್ನು ಭೀಕರವಾಗಿ ಕೊಂದ ಮಗ

ಅಂತರ್ಜಾತಿ ಪ್ರೇಮ ವಿವಾಹ ವಿರೋಧಿಸಿದ್ದಕ್ಕೆ ತಂದೆಯನ್ನು ಯುವಕನೊಬ್ಬ ಹತ್ಯೆಮಾಡಿರುವ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗರ್ಡಡಿ ಗ್ರಾಮದ ಮುಂದೊಟ್ಟುನಲ್ಲಿ ನಡೆದಿದೆ. ಬಡಿಗೆಯಿಂದ ಹೊಡೆದು ಪುತ್ರ ಹರೀಶ್ ತನ್ನ ತಂದೆ ಶ್ರೀಧರ್(55) ಅವರನ್ನು ಕೊಲೆಗೈದಿದ್ದಾನೆ.

  • TV9 Web Team
  • Published On - 23:52 PM, 18 Jan 2021
ಬೆಂಗಳೂರು ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ.. ಮನೆಗೆ ಸೇರಿಸದ ಅಪ್ಪನನ್ನು ಭೀಕರವಾಗಿ ಕೊಂದ ಮಗ
ಮನೆಗೆ ಸೇರಿಸದ ಅಪನನ್ನು ಭೀಕರವಾಗಿ ಕೊಂದ ಮಗ

ದಕ್ಷಿಣ ಕನ್ನಡ: ಅಂತರ್ಜಾತಿ ಪ್ರೇಮ ವಿವಾಹ ವಿರೋಧಿಸಿದ್ದಕ್ಕೆ ತಂದೆಯನ್ನು ಯುವಕನೊಬ್ಬ ಹತ್ಯೆಮಾಡಿರುವ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗರ್ಡಡಿ ಗ್ರಾಮದ ಮುಂದೊಟ್ಟುನಲ್ಲಿ ನಡೆದಿದೆ. ಬಡಿಗೆಯಿಂದ ಹೊಡೆದು ಪುತ್ರ ಹರೀಶ್ ತನ್ನ ತಂದೆ ಶ್ರೀಧರ್(55) ಅವರನ್ನು ಕೊಲೆಗೈದಿದ್ದಾನೆ.

ಸದ್ಯ, ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಆರೋಪಿ ಪುತ್ರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹರೀಶ್ ಬೆಂಗಳೂರಿನ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದನು. ಆದರೆ, ಯುವತಿ ಬೇರೆ ಜಾತಿ ಅನ್ನುವ ಕಾರಣಕ್ಕೆ ಶ್ರೀಧರ್​ ಇಬ್ಬರನ್ನು ಮನೆಗೆ ಸೇರಿಸಿರಲಿಲ್ಲ.

ತನ್ನನ್ನು ಮನೆಗೆ ಸೇರಿಸಲು ನಿರಾಕರಿಸಿದ ತಂದೆ ಜೊತೆ ಹರೀಶ್​ ಜಟಾಪಟಿ ನಡೆಸಿದ್ದಾನೆ. ಈ ವೇಳೆ, ಶ್ರೀಧರ್ ಜೊತೆ ಮಾತಿಗೆ ಮಾತು ಬೆಳೆದು ಹರೀಶ್​ ತನ್ನ ತಂದೆಯನ್ನು ಹೊಡೆದು ಕೊಲೆಗೈದಿದ್ದಾನೆ.

ಗೆಳೆತನದ ಸೋಗಿನಲ್ಲಿ.. ಮಾವನ ಮನೆಗೆ ಬಂದಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ