ಮನೆ ನೋಡಿಕೊಳ್ಳುವ ಹೋಮ್ ಮ್ಯಾನೇಜರ್‌ಗೆ ತಿಂಗಳಿಗೆ 1 ಲಕ್ಷ ರೂ. ಸಂಬಳ ಕೊಡುತ್ತಿದ್ದಾರಂತೆ ಗ್ರೇಲ್ಯಾಬ್ಸ್ ಸಿಇಒ
ಕೆಲವರು ಅಡುಗೆ, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಇತ್ಯಾದಿ ಕೆಲಸಗಳನ್ನು ನೋಡಿಕೊಳ್ಳಲು ಮನೆ ಕೆಲಸದವರನ್ನು ನೇಮಿಸುತ್ತಾರೆ. ಆದ್ರೆ ಗ್ರೇಲ್ಯಾಬ್ಸ್ ಕಂಪನಿ ಸಿಇಒ ಅಮನ್ ಗೋಯಲ್ ಮಾತ್ರ ಕಂಪನಿ ಕೆಲಸಕ್ಕೆ ಯಾವುದೇ ರೀತಿಯ ತೊಂದರೆ ಆಗ್ಬಾರ್ದು ಎಂಬ ಕಾರಣಕ್ಕೆ ಅಡುಗೆಯಿಂದ ಹಿಡಿದು ರಿಪೇರಿ ಕೆಲಸದವರೆಗೆ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಲು ನುರಿತ ಹೋಮ್ ಮ್ಯಾನೇಜರನ್ನು ನೇಮಿಸಿದ್ದಾರಂತೆ. ಇವರಿಂದಾಗಿ ಮನೆಯ ಜವಾಬ್ದಾರಿಯ ತಲೆನೋವು ಸಾಕಷ್ಟು ಕಮ್ಮಿಯಾಗಿದೆ ಎಂದು ಅವರು ಹೇಳುತ್ತಾರೆ.

ಈಗಿನ ಕಾಲದಲ್ಲಿ ದಂಪತಿಗಳಿಬ್ಬರೂ ಸಹ ಹೊರಗಡೆ ಕೆಲಸಕ್ಕೆ ಹೋಗುವವರೇ. ಹೀಗಿರುವಾಗ ಅವರಿಗೆ ಮನೆ ಕೆಲಸಗಳನ್ನು ನೋಡಿಕೊಳ್ಳಲು ಕಷ್ಟಸಾಧ್ಯವಾಗುತ್ತದೆ. ಅದಕ್ಕಾಗಿ ಅಡುಗೆಯಿಂದ ಹಿಡಿದು ಬಟ್ಟೆ ಒಗೆಯುವವರೆಗೆ ಮನೆ ಕೆಲಸ ಮಾಡಲು, 10 ರಿಂದ 20 ಸಾವಿರ ಸಂಬಳ ಕೊಟ್ಟು ಮನೆ ಕೆಲಸದವರನ್ನು ನೇಮಿಸುತ್ತಾರೆ. ಇದರ ಹೊರತು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಯಾರಿಗೂ ವಹಿಸಿಕೊಡುವುದಿಲ್ಲ. ಆದ್ರೆ ಗ್ರೇಲ್ಯಾಬ್ಸ್ ಕಂಪನಿ ಸಿಇಒ ಅಮನ್ ಗೋಯಲ್ ಮಾತ್ರ ತಮಗೂ ಹಾಗೂ ತಮ್ಮ ಹೆಂಡತಿಗೂ ಕಂಪನಿಯನ್ನು ನೋಡಿಕೊಳ್ಳಲು ಯಾವುದೇ ರೀತಿಯ ತೊಂದರೆ ಆಗ್ಬಾರ್ದು ಎಂಬ ಕಾರಣಕ್ಕೆ ಅಡುಗೆ, ದಿನಸಿಯಿಂದ ಹಿಡಿದು ರಿಪೇರಿ ಕೆಲಸಗಳ ವರೆಗೆ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳಲು ಹೌಸ್ ಮ್ಯಾನೇಜರನ್ನು (home manager) ನೇಮಿಸಿದ್ದಾರಂತೆ. ಇವರಿಂದ ಸಮಯವೂ ಉಳಿಯುತ್ತಿದೆ, ತಲೆನೋವು ಕೂಡ ಕಮ್ಮಿಯಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಕುರಿತ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.
ಹೋಮ್ ಮ್ಯಾನೇಜರ್‌ಗೆ ತಿಂಗಳಿಗೆ 1 ಲಕ್ಷ ರೂ. ಸಂಬಳ ಕೊಡ್ತಿದ್ದಾರೆ ಗೋಯೆಲ್:
ಗ್ರೇಲ್ಯಾಬ್ಸ್ ನ ಸಂಸ್ಥಾಪಕ ಮತ್ತು ಸಿಇಒ ಅಮನ್ ಗೋಯೆಲ್, ಹಾಗೂ ಅವರ ಪತ್ನಿ ಹರ್ಷಿತಾ ಶ್ರೀವಾಸ್ತವ ಕಂಪನಿ ಕೆಲಸದಲ್ಲಿ ಬ್ಯುಸಿ ಆಗಿರುವ ಕಾರಣ ಮನೆ ಹಾಗೂ ಕಂಪನಿ ಇವೆರಡನ್ನೂ ನಿರ್ವಹಿಸಲು ಕಷ್ಟಸಾಧ್ಯವಾದ ಕಾರಣ ಮನೆಯನ್ನು ನೋಡಿಕೊಳ್ಳಲು ಹೌಸ್ ಮ್ಯಾನೇಜರನ್ನು ನೇಮಿಸಿದ್ದಾರಂತೆ. ಮನೆ ನಿರ್ವಹಿಸುವುದರಲ್ಲಿ ತರಬೇತಿಯನ್ನು ಪಡೆದ ಈ ಮ್ಯಾನೇಜರ್‌ಗಳು ಊಟದ ಯೋಜನೆ, ದಿನಸಿ, ವಾರ್ಡ್ರೋಬ್‌ಗಳು, ಮನೆ ರಿಪೇರಿ, ಲಾಂಡ್ರಿ ಸೇರಿದಂತೆ ಮನೆಯ A To Z ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಇವರಿಂದಾಗಿ ನಮ್ಮ ತಲೆನೋವು ಸಾಕಷ್ಟು ಕಮ್ಮಿಯಾಗಿದೆ ಎಂದು ಅವರು ಹೇಳಿದ್ದಾರೆ.
ಎಕ್ಸ್‌ನಲ್ಲಿ ಹೌಸ್ ಮ್ಯಾನೇಜರ್‌ಗಳ ಬಗ್ಗೆ ಲೇಖಕ ಸಾಹಿಲ್ ಬ್ಲೂಮ್ ಅವರ ಪೋಸ್ಟ್‌ಗೆ ಪ್ರತ್ಯುತ್ತರಿಸುತ್ತಾ, “ವಾಸ್ತವವಾಗಿ ನಾನು ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಲು ಹೌಸ್ ಮ್ಯಾನೇಜರನ್ನು ನೇಮಿಸಿಕೊಂಡಿದ್ದೇನೆ, ಅವರು ಊಟದ ಯೋಜನೆ, ವಾರ್ಡ್ರೋಬ್‌ಗಳು, ರಿಪೇರಿ, ನಿರ್ವಹಣೆ, ದಿನಸಿ, ಲಾಂಡ್ರಿ ಸೇರಿದಂತೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ” ಎಂದು ಬರೆದಿದ್ದಾರೆ.
ಪೋಸ್ಟ್ ಇಲ್ಲಿದೆ ನೋಡಿ:
I actually hired a Home Manager who is a full-time person who takes care of everything from food planning, wardrobes, repairs, maintenance, Groceries, laundry, etc. Basically, she manages all the house help and service providers and frees up our time.
We needed this because… https://t.co/bXt5B7xXLG
— Aman Goel (@amangoeliitb) November 15, 2025
ತಮ್ಮ ಹೌಸ್ ಮ್ಯಾನೇಜರ್ ಬಗ್ಗೆ ಮಾತನಾಡುತ್ತಾ, ಗೋಯೆಲ್, “ನಮ್ಮೊಂದಿಗೆ ಕೆಲಸ ಮಾಡುವ ವ್ಯಕ್ತಿ ತುಂಬಾನೇ ವಿದ್ಯಾವಂತರು ಮತ್ತು ಹೋಟೆಲ್ ಕೆಲಸದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ನಾವು ಅವರಿಗೆ ತಿಂಗಳಿಗೆ 1 ಲಕ್ಷ ರೂ. ಪಾವತಿಸುತ್ತೇವೆ. ಇದು ದುಬಾರಿಯೇ? ಬಹುಶಃ ಹೌದು. ಆದರೆ ನಾವು ಪಾವತಿಸಲು ಶಕ್ತರಾಗಿದ್ದೇವೆ, ಆದ್ದರಿಂದ ಪಾವತಿಸುತ್ತಿದ್ದೇವೆ. ಅವರಿಂದಾಗಿ ನಮಗೆ ಬಹಳಷ್ಟು ತಲೆನೋವು ಕಮ್ಮಿಯಾಗಿದೆ ಮತ್ತು ಸಮಯವೂ ಉಳಿದಿದೆ” ಎಂದು ಹೇಳಿದ್ದಾರೆ. ನಮ್ಮ ಪೋಷಕರು ಹಿರಿಯರು, ಅವರಿಗೆ ಮನೆಯ ಜವಾಬ್ದಾರಿಗಳನ್ನು ಬಿಟ್ಟು ಅವರಿಗೆ ಹೊರೆ ಕೊಡಲು ನಾವು ಬಯಸುವುದಿಲ್ಲ. ಅದಕ್ಕಾಗಿ ಅಡುಗೆ, ಸ್ವಚ್ಛತೆ, ದಿನಸಿ, ದುರಸ್ತಿ ಕಾರ್ಯ ಇವೆಲ್ಲವನ್ನೂ ನೋಡಿಕೊಳ್ಳಲು ಹೌಸ್ ಮ್ಯಾನೇಜರನ್ನು ನೇಮಿಸಿದ್ದು ಎಂದು ಗೋಯೆಲ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕೂದಲು ಉದುರುವಿಕೆಯ ಸಮಸ್ಯೆಗೆ ಗುಡ್‌ಬೈ ಹೇಳಲು ನೀವು ಮಾಡಬೇಕಾದದ್ದು ಇಷ್ಟೆ
ಈ ಪೋಸ್ಟ್ ಸಾಕಷ್ಟು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದು, ʼನೀವು 2 ರಿಂದ ನಾಲ್ಕು ಮನೆಕೆಲಸದವರನ್ನು ಮೇಲ್ವೆಚಾರಣೆ ಮಾಡುವ ಹೌಸ್ ಮ್ಯಾನೇಜರ್‌ಗೆ 1 ಲಕ್ಷ ಕೊಟ್ಟು ಹಣವನ್ನು ವ್ಯರ್ಥ ಮಾಡುತ್ತಿದ್ದೀರಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಇನ್ನೊಬ್ಬರು ʼಹೌಸ್ ಮ್ಯಾನೇಜರ್ ನೇಮಿಸುವುದರಿಂದ ಪೋಷಕರಿಗೆ ಉತ್ತಮ ಆರೈಕೆ ಸಿಗುತ್ತದೆʼ ಎಂದು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




