Popsicle Idli: ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ ಬೆಂಗಳೂರಿನ ಸ್ಟಿಕ್ ಇಡ್ಲಿ
ಬೆಳಗಿನ ಉಪಹಾರದಲ್ಲಿ ಇಡ್ಲಿಯಂತೂ ಪ್ರತಿ ಮನೆಯಲ್ಲಿ ಇದ್ದೇ ಇರುತ್ತದೆ. ನೀವು ಸಾಮಾನ್ಯವಾಗಿ ಇಡ್ಲಿ, ತಟ್ಟೆ ಇಡ್ಲಿಯನ್ನು ನೋಡಿರುತ್ತೀರಿ. ಆದರೆ ಸ್ಟಿಕ್ ಇಡ್ಲಿ ಕೇಳಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ತ್ ಆಗಿ ವೈರಲ್ ಆಗ್ತಾ ಇದೆ ಈ ಸ್ಟಿಕ್ ಇಡ್ಲಿ.
ಬೆಳಗಿನ ಉಪಹಾರದಲ್ಲಿ ಇಡ್ಲಿಯಂತೂ ಪ್ರತಿ ಮನೆಯಲ್ಲಿ ಇದ್ದೇ ಇರುತ್ತದೆ. ನೀವು ಸಾಮಾನ್ಯವಾಗಿ ಇಡ್ಲಿ, ತಟ್ಟೆ ಇಡ್ಲಿಯನ್ನು ನೋಡಿರುತ್ತೀರಿ. ಆದರೆ ಸ್ಟಿಕ್ ಇಡ್ಲಿ ಕೇಳಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ತ್ ಆಗಿ ವೈರಲ್ ಆಗ್ತಾ ಇದೆ ಈ ಸ್ಟಿಕ್ ಇಡ್ಲಿ. ಏನಿದರ ವಿಶೇಷತೆ ಈ ಸ್ಟೋರಿ ಓದಿ. ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಕೆಲವೊಂದಿಷ್ಟು ಪೋಸ್ಟ್ಗಳು, ವಿಡಿಯೋಗಳು ಸಾಕಷ್ಟು ಸದ್ದು ಮಾಡುತ್ತಿರುತ್ತವೆ. ಇದೀಗಾ ಸ್ಟಿಕ್ ಇಡ್ಲಿ ಎಲ್ಲೆಡೆ ವೈರಲ್ ಆಗಿದೆ. ಹೌದು ಇದನ್ನು ಕಡ್ಡಿ ಇಡ್ಲಿ ಎಂದು ಕೂಡ ಕರೆಯುತ್ತಾರೆ. ನೀವು ಆರಾಮದಾಯಕವಾಗಿ ಸ್ಟಿಕ್ನಲ್ಲಿ ಹಿಡಿದು ಇಡ್ಲಿಯನ್ನು ಸವಿಯಬಹುದು. ಕಡ್ಡಿ ಇಡ್ಲಿ ಮೊದಲ ಬಾರಿಗೆ ಅಕ್ಟೋಬರ್ 2021 ರಲ್ಲಿ ಯೂಟ್ಯೂಬ್‌ನಲ್ಲಿ ವೈರಲ್ ಆಗಿತ್ತು. ಆದರೆ ಇದೀಗಾ ಟ್ವೀಟ್ನಲ್ಲಿ ಸ್ಟಿಕ್ ಇಡ್ಲಿ ಮತ್ತೆ ಭಾರೀ ಚರ್ಚೆಯಾಗುತ್ತಿದೆ. ಆ ಪೋಸ್ಟ್ ಇಲ್ಲಿದೆ.
Bengaluru’s food scene has a new innovation — idli on a stick with sambhar and chutney! Yay or nay? #WhatDoYouThink pic.twitter.com/gzhdGkSKv0
— The Better India (@thebetterindia) January 16, 2023
ಇದನ್ನೂ ಓದಿ: ಪರೀಕ್ಷೆ ಸಮಯದಲ್ಲಿ ಎಚ್ಚರವಾಗಿರಬೇಕೆಂದು ಹೆಚ್ಚು ಬಾರಿ ಕಾಫಿ ಕುಡಿಯುತ್ತೀರಾ, ಅಡ್ಡ ಪರಿಣಾಮಗಳ ತಿಳಿಯಿರಿ
ಬೆಂಗಳೂರಿನ ಆಹಾರ ಕ್ಷೇತ್ರವು ಹೊಸತಾಗಿ ಸ್ಟಿಕ್ ಇಡ್ಲಿ ಪರಿಕಲ್ಪನೆಯನ್ನು ತಂದಿದೆ. ನೀವಿಲ್ಲಿ ಇಡ್ಲಿಯನ್ನು ಸಾಂಬಾರು ಚಟ್ನಿಯೊಂದಿಗೆ ಸ್ಟಿಕ್ ಬಳಸಿ ಕ್ಯಾಂಡಿಯಂತೆ ಸವಿಯಬಹುದಾಗಿದೆ. ಈ ಟ್ವೀಟ್ ಪೋಸ್ಟ್ 90,000 ಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ಈ ಪೋಸ್ಟ್ನ ಇನ್ನೊಂದು ವಿಶೇಷತೆ ಎಂದರೆ ಕೇಂದ್ರದ ವಾಣಿಜ್ಯೋದ್ಯಮ, ಕೌಶಲ್ಯಾಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಈ ಪೋಸ್ಟ್ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದರು, ಮಕ್ಕಳಿಗೆ ಹೌದು ಏಕೆಂದರೆ ಇದು ತಿನ್ನಲು ಸುಲಭ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವೊಂದಿಷ್ಟು ಬಳಕೆದಾರರು ಆಹಾರದಲ್ಲಿ ಯಾವುದೇ ಹೊಸತನ ಬೇಡ, ಇಡ್ಲಿ ಬಾಲ್ಯದಿಂದಲೂ ಸಾಕಷ್ಟು ನೆನಪುಗಳಿವೆ ಹೊಸ ಆವಿಷ್ಕಾರ ಬೇಡ ಎಂದು ಪ್ರತಿಕ್ರಿಯಿಸಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:03 pm, Fri, 27 January 23