AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BR Ambedkar Death Anniversary 2024: ಇಂದು ಡಾ.ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ : ಮಹಾನ್ ನಾಯಕನ ಸ್ಫೂರ್ತಿದಾಯಕ ನುಡಿ ಮುತ್ತುಗಳು

ಡಾ. ಬಿ ಆರ್ ಅಂಬೇಡ್ಕರ್ ಅವರ ಚಿಂತನೆಗಳಿಂದ ನಮಗೆಲ್ಲರಿಗೂ ಕೂಡ ಸ್ಫೂರ್ತಿಯ ಸೆಲೆ, ಆದರ್ಶ ವ್ಯಕ್ತಿ. ಅಸಮಾನತೆ ವಿರುದ್ಧ ಗಟ್ಟಿ ಧ್ವನಿಯೆತ್ತಿದ ಮಾನವತಾವಾದಿ. ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾಕರಾಗಿ ಈ ಸಮಾಜಕ್ಕೆ ನೀಡಿದ ಕೊಡುಗಗಳು ಅಗಾಧವಾದದ್ದು. ಡಿಸೆಂಬರ್‌ 6 ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 68ನೇ ಪುಣ್ಯ ತಿಥಿ. ಈ ದಿನವನ್ನು 'ಮಹಾಪರಿನಿರ್ವಾಣ ದಿನ'ವನ್ನಾಗಿ ಆಚರಿಸಲಾಗುತ್ತಿದ್ದು, ಈ ದಿನದ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

BR Ambedkar Death Anniversary 2024: ಇಂದು ಡಾ.ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ : ಮಹಾನ್ ನಾಯಕನ ಸ್ಫೂರ್ತಿದಾಯಕ ನುಡಿ ಮುತ್ತುಗಳು
ಡಾ. ಬಿ ಆರ್ ಅಂಬೇಡ್ಕರ್
ಸಾಯಿನಂದಾ
| Edited By: |

Updated on: Dec 06, 2024 | 10:06 AM

Share

ಭಾರತ ಕಂಡ ಮಹಾನ್‌ ವ್ಯಕ್ತಿ ಡಾ. ಬಿ.ಆರ್‌. ಅಂಬೇಡ್ಕರ್‌. ಯುವ ಸಮುದಾಯಕ್ಕೆ ತನ್ನ ಚಿಂತನೆಗಳಿಂದಲೇ ಸ್ಫೂರ್ತಿ ಹಾಗೂ ಆದರ್ಶ ವ್ಯಕ್ತಿಯೆನಿಸಿಕೊಂಡಿದ್ದಾರೆ. ಸಮಾಜ ಸುಧಾರಕರಾಗಿದ್ದು, ದಲಿತ ಬೌದ್ಧ ಚಳುವಳಿಯನ್ನು ಮುನ್ನಡೆಸುವ ಮೂಲಕ ಪ್ರೇರಣೆಯಾದ ವ್ಯಕ್ತಿಯಾಗಿದ್ದಾರೆ. ಅದಲ್ಲದೇ, ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ದಲಿತ ಕುಟುಂದಲ್ಲಿ ಜನಿಸಿದ್ದರಿಂದ ಅಸ್ಪೃಶ್ಯತೆ ನೋವು ಮಾತ್ರ ಇವರನ್ನು ಬಿಡಲಿಲ್ಲ. ಹೀಗಾಗಿ ಅಂಬೇಡ್ಕರ್ ಅವರು ಮಹಿಳೆಯರು ಹಕ್ಕುಗಳು, ಶೋಷಿತ ವರ್ಗಗಳ ಹಕ್ಕಿಗಾಗಿ ಹೋರಾಡಿದ ಮಹಾನ್ ವ್ಯಕ್ತಿ. ಡಿಸೆಂಬರ್ 6 ರಂದು ಅಂಬೇಡ್ಕರ್ ಅವರ ಪುಣ್ಯ ತಿಥಿಯಾಗಿದ್ದು, ಈ ದಿನವನ್ನು ಮಹಾಪರಿನಿರ್ವಾಣ ದಿನ’ವನ್ನಾಗಿ ಆಚರಿಸಲಾಗುತ್ತದೆ.

ಮಹಾಪರಿನಿರ್ವಾಣ ದಿನದ ಆಚರಣೆಯ ಹಿನ್ನಲೆಯೇನು?

ಡಾ. ಬಿ ಆರ್ ಅಂಬೇಡ್ಕರ್ ಅವರು ಸರಿಸುಮಾರು ಒಂದು ವರ್ಷಗಳ ಕಾಲ ಬೌದ್ಧ ಧರ್ಮವನ್ನು ಅಧ್ಯಯನ ಮಾಡಿದ ನಂತರದಲ್ಲಿ 1956ರ ಅಕ್ಟೋಬರ್‌ 14ರಂದು 5,00,000 ಬೆಂಬಲಿಗರೊಂದಿಗೆ ಅಂಬೇಡ್ಕರ್‌ ಬೌದ್ಧಧರ್ಮಕ್ಕೆ ಮತಾಂತರಗೊಂಡರು. ಡಾ. ಬಿ ಆರ್ ಅಂಬೇಡ್ಕರ್‌ ಅವರು ತಮ್ಮ ́ಬುದ್ಧ ಮತ್ತು ಅವರ ಧಮ್ಮ’ ಗ್ರಂಥವನ್ನು ಪೂರ್ಣಗೊಳಿಸಿದ ಕೆಲವೇ ಕೆಲವು ದಿನಗಳಲ್ಲಿ ದೆಹಲಿಯಲ್ಲಿ ತಮ್ಮ ನಿವಾಸದಲ್ಲಿ ಡಿಸೆಂಬರ್‌ 6, 1956 ರಲ್ಲಿ ಮರಣ ಹೊಂದಿದರು. ಆದರೆ, ಅಂಬೇಡ್ಕರ್‌ ಅವರ ಪಾರ್ಥೀವ ಶರೀರವನ್ನು ಮುಂಬೈನ ದಾದರ್‌ ಚೌಪಾಟಿಯಲ್ಲಿ ಬೌದ್ಧ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.

ಆದರೆ ಅನುಯಾಯಿಗಳು, ಅಂಬೇಡ್ಕರ್ ಅವರನ್ನು ಭಗವಾನ್ ಬುದ್ಧನಂತೆಯೇ ಪ್ರಭಾವಶಾಲಿಯಾದ ವ್ಯಕ್ತಿ. ಶುದ್ಧ ಮನಸ್ಸಿನ ಹಾಗೂ ದೇವರಿಂದ ಆಶೀರ್ವಾದ ಹೊಂದಿದವರು. ಸಮಾಜದಲ್ಲಿನ ಅವರ ಮಹಾನ್ ಕಾರ್ಯಗಳಿಂದಾಗಿ ಅವರಿಗೆ ಯಾವುದೇ ಕರ್ಮದ ಋಣ ಉಳಿದಿಲ್ಲ ಎಂದು ನಂಬಿದ್ದ ಕಾರಣ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನ ಅಥವಾ ದಿವಸ್ ಎಂದು ಕರೆದರು. ಅಂದಿನಿಂದ ಡಾ. ಬಿ ಆರ್ ಅಂಬೇಡ್ಕರ್ ಅವರ ಪುಣ್ಯ ತಿಥಿಯನ್ನು ಮಹಾಪರಿನಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದಂದು ದೇಶದಾದಂತ್ಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಾರತೀಯ ಸಂವಿಧಾನ ಪಿತಾಮಹ ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ: ಈ ವ್ಯಕ್ತಿಗಳ ಬಳಿ ವೈಯುಕ್ತಿಕ ಜೀವನದ ರಹಸ್ಯಗಳನ್ನು ಹೇಳ್ಬೇಡಿ

ಡಾ.ಬಿ ಆರ್ ಅಂಬೇಡ್ಕರ್ ಅವರ ಸ್ಫೂರ್ತಿದಾಯಕ ನುಡಿಮುತ್ತುಗಳು

* ಮನಸ್ಸಿನ ಸಂಸ್ಕಾರವು ಮಾನವ ಅಸ್ತಿತ್ವದ ಅಂತಿಮ ಗುರಿಯಾಗಬೇಕು.

* ಸಂವಿಧಾನವು ಕೇವಲ ವಕೀಲರ ದಾಖಲೆಯಲ್ಲ. ಅದು ಜೀವನ ರಥ, ಅದರ ಆತ್ಮವು ಯಾವತ್ತಿಗೂ ಯುಗದ ಆತ್ಮವೇ ಆಗಿದೆ.

* ಚೆನ್ನಾಗಿ ಕಾಣಬೇಕು ಎಂದು ಬದುಕುವ ಬದಲು ಒಳ್ಳೆಯವರಾಗಿ ಬದುಕಲು ಪ್ರಯತ್ನಿಸಬೇಕು.

* ನಾನು ಒಂದು ಸಮುದಾಯದ ಬೆಳವಣಿಗೆಯನ್ನು ಅಳೆಯುವುದು ಅಲ್ಲಿರುವ ಮಹಿಳೆಯರು ಎಷ್ಟು ಪ್ರಮಾಣದ ಪ್ರಗತಿ ಸಾಧಿಸಿದ್ದಾರೆ ಎಂಬುದರ ಮೇಲೆ.

* ಮನುಷ್ಯರು ಸಾವಿಗೆ ಈಡಾಗುವವರು. ಚಿಂತನೆಗಳೂ ಹಾಗೆಯೇ. ಸಸಿಗಳಿಗೆ ನೀರು ಎರೆಯುವಂತೆ ಚಿಂತನೆಗಳಿಗೂ ಬೆಳೆಯಲು ಪೋಷಣೆ ಬೇಕು.

* ಇತಿಹಾಸವನ್ನು ಮರೆಯುವವರು ಇತಿಹಾಸವನ್ನು ಸೃಷ್ಟಿಸಲಾರರು.

* ವ್ಯಕ್ತಿಯ ಜೀವನ ಸುದೀರ್ಘವಾಗಿರಬೇಕಿಲ್ಲ. ಆದರೆ ಅತ್ಯುತ್ತಮವಾಗಿರಬೇಕು.

* ಅಸ್ಪೃಶ್ಯತೆಯು ಮನುಷ್ಯರನ್ನು ಬಾಧಿಸಬಹುದಾದ ಅತೀ ಕೆಟ್ಟ ಕಾಯಿಲೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?