AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಒತ್ತಡರಹಿತ ಜೀವನಕ್ಕಾಗಿ ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ

ಒತ್ತಡಮುಕ್ತ ಮತ್ತು ಸಂತೋಷದಾಯಕ ಜೀವನವನ್ನು ನಡೆಸಬೇಕು ಎಂದು ಪ್ರತಿಯೊಬ್ಬರೂ ಹಾತೊರೆಯುತ್ತಿದ್ದಾರೆ. ಆದರೆ ಅನೇಕರಿಗೆ ಸಂತೋಷವಾಗಿರುವುದು ಹೇಗೆ, ಒತ್ತಡಮುಕ್ತ ಜೀವನ ನಡೆಸಲು ಏನು ಮಾಡಬೇಕು ಎಂಬುದೇ ಗೊತ್ತಿಲ್ಲ. ನೀವು ಕೂಡ ಸಂತೋಷದಾಯಕ ಜೀವನಕ್ಕಾಗಿ ಹಾತೊರೆಯುತ್ತಿದ್ದೀರಾ? ಹಾಗಿದ್ರೆ ಆಚಾರ್ಯ ಚಾಣಕ್ಯರು ಹೇಳಿಕೊಟ್ಟಿರುವ ಈ ಮಾತುಗಳನ್ನು ಚಾಚು ತಪ್ಪದೇ ಪಾಲಿಸಿ, ಇದರಿಂದ ಖಂಡಿತವಾಗಿಯೂ ನಿಮ್ಮ ಜೀವನದಲ್ಲೂ ಸಂತೋಷ ನೆಲೆಸುತ್ತದೆ.

Chanakya Niti: ಒತ್ತಡರಹಿತ ಜೀವನಕ್ಕಾಗಿ ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 12, 2026 | 9:45 PM

Share

ಇಂದಿನ ಈ ವೇಗದ ಜಗತ್ತಿನಲ್ಲಿ ಎಲ್ಲರೂ ಬಯಸೋದು ಒತ್ತಡ ಮುಕ್ತ ಮತ್ತು ಶಾಂತಿ, ಸಂತೋಷದಾಯಕ ಜೀವನ (happy life). ಆದರೆ ಕೆಲಸದ ಒತ್ತಡ, ಒಂದಷ್ಟು ಜವಾಬ್ದಾರಿ ಇವೆಲ್ಲದರ ಕಾರಣದಿಂದ ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ಈ ಒತ್ತಡದಿಂದಾಗಿ ಅನೇಕರ ಜೀವನದಲ್ಲಿ ಸಂತೋಷವೇ ಇಲ್ಲದಾಗಿದೆ. ಹೀಗಾಗಿ ಜನ ಒತ್ತಡಮುಕ್ತ ಮತ್ತು ಸಂತೋಷದಾಯಕ ಜೀವನ ನಡೆಸಲು ಹಾತೊರೆಯುತ್ತಿದ್ದಾರೆ. ಹೀಗೆ ನಿಮಗೂ ಕೂಡ ಜೀವನದಲ್ಲಿ ಸಂತೋಷ ಬೇಕೆ? ಹಾಗಾದ್ದರೆ ಮಹಾನ್‌ ವಿದ್ವಾಂಸರಾದ ಆಚಾರ್ಯ ಚಾಣಕ್ಯರ ಒತ್ತಡಮುಕ್ತ ಜೀವನಕ್ಕೆ ಸಂಬಂಧಿಸಿದ ಈ ಒಂದಷ್ಟು ಸಲಹೆಗಳನ್ನು ಪಾಲಿಸಿ. ಇದರಿಂದ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ.

ಒತ್ತಡ ರಹಿತ ಜೀವನಕ್ಕಾಗಿ ಏನು ಮಾಡಬೇಕು?

ಆಗಿಹೋದ ಸಂಗತಿಗಳಿಗೆ ವಿಷಾದಿಸಬೇಡಿ: ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಗಾದೆಯಂತೆ, ಆಗಿ ಹೋದ ವಿಷಯಗಳಿಗೆ ವಿಷಾದಿಸುವುದು ಕೂಡ ವ್ಯರ್ಥ. ಈ ರೀತಿ ಭೂತಕಾಲದ ವಿಷಯಗಳ ಬಗ್ಗೆ ಯೋಚಿಸುತ್ತಾ ಕುಳಿತರೆ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ವರ್ತಮಾನದಲ್ಲಿ ಜೀವಿಸುವುದನ್ನು ಅಭ್ಯಾಸ ಮಾಡಿ. ಇದರಿಂದ ಒತ್ತಡವೂ ಇರಲ್ಲ, ಸಂತೋಷವೂ ನೆಲೆಸುತ್ತದೆ.

ದುರಾಸೆಯಿಂದ ದೂರವಿರಿ: ಆಸೆಯೇ ದುಃಖಕ್ಕೆ ಮೂಲ ಎನ್ನುವಂತೆ ದುರಾಸೆಯಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಎಲ್ಲವೂ ನನಗೆ ಬೇಕು, ಎಲ್ಲವೂ ನನ್ನದಾಗಬೇಕೆಂಬ ದುರಾಸೆ, ಇರುವುದರಲ್ಲಿ ತೃಪ್ತಿಯನ್ನು ಪಡದೆ ಯಾವಾಗಲೂ ಅತೃಪ್ತಿಯಿಂದ ಇರುವ ಜನರು ಸಂತೋಷವಾಗಿರಲು ಸಾಧ್ಯವಿಲ್ಲ. ಹಾಗಾಗಿ ದುರಾಸೆಯನ್ನು ಬಿಟ್ಟು ಇರುವುದರಲ್ಲಿ ತೃಪ್ತಿಯನ್ನು ಕಾಣಿ, ಇದರಿಂದ ನಿಮ್ಮ ಜೀವನದಲ್ಲಿ ಸಂತೋಷ ನೆಲೆಸುವುದು ಖಂಡಿತ.

ಇದನ್ನೂ ಓದಿ: ಶ್ರೀಮಂತಿಕೆ ಗಳಿಸಲು ಚಾಣಕ್ಯರು ಹೇಳಿಕೊಟ್ಟಿರುವ ಸಲಹೆಗಳಿವು

ಸಾಲದಿಂದ ದೂರವಿರಿ: ಸಾಲ ತೆಗೆದುಕೊಳ್ಳುವ ಅಭ್ಯಾಸದಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಸಾಲ ತೆಗೆದುಕೊಳ್ಳುವುದು ಮತ್ತು ಆ ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿಸದಿರುವುದು ಇಂತಹ ಸಾಲದ ಹೊರೆ ಒತ್ತಡವನ್ನು ಹೆಚ್ಚಿಸುತ್ತದೆ. ಅಲ್ಲದೆ ಸಾಲದಿಂದ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಹ ಸಾಧ್ಯವಿಲ್ಲ. ಆದ್ದರಿಂದ ಒತ್ತಡಮುಕ್ತ ಜೀವನ ನಿಮ್ಮದಾಗಲು ಸಾಲದಿಂದ ದೂರವಿರಿ.

ಕೆಟ್ಟವರ ಸಹವಾಸದಿಂದ ದೂರವಿರಿ: ನಮ್ಮ ಸುತ್ತಮುತ್ತಲಿರುವ ಜನರು ಸಹ ನಮ್ಮ ವ್ಯಕ್ತಿತ್ವ ಮತ್ತು ಮಾನಸಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತಾರೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಕೆಟ್ಟ ಮನಸ್ಥಿತಿಯ ಜನರಿಂದ ದೂರವಿದ್ದು, ಸಕಾರಾತ್ಮಕ ಮನಸ್ಥಿತಿಯ ಜನರೊಂದಿಗಿರಿ. ಇವರ ಸಹವಾಸವು ಜೀವನದಲ್ಲಿ ಸಂತೋಷ ನೆಲೆಸುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ