AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ನಿಯಮವನ್ನು ಪಾಲಿಸಿದರೆ ಜೀವನದಲ್ಲಿ ಸಂತೋಷ, ಶಾಂತಿ ಸದಾ ಕಾಲ ಇರುತ್ತದೆ

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸುಖ-ಶಾಂತಿ ಹಾಗೂ ನೆಮ್ಮದಿ ಬೇಕೆಂದು ಬಯಸುತ್ತಾರೆ. ಆದರೆ ಅನೇಕರಿಗೆ ಶಾಂತಿ, ಸಂತೋಷ ನೆಲೆಸಲು ಏನು ಮಾಡಬೇಕು ಎಂಬುದೇ ಗೊತ್ತಿಲ್ಲ. ಹೀಗಿರುವಾಗ ಚಾಣಕ್ಯರ ಕೆಲವೊಂದು ನಿಯಮಗಳನ್ನು ಪಾಲಿಸಬಹುದು. ಆಚಾರ್ಯ ಚಾಣಕ್ಯರು ಸಂಘರ್ಷ, ಅನಗತ್ಯ ಮನಸ್ತಾಪಗಳನ್ನು ನಿವಾರಿಸಲು ಮತ್ತು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಸದಾ ಕಾಲ ಇರುವಂತೆ ಮಾಡಲು ಕೆಲವು ಪರಿಹಾರಗಳನ್ನು ನೀಡಿದ್ದಾರೆ. ಇದನ್ನು ಪಾಲಿಸುವ ಮೂಲಕ ನೀವು ನೆಮ್ಮದಿಯ ಜೀವನ ನಡೆಸಬಹುದು.

Chanakya Niti: ಈ ನಿಯಮವನ್ನು ಪಾಲಿಸಿದರೆ ಜೀವನದಲ್ಲಿ ಸಂತೋಷ, ಶಾಂತಿ ಸದಾ ಕಾಲ ಇರುತ್ತದೆ
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: May 14, 2026 | 9:04 PM

Share

ಶಾಂತಿ, ಸಂತೋಷ (Happiness), ನೆಮ್ಮದಿ ಎನ್ನುವಂತಹದ್ದು ಹೊರಗಿನಿಂದ ಬರುವಂತಹದ್ದಲ್ಲ, ಅದನ್ನು ನಮ್ಮೊಳಗೆ ನಾವು ಕಂಡುಕೊಳ್ಳಬೇಕು. ಶಾಂತಿ ಮತ್ತು ನೆಮ್ಮದಿಯನ್ನು ದುಡ್ಡಿನಿಂದಲೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಇದಲ್ಲದೆ ಜೀವನದಲ್ಲಿ ಮಾನಸಿಕ ನೆಮ್ಮದಿ, ಶಾಂತಿ ಇಲ್ಲ ಎಂದಾದರೆ ಬಾಳು ಕೂಡ ವ್ಯರ್ಥ. ಹೀಗಿರುವಾಗ ಸಂಘರ್ಷ, ಅನಗತ್ಯ ಮನಸ್ತಾಪಗಳನ್ನು ನಿವಾರಿಸಲು ಮತ್ತು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಸದಾ ಕಾಲ ಇರುವಂತೆ ಮಾಡಲು ಸಲಹೆಗಳನ್ನು ನೀಡಿದ್ದಾರೆ. ನಿಮ್ಮ ಜೀವನವೂ ಸಂತೋಷದಿಂದ ಕೂಡಿರಲು  ಚಾಣಕ್ಯರ ಈ ಸಲಹೆಗಳನ್ನು ತಪ್ಪದೇ ಪಾಲಿಸಿ.

ಜೀವನದಲ್ಲಿ ಶಾಂತಿ, ನೆಮ್ಮದಿ ಕಂಡುಕೊಳ್ಳಲು ಏನು ಮಾಡಬೇಕು?

ಸಿಹಿ ಮಾತುಗಳನ್ನಾಡಿ: ಆಚಾರ್ಯ ಚಾಣಕ್ಯ ಹೇಳುವಂತೆ ವ್ಯಕ್ತಿಯ ಭಾಷೆ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ತಮ್ಮ ಪ್ರೀತಿಪಾತ್ರರೊಂದಿಗೆ ಪ್ರೀತಿಯಿಂದ ಮತ್ತು ಗೌರವದಿಂದ ಮಾತನಾಡುವ ವ್ಯಕ್ತಿಗೆ ಎಂದಿಗೂ  ಯಾರೊಂದಿಗೂ ಮನಸ್ತಾಪಗಳಿರುವುದಿಲ್ಲ. ಅದೇ ವ್ಯಕ್ತಿಯ ಕಠಿಣ ಮಾತುಗಳು ಶಾಂತಿ, ನೆಮ್ಮದಿಯನ್ನು ಹಾಳು ಮಾಡಬಹುದು, ಸಂಬಂಧಗಳಲ್ಲಿಯೂ ಬಿರುಕುಗಳನ್ನು ಉಂಟುಮಾಡಬಹುದು. ಆದ್ದರಿಂದ, ಯಾವಗಲೂ ಒಳ್ಳೆಯ ಮಾತುಗಳನ್ನಾಡಿ.

ಹಿರಿಯರಿಗೆ ಗೌರವ ಕೊಡಿ: ಚಾಣಕ್ಯ ನೀತಿಯ ಪ್ರಕಾರ, ಹಿರಿಯರನ್ನು ಗೌರವಿಸುವ ಮತ್ತು ಅವರ ಸಲಹೆಯನ್ನು ಪಾಲಿಸುವ ಮನೆಗಳಲ್ಲಿ ಸಂತೋಷವು ಸದಾ ಕಾಲ ನೆಲೆಸುತ್ತದೆ. ಹಿರಿಯರ ಅನುಭವವು ಕುಟುಂಬಕ್ಕೆ ರಕ್ಷಣಾತ್ಮಕ ಕವಚವಾಗಿ ಕಾರ್ಯನಿರ್ವಹಿಸುತ್ತದೆ, ಹೀಗಿರುವಾಗ ಅವರ ಮಾತುಗಳನ್ನು ಪಾಲಿಸುವ ಮೂಲಕ ನೀವು ನೆಮ್ಮದಿಯ ಜೀವನವನ್ನು ನಡೆಸಬಹುದು.

ಸ್ವಚ್ಛತೆಯು ಬಗ್ಗೆ ಗಮನ ಇರಲಿ: ಆಚಾರ್ಯ ಚಾಣಕ್ಯರ ಪ್ರಕಾರ, ಸ್ವಚ್ಛತೆಯು ಮನಸ್ಸಿನ ಶಾಂತಿ ಮತ್ತು ಸಂಪತ್ತಿನ ದೇವತೆ ಲಕ್ಷ್ಮಿಗೆ ನೇರವಾಗಿ ಸಂಬಂಧಿಸಿದೆ. ಚಾಣಕ್ಯನ ಪ್ರಕಾರ, ಕೊಳಕು ರೋಗವನ್ನು ಆಹ್ವಾನಿಸುವುದಲ್ಲದೆ, ಮನೆಗೆ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಹಾಗಾಗಿ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಿ. ಮನೆ ಕ್ಲೀನ್‌ ಆಗಿದ್ದರೆ ಮನಸ್ಸು ಕೂಡ ಶಾಂತಯುತವಾಗಿರುತ್ತದೆ.

ಇದನ್ನೂ ಓದಿ: ನಿಮ್ಮ ವೈಯಕ್ತಿಕ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ

ನಿಮ್ಮ ಕೋಪವನ್ನು ಯಾವಾಗಲೂ ನಿಯಂತ್ರಿಸಿ: ಶಾಸ್ತ್ರಗಳ ಪ್ರಕಾರ, ಕೋಪವು ವ್ಯಕ್ತಿಯ ದೊಡ್ಡ ಶತ್ರುವಾಗಿದ್ದು, ಅದು ಆತನ ಬುದ್ಧಿವಂತಿಕೆಯನ್ನು ನಾಶಪಡಿಸುತ್ತದೆ. ಆದ್ದರಿಂದ ಎಂತಹದ್ದೇ ಕಠಿಣ ಸಂದರ್ಭ ಎದುರಾದರೂ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಸಮತೋಲಿತ ಭಾವನೆಗಳು ಸಂತೋಷದ ಮನೆಯ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಯಾವುದರಲ್ಲೂ ಅತಿಯಾಸೆ ಬೇಡ:  ಸಂತೃಪ್ತಿಯೇ ಅತಿ ದೊಡ್ಡ ಸಂಪತ್ತು, ಯಾವುದರಲ್ಲೂ ಅತಿಯಾಸೆ ಇರಬಾರದು. ಚಾಣಕ್ಯರು ಹೇಳುವಂತೆ ಅತಿಯಾದ ದುರಾಸೆ ಮತ್ತು ಇತರರೊಂದಿಗೆ ನಮ್ಮನ್ನು ನಾವು  ಹೋಲಿಕೆ ಮಾಡಿಕೊಳ್ಳುವುದು ಅಶಾಂತಿ, ಅತೃಪ್ತಿ, ನೆಮ್ಮದಿ ಕೆಡಲು ಮೂಲ ಕಾರಣ. ಹಾಗಾಗಿ ಯಾವುದರ ಬಗ್ಗೆಯೂ ಅತಿಯಾಸೆ ಪಡದೆ ಇರುವುದರಲ್ಲಿ ತೃಪ್ತಿ ಪಡಿ, ಇದು ಖಂಡಿತವಾಗಿಯೂ ಖುಷಿಯನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ
ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ
ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ
ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ
ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!
ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!