
ವಿವಾಹೇತರ ಸಂಬಂಧ ( affair) ತಪ್ಪು ಎಂದು ಗೊತ್ತಿದ್ದರೂ ಸಹ ಇಂದಿಗೂ ಅದೆಷ್ಟೋ ವಿವಾಹಿತ ಮಹಿಳೆಯರು, ವಿವಾಹಿತ ಪುರುಷರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆ. ಹೌದು ಮದುವೆಯಾಗಿ ಚಂದದ ಹೆಂಡತಿ ಇದ್ದರೂ ಸಹ ಕೆಲವು ಪುರುಷರು ಪರ ಸ್ತ್ರೀಯರತ್ತ ಆಕರ್ಷಿತರಾಗುತ್ತಾರೆ. ಈ ರೀತಿ ವಿವಾಹಿತ ಪುರುಷರು ಇತರ ಮಹಿಳೆಯರನ್ನು ಇಷ್ಟಪಡುವುದರ ಹಿಂದೆ ನಿರ್ದಿಷ್ಟ ಕಾರಣಗಳಿವೆ ಎಂದಿದ್ದಾರೆ ಆಚಾರ್ಯ ಚಾಣಕ್ಯರು. ಹಾಗಿದ್ರೆ ಚಾಣಕ್ಯರ ಪ್ರಕಾರ ಪುರುಷರು ವಿವಾಹೇತರ ಸಂಬಂಧವನ್ನು ಹೊಂದುವುದೇಕೆ, ಇತರ ಮಹಿಳೆಯರತ್ತ ಆಕರ್ಷಿತರಾವುಗುದೇಕೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಹೊಸತನದ ಗೀಳು: ಪುರುಷರ ಮನಸ್ಸು ಯಾವಾಗಲೂ ತನ್ನಲ್ಲಿಲ್ಲದದ್ದಕ್ಕಾಗಿ ಹಾತೊರೆಯುತ್ತಿರುತ್ತದೆ. ಹೊಸ ಪರಿಚಯ ಮತ್ತು ಹೊಸ ಮಾತುಗಳು ಆಸಕ್ತಿದಾಯಕವಾಗಿ ಕಾಣುತ್ತವೆ. ಅವರು ಹೆಂಡ್ತಿಯನ್ನು ಪ್ರತಿದಿನ ನೋಡುವ ಕಾರಣ ಹೆಂಡತಿಯ ವಿಶೇಷ ಲಕ್ಷಣಗಳು ಸಹ ಅವರಿಗೆ ತುಂಬಾ ಸಾಮಾನ್ಯವೆಂದು ತೋರುತ್ತದೆ. ಅದೇ ಅವರಿಗೆ ಪರಿಚಯವಿಲ್ಲದ ಹೊಸ ಮಹಿಳೆಯಾಗಿದ್ದರೆ, ಅದು ಅವರಿಗೆ ತುಂಬಾ ರೋಮಾಂಚನಕಾರಿಯಾಗಿ ತೋರುತ್ತದೆ. ಈ ಕಾರಣದಿಂದಲೇ ವಿವಾಹಿತ ಪುರುಷರು ಮಹಿಳೆಯರತ್ತ ಆಕರ್ಷಿತರಾಗುವುದು.
ಚಿಕ್ಕ ವಯಸ್ಸಿನಲ್ಲಿಯೇ ಮದುವೆ: ಅನೇಕ ಹುಡುಗರು ಕುಟುಂಬದ ಒತ್ತಡದಿಂದಾಗಿ ಸರಿಯಾದ ಪ್ರಬುದ್ಧತೆಯನ್ನು ತಲುಪುವ ಮೊದಲೇ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುತ್ತಾರೆ. ಆ ಸಮಯದಲ್ಲಿ, ಅವರಿಗೆ ತಮ್ಮ ವೃತ್ತಿ ಮತ್ತು ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ ಇರುವುದಿಲ್ಲ. ಅವರು ಬೆಳೆದಂತೆ, ಅವರ ಆಲೋಚನೆಗಳು ಮತ್ತು ಆಸೆಗಳು ಸಂಪೂರ್ಣವಾಗಿ ಬದಲಾಗುತ್ತಾ ಹೋಗುತ್ತವೆ. ಹೆಂಡತಿಯ ಮೇಲಿನ ಪ್ರೀತಿಯೂ ಕಡಿಮೆಯಾಗುತ್ತದೆ. ತಮ್ಮ ಮನಸ್ಥಿತಿಗೆ ಹೊಂದಾಣಿಕೆಯಾಗುವ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
ಮಗುವಾದ ಬಳಿಕ ಆಗುವ ಬದಲಾವಣೆ: ಮಕ್ಕಳಾದ ಬಳಿಕ ಸ್ವಾಭಾವಿಕವಾಗಿ, ತಾಯಿ ತನ್ನ ಎಲ್ಲಾ ಸಮಯ ಮತ್ತು ಪ್ರೀತಿಯನ್ನು ತನ್ನ ಮಗುವಿಗೆ ನೀಡುತ್ತಾಳೆ. ಇದರಿಂದ ಗಂಡನಾದವನಿಗೆ ತನ್ನ ಹೆಂಡತಿ ನಿಜವಾಗಿಯೂ ತನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಅನಿಸಲು ಪ್ರಾರಂಭಿಸುತ್ತದೆ. ಈ ಒಂಟಿತನವು ಅವನನ್ನು ಬಾಹ್ಯ ಆಕರ್ಷಣೆಗಳ ಕಡೆಗೆ ಎಳೆಯುತ್ತದೆ. ಆ ಸಮಯದಲ್ಲಿ, ಪರ ಸ್ತ್ರೀ ತನ್ನೊಂದಿಗೆ ಸ್ವಲ್ಪ ಪ್ರೀತಿ ಮತ್ತು ಕಾಳಜಿಯಿಂದ ಮಾತನಾಡಿದರೆ, ಅವನು ಸುಲಭವಾಗಿ ಆಕೆಯ ಕಡೆಗೆ ಆಕರ್ಷಿತನಾಗುತ್ತಾನೆ ಎಂದು ಚಾಣಕ್ಯ ಹೇಳಿದ್ದಾರೆ.
ದೈಹಿಕ ಅಂತರ: ಪತಿ-ಪತ್ನಿಯ ಸಂಬಂಧಕ್ಕೆ ದೈಹಿಕ ಅನ್ಯೋನ್ಯತೆಯು ಬಹಳ ಮುಖ್ಯ ಎನ್ನುತ್ತಾರೆ ಚಾಣಕ್ಯ. ಈ ಅಡಿಪಾಯ ದುರ್ಬಲಗೊಂಡರೆ, ಸಂಬಂಧವು ಕ್ರಮೇಣ ಹದಗೆಡುತ್ತದೆ. ಅನೇಕ ದಂಪತಿಗಳು ತಮ್ಮ ಸಂಗಾತಿಯೊಂದಿಗೆ ತಮ್ಮ ಆಸೆಗಳನ್ನು ಬಹಿರಂಗವಾಗಿ ಚರ್ಚಿಸಲು ನಾಚಿಕೆಪಡುತ್ತಾರೆ. ಇದು ಇಬ್ಬರ ನಡುವಿನ ಅಂತರವನ್ನು ಹೆಚ್ಚಿಸುತ್ತದೆ. ಆ ಅಂತರದಿಂದಾಗಿ, ಗಂಡಂದಿರು ಅತೃಪ್ತರಾಗುತ್ತಾರೆ ಮತ್ತು ಆ ದೈಹಿಕ ಆನಂದವನ್ನು ಹೊರಗೆ ಹುಡುಕಲು ಪ್ರಯತ್ನಿಸುತ್ತಾರೆ.
ಇದನ್ನೂ ಓದಿ: ಜೀವನದಲ್ಲಿ ಹಣದ ಕೊರತೆ ಎದುರಾಗಬಾರದೆಂದರೆ ಚಾಣಕ್ಯರು ಹೇಳಿರುವ ಈ ಮಾತುಗಳನ್ನು ಪಾಲಿಸಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ