AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಈ ವಿಷಯಗಳನ್ನು ನಿಯಂತ್ರಿಸಲು ಕಲಿಯಿರಿ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಹತ್ತು ಹಲವು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಜೀವನದಲ್ಲಿ ಮುಂದುವರೆಯಲು ಬಯಸುವವರು ಒಂದಷ್ಟು ವಿಷಯಗಳನ್ನು ನಿಯಂತ್ರಿಸಲು ಕಲಿಯಲೇಬೇಕು, ಇಲ್ಲದಿದ್ದರೆ ಪ್ರಗತಿಯ ಹಾದಿ ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗಿದ್ರೆ ಜೀವನದಲ್ಲಿ ಮುಂದುವರೆಯಲು ಯಾವೆಲ್ಲಾ ವಿಷಯಗಳನ್ನು ನಿಯಂತ್ರಿಸಬೇಕು ಎಂಬುದನ್ನು ನೋಡೋಣ ಬನ್ನಿ.

Chanakya Niti: ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಈ ವಿಷಯಗಳನ್ನು ನಿಯಂತ್ರಿಸಲು ಕಲಿಯಿರಿ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Jul 13, 2026 | 9:41 PM

Share

ನಮ್ಮಲ್ಲಿರುವ ಕೆಟ್ಟ ಅಭ್ಯಾಸಗಳು (bad habits) ನಮ್ಮನ್ನು ಮುಂದುವರೆಯಲು ಬಿಡುವುದಿಲ್ಲ, ಪ್ರಗತಿಗೆ ಅಡ್ಡಿಯನ್ನು ಉಂಟು ಮಾಡುತ್ತವೆ. ಆ ಅಭ್ಯಾಸವನ್ನು ನಿಯಂತ್ರಿಸಲು ಕಲಿತವರು ಮಾತ್ರ ಜೀವನದಲ್ಲಿ ಮುಂದುವರೆಯಲು ಸಾಧ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅವರ ಪ್ರಕಾರ ಪ್ರತಿಯೊಬ್ಬರೂ ಸಹ ಈ ಕೆಲವೊಂದು ಅಭ್ಯಾಸಗಳನ್ನು ನಿಯಂತ್ರಿಸಲೇಬೇಕು, ಇದು ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಾಕಷ್ಟು ಸಹಾಯವನ್ನು ಮಾಡುತ್ತದೆ. ಹಾಗಿದ್ರೆ ಜೀವನವನ್ನು ಸುಧಾರಿಸಲು, ಜೀವನದಲ್ಲಿ ಸಕಾರಾತ್ಮಕವಾಗಿ ಮುಂದುವರೆಯಲು ಯಾವೆಲ್ಲಾ ವಿಷಯಗಳನ್ನು ನಿಯಂತ್ರಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಜೀವನದಲ್ಲಿ ಮುಂದುವರೆಯಲು ನಿಯಂತ್ರಿಸಬೇಕಾದ ಅಭ್ಯಾಸಗಳು:

ಕೋಪವನ್ನು ನಿಯಂತ್ರಣದಲ್ಲಿಡಿ: ಆಚಾರ್ಯ ಚಾಣಕ್ಯರ ಪ್ರಕಾರ, ವ್ಯಕ್ತಿಯ ದೊಡ್ಡ ಶತ್ರು ಆತನ ಕೋಪ. ನಾವು ಕೋಪಗೊಂಡಾಗ, ನಮ್ಮ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಕೋಪದ ಮನಸ್ಥಿತಿಯಲ್ಲಿಯೇ ಹೆಚ್ಚಾಗಿ ನಾವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಇದು ಸಂಬಂಧವನ್ನು ಹಾಳು ಮಾಡುವುದಲ್ಲದೆ ಕೆಲಸದ ವಿಷಯದಲ್ಲೂ ಸಾಕಷ್ಟು ಅಡ್ಡಿಯನ್ನು ಉಂಟುಮಾಡುತ್ತವೆ. ಹಾಗಾಗಿ ಕೋಪಗೊಂಡಾಗ ತಕ್ಷಣ ಪ್ರತಿಕ್ರಿಯಿಸುವ ಬದಲು ಶಾಂತವಾಗಿರಿ, ಇದು ಮುಂದಾಗುವ ಅನೇಕ ಅನಾಹುತಗಳನ್ನು ತಪ್ಪಿಸುವುದು ಮಅತ್ರವಲ್ಲದೆ, ನಿಮಗೆ ಜೀವನದಲ್ಲಿ ಮುಂದುವರೆಯಲೂ ಸಹ ಸಹಾಯ ಮಾಡುತ್ತದೆ.

ಮಾತನ್ನು ನಿಯಂತ್ರಿಸಿ: ಮಾತನಾಡುವ ಮೊದಲು ನಾವು ಯಾವಾಗಲೂ ಎಚ್ಚರಿಕೆಯಿಂದ ಯೋಚಿಸಬೇಕು ಮತ್ತು ಯಾವಾಗಲೂ ಸಿಹಿ ಪದಗಳನ್ನು ಬಳಸಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಯೋಚಿಸದೆ ಏನೇನೋ ಮಾತನಾಡುವ ಅಭ್ಯಾಸ  ಒಳ್ಳೆಯ ಸಂಬಂಧಗಳನ್ನು ಹಾಳು ಮಾಡುವುದಲ್ಲದೆ, ನಿಮ್ಮ ಎಲ್ಲಾ ಯೋಜನೆಗಳನ್ನು ಇತರರ ಬಳಿ ಹಂಚಿಕೊಳ್ಳುವುದರಿಂದ ನಿಮ್ಮ ಪ್ರಗತಿಗೂ ಅಡ್ಡಿಯನ್ನು ಉಂಟು ಮಾಡುತ್ತದೆ. ಆದ್ದರಿಂದ ಮಾತಿನ ಮೇಲೆ ನಿಯಂತ್ರಣವಿರಲಿ, ಯಾವಾಗಲೂ ಹಿತಮಿತವಾಗಿ ಮಾತನಾಡಿ.

ಇದನ್ನೂ ಓದಿ: ಶ್ರೀಮಂತಿಕೆ ಗಳಿಸಲು ಚಾಣಕ್ಯರು ಹೇಳಿಕೊಟ್ಟಿರುವ ಸಲಹೆಗಳಿವು

ಆಸೆಗಳನ್ನು ನಿಯಂತ್ರಿಸಿ:  ಆಚಾರ್ಯ ಚಾಣಕ್ಯರ ಪ್ರಕಾರ, ನಾವು ನಮ್ಮ ಮನಸ್ಸನ್ನು ನಿಯಂತ್ರಿಸದಿದ್ದರೆ ಮತ್ತು ದುರಾಸೆಯನ್ನು ನಿಯಂತ್ರಿಸದಿದ್ದರೆ, ಜೀವನದಲ್ಲಿ ಸಂತೋಷವಾಗಿರಲು ಎಂದಿಗೂ ಸಾಧ್ಯವಿಲ್ಲ ಹಾಗಾಗಿ ಇರುವುದರಲ್ಲಿಯೇ ತೃಪ್ತಿಯನ್ನು ಪಟ್ಟು ಗುರಿಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ. ಖಂಡಿತವಾಗಿಯೂ ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಉಂಟುಮಾಡುತ್ತವೆ.

ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ:  ಆಚಾರ್ಯ ಚಾಣಕ್ಯರ ಪ್ರಕಾರ ಹಣ ಸಂಪಾದಿಸುವುದು ಎಷ್ಟು ಮುಖ್ಯವೋ ಅದನ್ನು ಬುದ್ಧಿವಂತಿಕೆಯಿಂದ ಬಳಸುವುದು ಸಹ ಅಷ್ಟೇ ಮುಖ್ಯ. ಹಣವನ್ನು ವ್ಯರ್ಥ ಖರ್ಚು ಮಾಡಿದರೆ ಕೈಯಲ್ಲಿ ಹಣ ಉಳಿಯುವುದು ಕೂಡ ಇಲ್ಲ, ಇದು ಶ್ರೀಮಂತಿಕೆ ಗಳಿಸುವ ನಿಮ್ಮ ಕನಸಿಗೂ ಅಡ್ಡಿಯನ್ನು ಉಂಟು ಮಾಡುತ್ತದೆ. ಹಾಗಾಗಿ ಎಂದಿಗೂ ವ್ಯರ್ಥ ಖರ್ಚು ಮಾಡಬೇಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ