Chartered Accountants day 2024 : ಚಾರ್ಟರ್ಡ್‌ ಅಕೌಂಟಂಟ್‌ ಆಗುವುದು ನಿಮ್ಮ ಕನಸೇ? ತಯಾರಿ ಈ ರೀತಿಯಿದ್ದರೆ ಸಾಧ್ಯ

ಸಿಎ ಆಗಬೇಕೆನ್ನುವುದು ಬಹುತೇಕರ ಕನಸು. ಹಾಗಂತ ಎಲ್ಲರೂ ಲೆಕ್ಕ ಪರಿಶೋಧಕ ಹುದ್ದೆಯನ್ನು ಅಲಂಕರಿಸಿಕೊಳ್ಳಲು ಸಾಧ್ಯವಿಲ್ಲ. ಹೌದು, ಸಿಎ ಆಗಬೇಕೆಂದರೆ ಮೊದಲಿಗೆ ಸಿಎ ಪರೀಕ್ಷೆಯನ್ನು ಕ್ಲಿಯರ್ ಮಾಡಿರುವುದು ಕಡ್ಡಾಯ. ಹಾಗಾದ್ರೆ ಚಾರ್ಟರ್ಡ್‌ ಅಕೌಂಟಂಟ್‌ ಆಗುವುದು ಹೇಗೆ? ಸಿಎ ಪರೀಕ್ಷೆ ತೆಗೆದುಕೊಳ್ಳಲು ಇರಬೇಕಾದ ಶೈಕ್ಷಣಿಕ ಅರ್ಹತೆಗಳೇನು? ಯಾವೆಲ್ಲಾ ಪರೀಕ್ಷೆಗಳನ್ನು ಬರೆಯಬೇಕು? ಪರೀಕ್ಷಾ ತಯಾರಿ ಹೇಗಿರಬೇಕು? ಎನ್ನುವುದರ ಸಂಪೂರ್ಣ ಮಾಹಿತಿಯು ಇಲ್ಲಿದೆ.

Chartered Accountants day 2024 : ಚಾರ್ಟರ್ಡ್‌ ಅಕೌಂಟಂಟ್‌ ಆಗುವುದು ನಿಮ್ಮ ಕನಸೇ? ತಯಾರಿ ಈ ರೀತಿಯಿದ್ದರೆ ಸಾಧ್ಯ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 01, 2024 | 10:31 AM

ಭಾರತದಲ್ಲಿ ಬಹಳಷ್ಟು ಬೇಡಿಕೆಯಿರುವ ಕೋರ್ಸ್ ಗಳಲ್ಲಿ ಚಾರ್ಟರ್ಡ್‌ ಅಕೌಂಟೆಂಟ್ ಕೂಡ ಒಂದು. ಉತ್ತಮ ಸಂಬಳ ಸಿಗುವ ಹುದ್ದೆಗಳಲ್ಲಿ ಇದು ಒಂದಾಗಿದ್ದರೂ ಈ ಕೆಲಸವನ್ನು ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಸಿಎ ಪರೀಕ್ಷೆ ತೇರ್ಗಡೆಯಾಗಬೇಕಾದರೆ ರಾತ್ರಿ ಹಗಲೆನ್ನದೆ ತಯಾರಿ ನಡೆಸಲೇ ಬೇಕು. ಹೀಗಾಗಿ ಸಿಎ ಎಕ್ಸಾಮ್ ಕ್ಲಿಯರ್ ಮಾಡುವುದು ಅಷ್ಟು ಸುಲಭವಲ್ಲ. ಒಮ್ಮೆ ಪರೀಕ್ಷೆಯಲ್ಲಿ ಫೇಲ್ ಆದರೆ ಮತ್ತೆ ಮತ್ತೆ ಪರೀಕ್ಷೆ ಬರೆಯಬೇಕಾಗುತ್ತದೆ. ಇದಕ್ಕೆ ಅಷ್ಟೇ ತಯಾರಿಯ ಜೊತೆಗೆ ತಾಳ್ಮೆಯು ಅಗತ್ಯವಾಗಿ ಬೇಕಾಗುತ್ತದೆ.

*ಚಾರ್ಟರ್ಡ್‌ ಅಕೌಂಟಂಟ್‌ ಆಗಲು ಇರಬೇಕಾದ ಅರ್ಹತೆಗಳು

  1. ಸಿಎ ಮಾಡಲು ಪದವಿ ಪೂರ್ಣ ಗೊಳಿಸಿರಬೇಕೆಂದೇನಿಲ್ಲ. ಹತ್ತನೇ ತರಗತಿ ನಂತರವು ಚಾರ್ಟರ್ಡ್‌ ಅಕೌಂಟಂಟ್‌ ಕೋರ್ಸ್ಗೆ ಸೇರಿಕೊಳ್ಳಬಹುದು. ಆದರೆ ಕಾಮನ್ ಪ್ರೊಫಿಸಿಯನ್ಸೀ ಟೆಸ್ಟ್‌ ಬರೆದು ಉತ್ತೀರ್ಣರಾಗಿರಬೇಕು.
  2. ಪದವಿ ಮುಗಿಸಿದ ಬಳಿಕ ಸಿಎ ಓದಲು ಕಾಮರ್ಸ್ ಅಥವಾ ಇನ್ನಿತ್ತರ ಪದವಿ ವಿದ್ಯಾರ್ಥಿಗಳು ಶೇಕಡಾ 55ರಷ್ಟು ಅಂಕಗಳನ್ನು ಪಡೆದಿರಬೇಕು.
  3. ಪದವಿ ಬಳಿಕ ನಿಮ್ಮಲ್ಲಿ ಕನಿಷ್ಠ ಅಂಕವಿದ್ದರೆ ನೇರವಾಗಿ ಇಂಟಿಗ್ರೇಟೆಡ್ ಪ್ರೊಫೇಶನಲ್ ಕಾಂಪಿಟೆನ್ಸಿ ಕೋರ್ಸ್ ಪರೀಕ್ಷೆಯನ್ನು ಬರೆಯಬಹುದು.
  4. 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ನಂತರ ಸಿಎ ಮಾಡುತ್ತೀರಿಯಾದರೆ ಮೂರು ಹಂತದ ಪರೀಕ್ಷೆಗಳನ್ನು ಕಡ್ಡಾಯವಾಗಿ ಪಾಸ್ ಆಗಲೇಬೇಕು. ಆ ಬಳಿಕ ಸಿಪಿಟಿ ಪರೀಕ್ಷೆಯಲ್ಲಿಯಲ್ಲಿ ಉತ್ತೀರ್ಣರಾದರೆ ಮಾತ್ರ ಸಿಎ ಮಾಡುವ ಅವಕಾಶವನ್ನು ಪಡೆಯುವಿರಿ.

ಸಿಎ ಕೋರ್ಸ್‌ಗೆ ಪ್ರವೇಶ ಪರೀಕ್ಷೆ ಯಾವಾಗ? ಯಾವೆಲ್ಲಾ ಪಠ್ಯ ಕ್ರಮಗಳನ್ನು ಅಭ್ಯಾಸಿಸಬೇಕು?

ಸಿಎ ಪರೀಕ್ಷೆಗೆ ಸಾಮಾನ್ಯವಾಗಿ ಪ್ರತಿ ವರ್ಷದ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಆನ್‌ಲೈನ್ ಮೂಲಕ ರಿಜಿಸ್ಟ್ರೇಷನ್ ಆರಂಭವಾಗುತ್ತದೆ. ಆದರೆ ಎ ಪರೀಕ್ಷೆಗೆ ಅಭ್ಯಾಸವು ಕಠಿಣವಾಗಿರುತ್ತದೆ. ICAI ಸಂಸ್ಥೆಯು ಪಠ್ಯಕ್ರಮಕ್ಕೆ ತಕ್ಕ ಅಗತ್ಯ ಮಾಹಿತಿಗಳನ್ನು ನೀಡುತ್ತವೆ. ಇಷ್ಟಿದ್ದರೆ ಸಾಕಾಗುವುದಿಲ್ಲ, ಸಿಎ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುವ ಮೂಲಕ ಹೆಚ್ಚಿನ ತಯಾರಿಯನ್ನು ಮಾಡಬೇಕಾಗುತ್ತದೆ. ಅದರೊಂದಿಗೆ ಕಳೆದ ಕೆಲವು ವರ್ಷಗಳ ಪ್ರಶ್ನೆ ಪತ್ರಿಕೆಗಳು ಸೇರಿದಂತೆ ಇನ್ನಿತ್ತರ ಮಾಹಿತಿಯನ್ನು ಕಲೆಹಾಕಿ ಆಳವಾದ ಅಧ್ಯಯನ ಅಗತ್ಯ.

ಇದನ್ನೂ ಓದಿ: ಲೆಕ್ಕ ಪರಿಶೋಧಕರ ದಿನದಂದು ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು

ಸಿಎಯಾಗಲು ಯಾವೆಲ್ಲಾ ಪರೀಕ್ಷೆಗಳನ್ನು ಬರೆಯಬೇಕು?

  • ಮೊದಲಿಗೆ ಸಿಪಿಟಿ ಪರೀಕ್ಷೆ ಪಾಸ್ ಮಾಡಲು ಮೊದಲ ಹಂತದ ನಾಲ್ಕು ಸಬ್ಜೆಕ್ಟ್‌ಗಳನ್ನು ಪಾಸ್ ಮಾಡಲೇಬೇಕು. ಪ್ರತಿಯೊಂದು ಸಬ್ಜೆಕ್ಟ್‌ನಲ್ಲೂ ಶೇ.30 ಅಂಕ ಗಳಿಸಲೇಬೇಕು.
  • ಐಪಿಸಿಸಿ ಪರೀಕ್ಷೆ ಬರೆಯಲು ಸಿಪಿಟಿ ಪರೀಕ್ಷೆ ಪಾಸ್ ಆಗಿರಲೇಬೇಕು. ಪಿಯುಸಿ ಅಥವಾ ಪದವಿ ಮುಗಿಸಿದವರು ನೇರವಾಗಿ ಐಪಿಸಿಸಿ ಬರೆಯಬಹುದು. ಇದರಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಎಂಬ ಎರಡು ಪರೀಕ್ಷೆಗಳಿರುತ್ತವೆ. ಗ್ರೂಪ್ ಎ ನಲ್ಲಿ ನಾಲ್ಕು ವಿಷಯಗಳು ಹಾಗೂ ಗ್ರೂಪ್ ಬಿ ನಲ್ಲಿ 3 ವಿಷಯಗಳು ಇರುತ್ತವೆ. ಒಂದು ವೇಳೆ ಯಾವುದೇ ಗ್ರೂಪಿನಲ್ಲಿ ಒಂದು ಸಬ್ಜೆಕ್ಟ್ ಫೇಲಾದರೂ ಎಲ್ಲಾ ಸಬ್ಜೆಕ್ಟ್ ಗಳ ಪರೀಕ್ಷೆಯನ್ನು ಮತ್ತೆ ಬರೆಯಬೇಕು.
  • ಸಿಎ ಎಕ್ಸಾಮ್ ಪಾಸ್ ಮಾಡಲು ಆರ್ಟಿಕಲ್ ಶಿಪ್ ಮಾಡಬೇಕು. ಐಪಿಸಿಸಿ ಪರೀಕ್ಷೆ ಪಾಸ್ ಆದ ಬಳಿಕ ಪ್ರ್ಯಾಕ್ಟೀಸ್ ಮಾಡುತ್ತಿರುವ ಚಾರ್ಟರ್ಡ್ ಅಕೌಂಟೆಂಟ್ ಬಳಿ ಮೂರು ವರ್ಷಗಳ ಕಾಲ ತರಬೇತಿ ಪಡೆಯತಕ್ಕದು.
  • ಸಿಎ ಅಂತಿಮ ಪರೀಕ್ಷೆ ಪಾಸ್‌ ಮಾಡಲು ಎರಡು ಗ್ರೂಪ್‌ಗಳ ಪರೀಕ್ಷೆಗಳಿರುತ್ತದೆ. ಈ ಸಿಎ ಅಂತಿಮ ಪರೀಕ್ಷೆ ಪಾಸ್ ಮಾಡಲು ಪ್ರತಿ ವಿಷಯಗಳಲ್ಲಿ ಕನಿಷ್ಟ ಶೇ.40 ಅಂಕಗಳನ್ನು ಗಳಿಸಬೇಕು. ಒಂದು ವೇಳೆ ಈ ಪರೀಕ್ಷೆಯಲ್ಲಿ ಶೇಕಡಾವಾರು ಅಂಕ ಗಳಿಸಿದರೆ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯು ಪಾಸ್ ಆದಂತೆ ಆಗುತ್ತದೆ.

ಸಿಎ ಮಾಡಿದವರು ಯಾವೆಲ್ಲಾ ಉದ್ಯೋಗ ಪಡೆಯಬಹುದು

ಸಿಎ ಪರೀಕ್ಷೆ ಪಾಸ್ ಆದರೆ ಅಕೌಂಟೆಂಟ್, ಆಡಿಟರ್, ಇಂಟರ್ನಲ್ ಆಡಿಟರ್, ಫೈನಾನ್ಸಿಯಲ್ ರಿಪೋರ್ಟರ್, ಎಸ್ ಎ ಪಿ ಫಿಕೋ ಕನ್ಸಲ್ವೆಂಟ್ ಮತ್ತು ಟ್ಯಾಕ್ಸ್ ಕನ್ಸಲ್‌ಟಂಟ್ ಆಗಿ ಕೆಲಸ ಮಾಡಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್
ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್
ದೇವಸ್ಥಾನದಲ್ಲಿ ಶಟಗೋಪ ತಲೆ ಮೇಲೆ ಇಡುವುದರ ಮಹತ್ವ ಏನು? ಈ ವಿಡಿಯೋ ನೋಡಿ
ದೇವಸ್ಥಾನದಲ್ಲಿ ಶಟಗೋಪ ತಲೆ ಮೇಲೆ ಇಡುವುದರ ಮಹತ್ವ ಏನು? ಈ ವಿಡಿಯೋ ನೋಡಿ
ಈ ರಾಶಿಯವರು ಇಂದು ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವರು
ಈ ರಾಶಿಯವರು ಇಂದು ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವರು
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ